ಬೆಂಗಳೂರು : ಬೀಗ ಹಾಕಿದ್ದ ಮನೆ ದೋಚುತ್ತಿದ್ದ ಖತರ್ನಾಕ್ ಕಳ್ಳರನ್ನು ಬಂಧಿಸುವಲ್ಲಿ ನಗರದ ಚಂದ್ರಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ಹೊಸದಾಗಿ ಮದುವೆಯಾಗಿದ್ದ ಖದೀಮ ತನ್ನ ಹೆಂಡತಿಗೋಸ್ಕರ ಪೊಲೀಸರಿಗೆ ಶರಣಾಗಿದ್ದು ಅಚ್ಚರಿ ಮೂಡಿಸಿದೆ.


COMMERCIAL BREAK
SCROLL TO CONTINUE READING

ಹೌದು ಕಳೆದ ಕೆಲವು ದಿನಗಳ ಹಿಂದೆ ಸಿಲಿಕಾನ್‌ ಸಿಟಿಯ ಚಂದ್ರಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೀಗ ಹಾಕಿದ್ದ ಮನೆ ಕಳ್ಳತನ ನಡೆದ ಕುರಿತು ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನತ್ತಿದ ಪೊಲೀಸರು ನೇಪಾಳದ ಸುರೇಂದ್ರ ಅಲಿಯಾಸ್‌ ಗೂರ್ಖಾ ಹಾಗೂ ಗಣೇಶ್ ಅಲಿಯಾಸ್‌ ಕಡ್ಕ ಎಂಬುವವರನ್ನು ಬಂಧಿಸಿದ್ದಾರೆ.


ಇದನ್ನೂ ಓದಿ: ಪಿಬಿಎಸ್‌ ಅವರ ಜನ್ಮದಿನದ ಸವಿನೆನಪು : ಅಮರ ಗಾಯಕನ ಯಾವ ಹಾಡು ನಿಮಗಿಷ್ಟ..? 


ನೇಪಾಳದಿಂದ ಬಂದು ಕಳೆದ 12 ವರ್ಷಗಳಿಂದ ಬೆಂಗಳೂರಿನಲ್ಲಿ ಇವರು ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದರು. ಬೀಗ ಹಾಕಿದ್ದ ಮನೆಯನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಈ ಕುರಿತು ಮನೆ ಮಾಲೀಕ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಳ್ಳತನವಾದ ಮನೆ ಅಕ್ಕ ಪಕ್ಕ ಮೆನೆಯ ಸಿಟಿಟಿವಿ ಪರಿಶೀಲನೆ ನಡೆಸಿದಾಗ ಪೊಲೀಸರಿಗೆ ಸ್ಕೂಟಿ ಒಂದು ಸುಳಿವು ನೀಡಿತ್ತು. ಕಳ್ಳತನವಾಗೋದಕ್ಕೂ ಮೂರು ದಿನಗಳ ಹಿಂದೆ ಆ ಸ್ಕೂಟಿ ಮಧ್ಯರಾತ್ರಿ ವೇಳೆ ಅಲ್ಲಿ ಓಡಾಡಿರುವುದು ಕಂಡುಬಂದಿತ್ತು.


ಸ್ಕೂಟಿ ಬೆನ್ನುಬಿದ್ದ ಪೊಲೀಸರಿಗೆ ಗಣೇಶನ ಮನೆ ವಿಳಾಸ ಸಿಕ್ಕಿತ್ತು. ಗಣೇಶನ ಮನೆಯವರನ್ನ ಹಾಗೆ ಒಂದು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಹೆಂಡತಿಯನ್ನ ವಿಚಾರಣೆ ನಡೆಸಿದ ಬಗ್ಗೆ ತಿಳಿಯುತ್ತಿದ್ದಂತೆ ಪೊಲೀಸರ ಬಳಿ ಕದ್ದ ಎಲ್ಲಾ ಮಾಲುಗಳ ಸಮೇತ ಬಂದು ಶರಣಾಗುವುದಾಗಿ ತಿಳಿಸಿದ್ದ. ಸಧ್ಯ ಇಬ್ಬರು ಆರೋಪಿಗಳನ್ನ ಕದ್ದ ವಸ್ತುಗಳ ಸಮೇತ ಚಂದ್ರಾಲೇ ಔಟ್ ಪೊಲೀಸರು ಬಂಧಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.