IND vs SL: ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಿರುವ ಭಾರತ ತಂಡದ ಬಗ್ಗೆ ತೀವ್ರವಾಗಿ  ಚರ್ಚೆ ಶುರುವಾಗಿದೆ. ಅಜಿತ್ ಅಗರ್ಕರ್ ಮತ್ತು ಕೋಚ್ ಗೌತಮ್ ಗಂಭೀರ್ ನೇತೃತ್ವದ ಆಯ್ಕೆ ಸಮಿತಿಯಿಂದ ಕೆಲವು ಆಟಗಾರರಿಗೆ ಅನ್ಯಾಯವಾಗಿದೆ ಎಂದು ಟೀಕಿಸಲಾಗಿದೆ. ರನ್‌ಗಳ ಸುರಿಮಳೆಗೈದು ಎಲ್ಲರನ್ನು ಇಂಪ್ರೆಸ್  ಮಾಡಿದ್ದ ಅಭಿಷೇಕ್ ಶರ್ಮಾ ಹಾಗೂ ರುತುರಾಜ್ ಗಾಯಕ್ವಾಡ್ ನಂತಹ ಕ್ರಿಕೆಟಿಗರನ್ನು ತಂಡದಿಂದ ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ.


COMMERCIAL BREAK
SCROLL TO CONTINUE READING

ಜುಲೈ 27 ರಿಂದ ಪ್ರಾರಂಭವಾಗುವ ಲಂಕಾ ಸರಣಿಗೆ ಎಡ ಬಲ ಬ್ಯಾಟ್ಸ್‌ಮನ್‌ಗಳ ಸಂಯೋಜನೆಯೊಂದಿಗೆ ಆರಂಭಿಕರನ್ನು ಕಣಕ್ಕಿಳಿಸಲು ಆಯ್ಕೆದಾರರು ಹಾಗೂ ಕೋಚ್ ಯೋಚಿಸಿದ್ದಾರೆ ಮತ್ತು ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅವರನ್ನು ತಂಡಕ್ಕೆ ಓಪನರ್‌ಗಳನ್ನಾಗಿ ಆಯ್ಕೆ ಮಾಡಿದ್ದಾರೆ. ಆದರೆ ಅಂಕಿ-ಅಂಶಗಳ ಪ್ರಕಾರ, ಜೈಸ್ವಾಲ್ ಹಾಗು  ಅಭಿಷೇಕ್ ಜೋಡಿಯು ಜೈಸ್ವಾಲ್ ಹಾಗು ಗಿಲ್‌ಗಿಂತ ಹಿಟ್ ಕಾಂಬಿನೇಷನ್ ಎಂದು ಕರೆಯಲ್ಪಡುತ್ತದೆ, ಮಧು ಹ್ಯಾಡೆನ್-ಗಿಲ್ ಕ್ರಿಸ್ಟ್ ಹಿಟ್ ಜೋಡಿಯಂತೆ, ಈ ಇಬ್ಬರು ಎಡಗೈ ವಿಧ್ವಂಸಕ ಬ್ಯಾಟ್ಸ್‌ಮನ್‌ಗಳು.


ಇದನ್ನೂ ಓದಿ: ರೋಹಿತ್‌, ಕೊಹ್ಲಿ ನಿವೃತ್ತಿಯ ನಂತರ ಶಾಕಿಂಗ್‌ ಹೇಳಿಕೆ ಕೊಟ್ಟ ಟೀಂ ಇಂಡಿಯಾದ ಸ್ಟಾರ್‌ ವೇಗಿ..! ತಂಡಕ್ಕೆ ಗುಡ್‌ ಬೈ ಹೇಳ್ತಾರಾ ಮೊಹಮ್ಮದ್‌ ಶಮಿ..?


ಇವರಿಬ್ಬರನ್ನೂ ಟೀಂ ಇಂಡಿಯಾಕ್ಕೆ ಓಪನರ್‌ಗಳಾಗಿ ಕಳುಹಿಸಿದರೆ ಭಾರಿ ಮೊತ್ತ ಗಳಿಸುವುದು ಖಚಿತ. ಆದರೆ ಗಿಲ್ ಅವರನ್ನು ತಂಡಕ್ಕೆ ಕರೆತರುವ ಉದ್ದೇಶದಿಂದ ಅಭಿಷೇಕ್ ಕುರಿತು ಆಯ್ಕೆದಾರರ ತಂಡ ಮೊಂಡುತನ ತೋರಿದಂತಿದೆ. ಅಂಕಿಅಂಶದಲ್ಲೂ ಗಿಲ್‌ಗಿಂತ ಅಭಿಷೇಕ್ ಉತ್ತಮ. ಕಳೆದ ವರ್ಷದಿಂದ ಗಿಲ್ ಅವರ ಟಿ20 ಅಂಕಿಅಂಶಗಳು ಕಳಪೆಯಾಗಿವೆ. 


2023 ರಿಂದ, ಗಿಲ್ ಅಹಮದಾಬಾದ್ ಹೊರತುಪಡಿಸಿ ಬೇರೆ ಎಲ್ಲೂ ಉತ್ತಮ ಪ್ರದರ್ಶನ ನೀಡಲಿಲ್ಲ. ಅಹಮದಾಬಾದ್‌ನಲ್ಲಿ ಗಿಲ್ 16 ಪಂದ್ಯಗಳಲ್ಲಿ 75ರ ಸರಾಸರಿಯಲ್ಲಿ 982 ರನ್ ಗಳಿಸಿದ್ದಾರೆ. ಇನ್ನೂ ಹಾಗೆ ನೋಡೊಕೆ ಹೋದ್ರೆ ಶುಭಮನ್‌ ಗಿಲ್‌ ಅವರ ಗರಿಷ್ಠ ಸ್ಕೋರ್ 129 ಆಗಿದೆ.


ಇದನ್ನೂ ಓದಿ: ಪಾಕ್‌ ಮಾಜಿ ನಾಯಕನ ಬಾಲ್‌ ಟ್ಯಾಂಪರಿಂಗ್‌ ಹೇಳಿಕೆಗೆ ಟಕ್ಕರ್‌ ಕೊಟ್ಟ ವೇಗಿ ಮೊಹಮ್ಮದ್‌ ಶಮಿ...


ಆದರೆ ಗಿಲ್ ಅವರು ಇತರ ಸ್ಥಳಗಳಲ್ಲಿ ಆಡಿದ 32 ಪಂದ್ಯಗಳಲ್ಲಿ 27ರ ಸರಾಸರಿಯಲ್ಲಿ 839 ರನ್ ಗಳಿಸಿದರು. ಅವರು ಒಂದು ಶತಕ ಮತ್ತು ಐದು ಅರ್ಧ ಶತಕಗಳನ್ನು ಗಳಿಸಿದರು. ಪರಿಣಾಮವಾಗಿ, ಗಿಲ್ ಫ್ಲಾಟ್ ಪಿಚ್‌ಗಳಲ್ಲಿ ಮಾತ್ರ ಆಡುತ್ತಿದ್ದಾರೆ ಮತ್ತು ಇತರ ವಿಕೆಟ್‌ಗಳಲ್ಲಿ ತತ್ತರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಒಟ್ಟಾರೆಯಾಗಿ, ಗಿಲ್ 2023 ರಿಂದ 42 ರ ಸರಾಸರಿಯಲ್ಲಿ ಮತ್ತು 149 ರ ಸ್ಟ್ರೈಕ್ ರೇಟ್‌ನಲ್ಲಿ 1821 ರನ್ ಗಳಿಸಿದರು. 


ಅಭಿಷೇಕ್ ಅವರನ್ನು ಮಾಸ್ ಹಿಟ್ಟರ್ ಎಂದು ಕರೆಯುತ್ತಾರೆ. ಅವರು 41 ಇನ್ನಿಂಗ್ಸ್‌ಗಳಲ್ಲಿ 32 ರ ಸರಾಸರಿಯಲ್ಲಿ ಮತ್ತು 183 ರ ಸ್ಟ್ರೈಕ್ ರೇಟ್‌ನಲ್ಲಿ 1821 ರನ್ ಗಳಿಸಿದರು. ಈ ಸನ್‌ರೈಸರ್ಸ್ ಬ್ಯಾಟ್ಸ್‌ಮನ್ ಅವರು ಎದುರಿಸಿದ ಪ್ರತಿ 7 ಎಸೆತಗಳಲ್ಲಿ ಕನಿಷ್ಠ ಒಂದು ಸಿಕ್ಸರ್ ಮತ್ತು ಪ್ರತಿ ಮೂರು ಎಸೆತಗಳಲ್ಲಿ ಕನಿಷ್ಠ ಒಂದು ಬೌಂಡರಿ ಬಾರಿಸುತ್ತಾರೆ. ತಂಡದಲ್ಲಿ ಆಯ್ಕೆಯಾಗಿರುವ ಜೈಸ್ವಾಲ್ 14 ಎಸೆತಗಳಿಗೆ ಸರಾಸರಿ ಒಂದು ಸಿಕ್ಸರ್ ಹಾಗೂ 3 ಎಸೆತಗಳಿಗೆ ಒಂದು ಬೌಂಡರಿ ಬಾರಿಸುತ್ತಿದ್ದಾರೆ. ಜಿಂಬಾಬ್ವೆ ಪ್ರವಾಸದಲ್ಲೂ ಶತಕ ಬಾರಿಸಿದ್ದರು. ಆದರೆ ತಂಡದಲ್ಲಿ ಸ್ಥಾನ ಕಳೆದುಕೊಂಡರು.
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.