Crime : ದರ್ಶನ್ ಮತ್ತು ಆಗಮ್ ವೇದಾಂತ್ ದುಗಾರ್ ಮಧ್ಯೆ ಗಲಾಟೆ ನಡೆದಿದೆ. ಶನಿವಾರ ಬೆಳಗಿನ ಜಾವ 2.30ಕ್ಕೆ ನಡೆದ ಗಲಾಟೆಯಲ್ಲಿ ವೈಷ್ಣವಿ ಬಿಲ್ಡರ್ಸ್ ಮಾಲೀಕ ಗೋವಿಂದರಾಜು ಪುತ್ರ ದರ್ಶನ್ ತಲೆಗೆ ಬಿಯರ್ ಬಾಟಲ್ ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಲಾಗಿದೆ ಎಂದು ದೂರು ದಾಖಲಾಗಿದೆ. ವಿಎಆರ್ ಬಿಲ್ಡರ್ಸ್ ಸಂಜಯ್ ದುಗಾರ್ ಪುತ್ರ ವೇದಾಂತ್ ದುಗಾರ್ ದರ್ಶನ್ ಕೊಲೆಗೆ ಯತ್ನಿಸಿರುವುದಾಗಿ ದೂರು ದಾಖಲಾಗಿದೆ.


COMMERCIAL BREAK
SCROLL TO CONTINUE READING

 ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದು ಆರ್ ಟಿ ನಗರ ಠಾಣೆಯಲ್ಲಿ ವೇದಾಂತ್ ದುಗಾರ್ ವಿರುದ್ಧ‌ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ವೇದಾಂತ್ ಹಲ್ಲೆ ಮಾಡಿ ಮುಂಬೈಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಮದುವೆ ಕಾರ್ಯಕ್ರಮಕ್ಕೆ ಫೋರ್ ಸೀಸನ್ ಹೋಟೆಲ್ ಗೆ ಇಬ್ಬರು ಆಗಮಿಸಿದ್ದರು. 


ಇದನ್ನೂಓದಿ-General Elections 2024: ಒಂದರ ಮೇಲೊಂದರಂತೆ ರಾಹುಲ್ ಗಾಂಧಿ ಮೇಲೆ ಆರೋಪಗಳ ಸುರಿಮಳೆಗೈದ ಅಮಿತ್ ಶಾ


ತನ್ನನ್ನು ಮಾತನಾಡಿಸಿಲ್ಲ ವೇದಾಂತ್ ದರ್ಶನ್ ಗೆ ಪ್ರಶ್ನೆ ಮಾಡಿದ್ದಾನೆ. ಅದಕ್ಕೆ ದರ್ಶನ್ ಮಾತನಾಡಿಸಲ್ಲ ಏನಿವಾಗ ಎಂದು ಹೇಳಿದ್ದಕ್ಕೆ ಕೋಪಗೊಂಡ ವೇದಾಂತ್  ನಿನ್ನ ಬಿಡಲ್ಲ ಮುಗಿಸುತ್ತೇನೆ ಎಂದು ಬಿಯರ್ ಬಾಟಲ್ ನಿಂದ ತಲೆಗೆ‌ ಹೊಡೆದು ಹಲ್ಲೆ‌ ನಡೆಸಿರುವುದಾಗಿ ಆರೋಪಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


ಇದನ್ನೂಓದಿ-Amit Shah: 'ಮುಸ್ಲಿಂ ಮೀಸಲಾತಿ ಕೊನೆಗೊಳಿಸುವುದೆ ನಮ್ಮ ಗುರಿ', ಅದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದ ಅಮಿತ್ ಶಾ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l