Blackmail Case: ಹನಿಟ್ರ್ಯಾಪ್ ಮಂಜುಳಾ ಮೊಬೈಲ್‌ನಲ್ಲಿ 8 ರಾಜಕಾರಣಿಗಳ ʼಆʼ ವಿಡಿಯೋಗಳು ಪತ್ತೆ..!
Honeytrap Manjula Case: ಹಲವಾರು ವರ್ಷಗಳಿಂದ ಕಾಂಗ್ರೆಸ್ ಸದಸ್ಯೆಯಾಗಿದ್ದ ಮಂಜುಳಾ ಮಾಲೀಕಯ್ಯ ಗುತ್ತೇದಾರ್ ಅವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದಳಂತೆ. ಅವರ ಕೆಲವು ಖಾಸಗಿ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಳಂತೆ. ಅವಳ ಫೋನ್‌ನಲ್ಲಿ ದೊರೆತ ಮಾಹಿತಿಯಿಂದ ಆಕೆ ಹಲವಾರು ವ್ಯಕ್ತಿಗಳನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಳು ಅನ್ನೋದು ಬಯಲಾಗಿದೆ.
Honeytrap Manjula Case: ಹನಿಟ್ರ್ಯಾಪ್ ಆರೋಪಿ ಮಂಜುಳಾ ಮೊಬೈಲ್‌ನಲ್ಲಿ 8ಕ್ಕೂ ಹೆಚ್ಚು ರಾಜಕಾರಣಿಗಳ ಖಾಸಗಿ ವಿಡಿಯೋ ಪತ್ತೆಯಾಗಿದೆ ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ. ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರನ್ನು ಹನಿಟ್ರ್ಯಾಪ್ ಮೂಲಕ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಲಪಾಡ್ ಬ್ರಿಗೇಡ್‌ನ ಕಲಬುರಗಿ ಘಟಕದ ಅಧ್ಯಕ್ಷೆ ಮಂಜುಳಾ ಪಾಟೀಲ್ ಮತ್ತು ಆಕೆಯ ಪತಿ ಶಿವರಾಜ್ ಪಾಟೀಲ್ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಹಲವಾರು ವರ್ಷಗಳಿಂದ ಕಾಂಗ್ರೆಸ್ ಸದಸ್ಯೆಯಾಗಿದ್ದ ಮಂಜುಳಾ, ಮಾಲೀಕಯ್ಯ ಗುತ್ತೇದಾರ್ ಅವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದಳಂತೆ. ಅವರ ಕೆಲವು ಖಾಸಗಿ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಳಂತೆ. ಅವಳ ಫೋನ್‌ನಲ್ಲಿ ದೊರೆತ ಮಾಹಿತಿಯಿಂದ ಆಕೆ ಹಲವಾರು ವ್ಯಕ್ತಿಗಳನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಳು ಅನ್ನೋದು ಬಯಲಾಗಿದೆ. ಮಂಜುಳಾ ಮೊಬೈಲ್‌ನಲ್ಲಿ 8 ರಾಜಕಾರಣಿಗಳ ಖಾಸಗಿ ವಿಡಿಯೋ ಪತ್ತೆಯಾಗಿದೆ.
ಇದನ್ನೂ ಓದಿ: ಅದಾನಿ ಕುರಿತು ಹಿಂಡನ್ ಬರ್ಗ್ ಸ್ಪೋಟಕ ವರದಿ; ಜಾಣ ನಡೆ ಇಟ್ಟ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ
ಅಕ್ಟೋಬರ್ 21ರಂದು ಗುತ್ತೇದಾರ್ ಪುತ್ರ ರಿತೇಶ್‌ರನ್ನು ಸಂಪರ್ಕಿಸಿದ ಮಂಜುಳಾ, ʼನಿಮ್ಮ ತಂದೆ ನನಗೆ ನಿಂದನಾತ್ಮಕ ಸಂದೇಶಗಳನ್ನು ಕಳುಹಿಸಿದ್ದಾರೆʼ ಅಂತಾ ಆರೋಪಿಸಿದ್ದಳು. ಅಲ್ಲದೇ ಖಾಸಗಿ ವಿಡಿಯೋಗಳ ಲೀಕ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಳು. ಅಲ್ಲದೇ ಈ ವಿಡಿಯೋಗಳನ್ನು ಲೀಕ್ ಮಾಡದಿರಲು 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಳಂತೆ.
ಮಂಜುಳಾ ಮತ್ತು ಶಿವರಾಜ್ ದಂಪತಿ ಅಕ್ಟೋಬರ್ 23, 24ರಂದು ವಾಟ್ಸಾಪ್ ಕರೆಗಳ ಮೂಲಕ ರಿತೇಶ್‌ಗೆ ಪದೇ ಪದೇ ಕಿರುಕುಳ ನೀಡುತ್ತಿದ್ದರಂತೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಖಾಸಗಿ ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಹೆದರಿಸಿದ್ದರು.
ಇದನ್ನೂ ಓದಿ: ಶಬರಿಮಲೆ ಯಾತ್ರಾರ್ಥಿಗಳಿಗೆ ಗುಡ್ ನ್ಯೂಸ್; ವಿಮಾನದಲ್ಲಿ ತೆಂಗಿನಕಾಯಿ ಸಾಗಿಸಲು ಅನುಮತಿ!
ಬೆಂಗಳೂರಿನ ಗರುಡಾ ಮಾಲ್ ಬಳಿ ಶನಿವಾರ ಪೊಲೀಸರು ದಂಪತಿಯನ್ನು ಬಂಧಿಸಿದ್ದರು. ಆರೋಪಿಗಳ ಬಳಿಯಿದ್ದ ಆರು ಸ್ಮಾರ್ಟ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಇದರಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮತ್ತು ಇತರ ಅಧಿಕಾರಿಗಳು ಸೇರಿದಂತೆ 8 ವ್ಯಕ್ತಿಗಳ ಖಾಸಗಿ ವಿಡಿಯೋಗಳಿರುವುದನ್ನು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ. ಈ ಬಗ್ಗೆ ಸಿಸಿಬಿ ಪೊಲೀಸರು ಉನ್ನತ ತನಿಖೆಯನ್ನು ಮುಂದುವರಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.