ಬೆಂಗಳೂರು: ಶುಕ್ರವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳಿಗೆ ಮುಜಾಹಿದ್ದಿನ್ ಹೆಸರಿನಲ್ಲಿ ಬಾಂದ್ ಬೆದರಿಕೆಯ ಇ-ಮೇಲ್ ಬಂದಿದೆ. ಕೆಲವು ಅಂತರರಾಷ್ಟ್ರೀಯ ವಿಚಾರಗಳನ್ನು ಪ್ರಸ್ತಾಪಿಸಲಾಗಿರುವ ಈ ಇ-ಮೇಲ್‍ನ ಮೂಲ ಹುಡುಕಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಬೆಂಗಳೂರಿನ ಪ್ರಮುಖ ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂದು khariijites@beeble.com ಹೆಸರಿನಲ್ಲಿ ಇ-ಮೇಲ್ ಮಾಡಲಾಗಿದೆ. ಈ ಒಂದು ಮೇಲ್‍ನಲ್ಲಿ ಅನೇಕ ವಿಚಾರಗಳನ್ನು ಪಸ್ತಾಪಿಸಲಾಗಿದೆ. ಶಾಲೆ ಮತ್ತು ಮೈದಾನಗಳಲ್ಲಿ ಸ್ಫೋಟಕ ವಸ್ತುಗಳನ್ನು ಇಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳ ಹೆಸರುಗಳನ್ನು ಉಲ್ಲೇಖಿಸಿ ಬಾಂಬ್ ಬೆದರಿಕೆ ಹಾಕಲಾಗಿದೆ.


"ಎರಡು ದಿನಗಳಲ್ಲಿ ವರದಿ ತಗೊಂಡು ಕ್ರಮ ತೆಗೆದುಕೊಳ್ಳುತ್ತೇವೆ"


‘ಜೀ ನ್ಯೂಸ್ ಕನ್ನಡ’ ತನಿಖೆಯಿಂದ ಇ-ಮೇಲ್ ಮೂಲ ಪತ್ತೆ..!


ಈಗ ಪೊಲೀಸರ ಕಣ್ಣು khariijites@beeble.com ಮೇಲೆ ನೆಟ್ಟಿದೆ. ಈ ಇ-ಮೇಲ್ ಮೂಲಕವೇ ಬೆಂಗಳೂರಿನ ಶಾಲೆಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ‘ಜೀ ನ್ಯೂಸ್ ಕನ್ನಡ’ ತನಿಖೆ ನಡೆಸಿದ್ದು, ಇ-ಮೇಲ್ ಬಂದಿರುವ ಮೂಲವನ್ನು ಪತ್ತೆ ಹಚ್ಚಿದೆ. ಹೌದು, ನಿಮ್ಮ ‘ಜೀ ಕನ್ನಡ ನ್ಯೂಸ್’ ನಡೆಸಿದ ತನಿಖೆಯಿಂದ ಈ ಅಪರಚಿತ ಇ-ಮೇಲ್ ಮೂಲ ಪತ್ತೆಯಾಗಿದೆ.


ಅಂದಹಾಗೆ ಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕುವ ಮೂಲಕ ಸಾವಿರಾರು ವಿದ್ಯಾರ್ಥಿಗಳು, ಪೋಷಕರು, ಶಾಲೆಯ ಆಡಳಿತ ಮಂಡಳಿ, ಪೊಲೀಸರು ಮತ್ತು ರಾಜಕೀಯ ನಾಯಕರಲ್ಲಿ ಆತಂಕವನ್ನುಂಟು ಮಾಡಿರುವ ಈ khariijites@beeble.com ಮೇಲ್ ಬಂದಿದ್ದು Unsecured ವೆಬ್‍ಸೈಟ್‍ನಿಂದ. ಹೌದು, ಇದನ್ನು ನೀವು ನಂಬಲೇಬೇಕು.


https://beeble.com/ ಭೇಟಿ ನೀಡಿ, Create free account ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ನಿಮಗೆ ವಿವಿಧ ರೀತಿಯ Free ಮತ್ತು Paid ಆಯ್ಕೆಗಳನ್ನು ನೀಡಲಾಗುತ್ತದೆ. ಇಲ್ಲಿ ನೀವು ಸಿಂಪಲ್ ಆಗಿ Free ಕ್ಲಿಕ್ ಮಾಡಬೇಕು.


ನಂತರ ನಿಮಗೆ ಇಷ್ಟ ಬಂದ ಹೆಸರಿನ ಮೇಲ್ ಹೆಸರನ್ನು ಟೈಪ್‍ ಮಾಡಬೇಕು. ಅಂದರೆ bond007 ರೀತಿ(ಆಗ ಅದು bond007@beeble.com ಆಗುತ್ತದೆ) ಟೈಪ್ ಮಾಡಬೇಕು. ಬಳಿಕ 2 ಬಾರಿ ಪಾಸ್‍ವರ್ಡ್ ನಮೂದಿಸಬೇಕು. ಈಗ ನಿಮಗೆ ಇಷ್ಟವಾದ display name ನಮೂದಿಸಬೇಕು. ನಂತರ Terms of serviceಗೆ agree ಮಾಡಿ Sign up ಆಗಬೇಕು. ಈಗ ನೀವು ಯಾರಿಗೆ ಬೇಕಾದರೂ ಮೇಲ್ ಮಾಡಬಹುದು. ಇದೇ ರೀತಿ ದುಷ್ಕರ್ಮಿಗಳು ಬೆಂಗಳೂರಿನ ವಿವಿಧ ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ ಮಾಡಿದ್ದಾರೆ. ಇದನ್ನು ಬೆಂಗಳೂರಿನ ಪೊಲೀಸರು ವಿಶೇಷವಾಗಿ ಗಮನಹರಿಸಬೇಕಾಗಿದೆ.  


ಇದನ್ನೂ ಓದಿ: "ಪಂಚರಾಜ್ಯಗಳ ಫಲಿತಾಂಶ ಬಿಜೆಪಿ ಪರವಾಗಿ ಬರಲಿದೆ"


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.