ಚಿಕ್ಕಬಳ್ಳಾಪುರ ASI ಮನೆಗೆ ನುಗ್ಗಿ ಶೂಟೌಟ್ ಮಾಡಿ ದರೋಡೆ ಪ್ರಕರಣ : ಆರೋಪಿಗಳ ಬಂಧನ
ಚಿಕ್ಕಬಳ್ಳಾಪುರ ಎಎಸ್ ಐ ಮನೆಗೆ ನುಗ್ಗಿ ಶೂಟೌಟ್ ಮಾಡಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 12.41 ಲಕ್ಷ ನಗದು 4.5 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ಆಭರಣಗಳ ಜಪ್ತಿ ಮಾಡಿಕೊಳ್ಳಲಾಗಿದೆ.
ಚಿಕ್ಕಬಳ್ಳಾಪುರ : ಎಎಸ್ ಐ ಮನೆಗೆ ನುಗ್ಗಿ ಶೂಟೌಟ್ ಮಾಡಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 12.41 ಲಕ್ಷ ನಗದು 4.5 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ಆಭರಣಗಳ ಜಪ್ತಿ ಮಾಡಿಕೊಳ್ಳಲಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಎಎಸ್ ಐ ನಾರಾಯಣಸ್ವಾಮಿ ಮನೆಗೆ ನುಗ್ಗಿ ಶೂಟೌಟ್ ಮಾಡಿ ದರೋಡೆ ನಡೆಸಿದ ಪ್ರಕರಣ ವನ್ನು ತೀವ್ರ ತನಿಖೆ ನಡೆಸಿ ಜಾರ್ಖಂಡ್ ನಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : Shocking: ಶಾಲಾ ಮಕ್ಕಳ ಬ್ಯಾಗ್‌ನಲ್ಲಿ ಕಾಂಡೋಮ್ & ಗರ್ಭ ನಿರೋಧಕ ಮಾತ್ರೆಗಳು ಪತ್ತೆ!
ಹೈದರ್, ಆರಿಫ್, ಹ್ಯಾರಿಸ್ ಖಾನ್, ಜಮ್ ಶೀರ್ ಹಾಗೂ ವೀರ್ ಸಿಂಗ್ ಬಂಧಿತ ಆರೋಪಿಗಳಾಗಿದ್ದಾರೆ. ಸಿನೀಮಿಯ ರೀತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ದೆಹಲಿ ಡೆಹ್ರಾಡೂನ್ ಜಾರ್ಖಂಡ್ ನಲ್ಲಿ ಆರೋಪಿಗಳನ್ನ ಹೆಡೆಮುರಿಕಟ್ಟಿದ್ದಾರೆ. ಇನ್ನೂ ಬಂಧಿತರಿಂದ 3 ನಾಡಬಂದೂಕುಗಳು, ಒಂದು ಪಿಸ್ತೂಲ್ 46 ಜೀವಂತ ಬುಲೆಟ್ ಗಳು, 12.41 ಲಕ್ಷ ರೂಪಾಯಿ ಹಣ, 3.5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು, ಒಂದು ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ, ಒಂದು ಕಾರನ್ನು ಜಪ್ತಿ ಮಾಡಿದ್ದಾರೆ.
ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸಿನೀಮಿಯ ರೀತಿಯಲ್ಲಿ ಬಂಧಿಸಿದ ಬಗ್ಗೆ ಸ್ವತಃ ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ .
ಇದನ್ನೂ ಓದಿ : ಬಿಜೆಪಿಯವರು ಪೊಳ್ಳು ಹಿಂದೂಗಳು, ನಾವೇ ನಿಜವಾದ ಹಿಂದೂಗಳು: ಯತೀಂದ್ರ ಸಿದ್ದರಾಮಯ್ಯ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.