ಗಾಂಜಾ ಪ್ರಕರಣ: ಪಾಳು ಬಿದ್ದ ಕಟ್ಟಡದಲ್ಲಿ ಠಿಕಾಣಿ ಹೂಡಿದ್ದ 12 ಜನರ ಬಂಧನ
ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಪೊಲೀಸರಿಗೆ ಸಿಕ್ಕೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ಒಂದು ಲಕ್ಷ ಮೌಲ್ಯದ ಗಾಂಜಾ, 9 ಮೊಬೈಲ್, ಮೂರು ಬೈಕ್, ಎರಡು ಸಾವಿರ ಹಣ ಒಟ್ಟು 4.52 ಸಾವಿರ ಮೌಲ್ಯದ ಸಾಮಾಗ್ರಿ ಜಪ್ತಿ ಮಾಡಲಾಗಿದೆ.
Ganja Case: ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅರವಿಂದನಗರದ ಪಿ.ಟಿ.ಕ್ವಾಟರ್ಸ್ ನ ಪಾಳು ಬಿದ್ದ ಕಟ್ಟಡದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 12ಜನರನ್ನು ಬಂಧಿಸಿ, 1 ಕೆಜಿ 365 ಗ್ರಾಂ ಗಾಂಜಾವಶಪಡಿಸಿಕೊಳ್ಳಲಾಗಿದೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆ (Old Hubli Police Station) ಪೊಲೀಸರಿಗೆ ಸಿಕ್ಕೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ಒಂದು ಲಕ್ಷ ಮೌಲ್ಯದ ಗಾಂಜಾ (Cannabis), 2 ಲಕ್ಷ ರೂಪಾಯಿ ಮೌಲ್ಯದ 09 ಮೊಬೈಲ್ ಫೋನ್, 1.50 ಲಕ್ಷ ಮೌಲ್ಯದ 3 ಬೈಕ್, 2 ಸಾವಿರ ನಗದು ಸೇರಿದಂತೆ ಒಟ್ಟು 4.52 ಸಾವಿರ ಮೌಲ್ಯದ ಸಾಮಾಗ್ರಿ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ- ಪ್ರೇಯಸಿ ಜೊತೆ ಹೆಡ್‌ಕಾನ್ಸ್‌ಟೇಬಲ್ ಲವ್ವಿಡವ್ವಿ..! ಪತ್ನಿ ಕೈಯಲ್ಲಿ ಸಿಕ್ಕಿ ಬಿದ್ದ 'ಪೋಲಿ'ಸಪ್ಪ
ನಗರದ ವಿವಿಧ ಬಡವಾಣೆಯ ಅಭಿಷೇಕ ಹನಮಂತ, ಮಹ್ಮದಆಯಾಜ್ ಜೈನುಲಾಬುದ್ದೀನ, ಇಸ್ಮಾಯಿಲ್ ಮೆಹಬೂಬಾಲಿ, ಜಾಪರ @ ಬಾಂಬೆಜಾಫರ ಮಕ್ಕುಲ್, ಜುಬೇರಹ್ಮದ ದಾದಾಪೀರ, ಪುರಕಾನ್ ನಿಸಾರಹ್ಮದ, ಶಾನವಾಜ ಗೌಸಮೋದಿನ, ಸೋಹಿಲ್ ನಜೀರಹ್ಮದ, ಮಹ್ಮದಸಾಧೀಕ ರೀಯಾಜ, ರೋಶನ್ ಸೋಯಬ@ಬಬ್ಲೂ ಜಮೀಲಾಅಹ್ಮದ್, ಸಲೀಂ ಹಜರತಸಾಬ, ಕರೀಂ ಜಾಂಗೀರಖಾನ ಬಂಧಿತರು.
ಬುಧವಾರ ರಾತ್ರಿ 10:30ರ ಸುಮಾರಿಗೆ ಬಂದ ಮಾಹಿತಿ ಆಧರಿಸಿ ಆರೋಪಿತರನ್ನು ಬಂಧಿಸಿದ್ದು, ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ತಿಳಿಸಿದ್ದಾರೆ.
ಇದನ್ನೂ ಓದಿ- ಕಲಘಟಗಿ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ: 32 ಲಕ್ಷ ರೂ. ಮೌಲ್ಯದ ಅಕ್ರಮ ಸಾರಾಯಿ ಜಪ್ತಿ, ನಾಲ್ವರ ಬಂಧನ
ಹಳೇಹುಬ್ಬಳ್ಳಿ ಠಾಣೆ ಸಿಪಿಐ ಸುರೇಶ ಯಳ್ಳೂರ ಅವರ ತಂಡ ಆರೋಪಿಸಿ ಬಂಧಿಸಿದೆ. ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್. ಸೇರಿದಂತೆ ಇತರ ಪೊಲೀಸ್ ಸಿಬ್ಬಂದಿ ಇದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.