ಬೆಂಗಳೂರು : ಭ್ರೂಣ ಹತ್ಯೆ ಮತ್ತು‌ ಪತ್ತೆ ಪ್ರಕರಣದ ಬಳಿಕ ಮತ್ತೊಂದು ಕರಾಳ ದಂಧೆ ಬೆಳಕಿಗೆ ಬಂದಿದೆ. ತರಕಾರಿಯಂತೆ ಹಸುಗೂಸುಗಳನ್ನು ಮಾರಾಟ ಮಾಡುವ ಪಾಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದಂಧೆಕೋರರ ಈ ಕೃತ್ಯ ಜನರಲ್ಲಿ ಆತಂಕ‌ ಹೆಚ್ಚಾಗುವಂತೆ ಮಾಡಿದೆ.


COMMERCIAL BREAK
SCROLL TO CONTINUE READING

ಅದು ನವೆಂಬರ್ 24.  ಕಣ್ಣನ್ ರಾಮಸ್ವಾಮಿ, ಹೇಮಲತಾ, ಮುರುಗೇಶ್ವರಿ, ಶರಣ್ಯ ಹಾಗೂ ಮಹಾಲಕ್ಷ್ಮಿ ಈ ಐವರು ಸ್ವಿಫ್ಟ್ ಕಾರಿನಲ್ಲಿ ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ರು. ಜೊತೆಯಲ್ಲಿ 20 ದಿನದ ಹಸುಗೂಸನ್ನು ಸಹ ತಂದಿದ್ರು. ಆ ಮಗುವನ್ನು ಅರ್ ಆರ್ ನಗರದ ರಾಜರಾಜೇಶ್ವರಿ ದೇವಸ್ಥಾನದ ಮುಂದೆ ಮಾರಾಟ ಮಾಡಲು ಮುಂದಾಗಿದ್ರು. ಈ ವೇಳೆ ಸಿಸಿಬಿ ಪೊಲೀಸರು ದಿಢೀರನೆ ದಾಳಿ ಮಾಡಿ ಮಗುವನ್ನು ರಕ್ಷಿಸಿ ಐವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ವಿಚಾರಣೆ ವೇಳೆ ಇವರದು ಹಸುಗೂಸುಗಳ ಮಾರಾಟ ಜಾಲ ಅನ್ನೋದು ಬಯಲಾಗಿದೆ. ಜೊತೆಗೆ 60 ಮಕ್ಕಳನ್ನು ಇದೇ ತರ ಮಾರಾಟ ಮಾಡಿರೋದಾಗಿಯೂ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.


ಇದನ್ನೂ ಓದಿ: ನ್ಯಾಯಾಲಯದ ಮೊರೆ ಹೋಗಲು ಎಲ್ಲರಿಗೂ ಹಕ್ಕಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ


ಇನ್ನೂ ಬಂಧಿತರನ್ನು ತೀವ್ರ ವಿಚಾರಣೆ ಮಾಡಿದಾಗ ಮತ್ತೆ ಮೂವರ ಹೆಸರನ್ನು ಬಾಯಿಬಿಟ್ಟಿದ್ದಾರೆ.‌ ಇವರೆಲ್ಲರೂ 2021 ರಿಂದಲೂ ಇದೇ ದಂಧೆ ಮಾಡುತ್ತಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಮೊದಲಿಗೆ ಬಾಡಿಗೆ ತಾಯಿಯಾಗಿ ಮಕ್ಕಳನ್ನು ಕೊಡಿಸೋ ಏಜೆಂಟ್ ಗಳಾಗಿ ಕೆಲಸ ಮಾಡ್ತಾ ಇದ್ದು, 2021 ರ ಬಳಿಕ ಯಾರು ಅಬಾರ್ಷನ್ ಮಾಡಿಸೋಕೆ ಅಂತ ಆಸ್ಪತ್ರೆಗೆ ಬರ್ತಾರೆ ಅವರನ್ನ ಸಂಪರ್ಕ ಮಾಡ್ತಾ ಇದ್ರಂತೆ. ನಂತರ ಅವರಿಗೆ ಅಬಾರ್ಷನ್ ಮಾಡಿಸಬೇಡಿ, ನಾವು ನೋಡಿಕೊಳ್ತೀವಿ, ಮಗು ಆಗೋವರೆಗೂ ಖರ್ಚು ವೆಚ್ಚ ಎಲ್ಲವೂ ನಮ್ಮದೆ... ಡಿಲವರಿ ಆದ ಬಳಿಕ ಮಗುವನ್ನು ನಮಗೆ ಕೊಡಿ ಅಂತ ಮನವೊಲಿಕೆ ಮಾಡ್ತಿದ್ರು. ಹೆಣ್ಣು‌ ಮಗು ಆದ್ರೆ  2 ಲಕ್ಷ, ಗಂಡು ಮಗು ಆದ್ರೆ ತಾಯಿಗೆ 3 ಲಕ್ಷ ಕೊಡ್ತಿದ್ರು.ನಂತರ ಆ ಮಕ್ಕಳನ್ನು ಹೊರಗಡೆ 8-10 ಲಕ್ಷಕ್ಕೆ ಮಾರಾಟ ಮಾಡ್ತಾ ಇದ್ದರು.


ಇನ್ನು ಬಂಧಿತರು ಮಗು ಹುಟ್ಟಿದ ಬಳಿಕ ತಾಯಿಗೆ ಇಂತಿಷ್ಟು ಅಂತ ಹಣ ಕೊಟ್ಟು, ಆ ಮಕ್ಕಳ ಫೋಟೋಗಳನ್ನು ಅವರದ್ದೇ ಗ್ರೂಪಲ್ಲಿ ಹಾಕಿ ಶೇರ್ ಮಾಡುವಂತೆ ಹೇಳಿ ಕಿರಾಕಿಗಳಿಗೆ ಗಾಳ ಹಾಕ್ತಾ ಇದ್ರು. ನಂತರ ಮಗು ಬೇಕಾಗಿರೋರು ಸಂಪರ್ಕ ಮಾಡಿದ್ರೆ ಲಿಂಗ, ಬಣ್ಣದ ಮೇಲೆ ರೇಟ್ ಫಿಕ್ಸ್ ಮಾಡಿ ಡೀಲ್ ಮಾಡ್ತಾ ಇದ್ರು. ಹೆಣ್ಣು ಮಗು ಆದ್ರೆ 4-6 ಲಕ್ಷ, ಗಂಡು ಮಗು ಆದ್ರೆ 8-10 ಲಕ್ಷಕ್ಕೆ ಮಾರಾಟ ಮಾಡ್ತಾ ಇದ್ರು. ಇನ್ನು ಆರೋಪಿಗಳಲ್ಲಿ ಮುರುಗೇಶ್ವರಿ ತನ್ನದೇ ಮಗುವನ್ನು ಮಾರಾಟ ಮಾಡಲು ಮುಂದಾಗಿದ್ಳು ಅನ್ನೋದು ತನಿಖೆ ವೇಳೆ ಬಯಲಾಗಿದೆ.


ಇದನ್ನೂ ಓದಿ: ಕಳ್ಳ ಶಿಕ್ಷ ಬೇಡ: ಸರ್ಕಾರಿ ಶಾಲಾ ಆವರಣದಲ್ಲಿ ಪೋಷಕರ ಪ್ರತಿಭಟನೆ 


ಒಟ್ನಲ್ಲಿ ಈ ಮಕ್ಕಳ ಮಾರಾಟದ ಜಾಲದಲ್ಲಿ ಇನ್ನು ಹಲವರು ಇರೋ ಅನುಮಾನ ಪೊಲೀಸರಿಗೆ ಇದೆ.‌ಜೊತೆಗೆ ಕೆಲ ಆಸ್ಪತ್ರೆ ವೈದ್ಯರು ಇದರಲ್ಲಿ ಭಾಗಿಯಾಗಿರೋ ಅನುಮಾನ‌ ಇದ್ದು ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದೆ. ತನಿಖೆ ಬಳಿಕ ಮತ್ತಷ್ಟು ಭಯಾನಕ ವಿಚಾರಗಳು ಹೊರಬೀಳಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.