ಕೊಲೆಯಲ್ಲಿ ಅಂತ್ಯವಾದ ಸಿಪಿವೈ ಬಾವ ನಾಪತ್ತೆ ಕೇಸ್: ಹರಸಾಹಸ ಪಟ್ಟು 50 ಅಡಿ ಕಂದಕದಿಂದ ಶವ ಹೊರಕ್ಕೆ
ಹನೂರು ತಾಲೂಕಿನ ರಾಮಾಪುರದಿಂದ 6 ಕಿಮೀ ದೂರದ 50 ಅಡಿಗೂ ಅಧಿಕ ಕಂದಕದಲ್ಲಿ ಹಂತಕರು ಶವವನ್ನು ಟಾರ್ಪಾಲ್, ಬೆಡ್ ಶೀಟ್ ಹಾಕಿ ಮುಚ್ಚಿಟ್ಟಿದ್ದರು. ಬೆರಳಚ್ಚು ತಜ್ಞರು ಹಾಗೂ ಇನ್ನಿತರ ತಜ್ಞರು ಬಂದು ಸ್ಥಳ ಮಹಜರು ನಡೆಸಿ ಸಾಕ್ಷ್ಯಾಧಾರ ಕಲೆ ಹಾಕಿದ ಬಳಿಕ ಪೊಲೀಸರು ಹರಸಾಹಸ ಪಟ್ಟು ಶವವನ್ನು ಮೇಲಕ್ಕೆ ಎತ್ತಿದ್ದಾರೆ.
Crime News: ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸಿ.ಪಿ.ಯೋಗೇಶ್ವರ್ ಅವರ ಬಾವ ಮಹಾದೇವಯ್ಯ ಅವರ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ನಾಪತ್ತೆ ಕೇಸ್ ಕೊಲೆಯಲ್ಲಿ ಅಂತ್ಯವಾಗಿದೆ. ಹರಸಾಹಸ ಪಟ್ಟು 50 ಅಡಿ ಕಂದಕದಿಂದ ಸಿಪಿವೈ ಬಾವ ಮಹಾದೇವಯ್ಯ ಶವವನ್ನು ಹೊರಕ್ಕೆ ತೆಗೆಯಲಾಗಿದೆ.
ಹನೂರು ತಾಲೂಕಿನ ರಾಮಾಪುರದಿಂದ 6 ಕಿಮೀ ದೂರದ 50 ಅಡಿಗೂ ಅಧಿಕ ಕಂದಕದಲ್ಲಿ ಹಂತಕರು ಶವವನ್ನು ಟಾರ್ಪಾಲ್, ಬೆಡ್ ಶೀಟ್ ಹಾಕಿ ಮುಚ್ಚಿಟ್ಟಿದ್ದರು. ಬೆರಳಚ್ಚು ತಜ್ಞರು ಹಾಗೂ ಇನ್ನಿತರ ತಜ್ಞರು ಬಂದು ಸ್ಥಳ ಮಹಜರು ನಡೆಸಿ ಸಾಕ್ಷ್ಯಾಧಾರ ಕಲೆ ಹಾಕಿದ ಬಳಿಕ ಪೊಲೀಸರು ಹರಸಾಹಸ ಪಟ್ಟು ಶವವನ್ನು ಮೇಲಕ್ಕೆ ಎತ್ತಿದ್ದಾರೆ. ಬಿಡದಿ ಸಮೀಪದ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿಗೆ ಶವ ರವಾನೆ ಮಾಡಿ ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು ಹಾಗೂ ಪ್ರಕರಣ ದಾಖಲಾಗಿರುವುದರಿಂದ ಮುಂದಿನ ತನಿಖೆಯನ್ನು ರಾಮನಗರ ಪೊಲೀಸರೇ ಕೈಗೊಳ್ಳಲಿದ್ದಾರೆ.
ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಸಂಬಂಧಿ (ಬಾವ) ನಾಪತ್ತೆ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದು ಬಲವಾದ ಆಯುಧ ಬಳಸಿ ತಲೆಗೆ ಹೊಡೆದು 50 ಅಡಿ ಆಳದ ಕಂದಕದಲ್ಲಿ ಬಿಸಾಡಿ ಬಂದಿರುವುದು ಇದೊಂದು ಪ್ಲಾನ್ ಮರ್ಡರ್ ಎನ್ನುವುದು ಮೇಲ್ನೋಟಕ್ಕೆ ವ್ಯಕ್ತವಾಗಿದೆ.
ಇದನ್ನೂ ಓದಿ- Suicide case: 2 ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ಸಾವು!
ಚನ್ನಪಟ್ಟಣದಲ್ಲಿ ಕಿಡ್ನಾಪ್, ಕರ್ನಾಟಕದ ಗಡಿಯಲ್ಲಿ ಮರ್ಡರ್:
ಉದ್ಯಮಿ ಮಹಾದೇವಯ್ಯ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ತೋಟದ ಮನೆಯಿಂದ ಕಿಡ್ನಾಪ್ ಆಗಿದ್ದರು. ಆದರೆ, ಅವರ ಡೆಡ್ ಬಾಡಿ ಸಿಕ್ಕಿದ್ದು ಕರ್ನಾಟಕ-ತಮಿಳುನಾಡು ಗಡಿಯಾದ ಹನೂರು ತಾಲೂಕಿನ ರಾಮಾಪುರದ ನಿರ್ಜನ ಪ್ರದೇಶದಲ್ಲಿ. ಶನಿವಾರ ರಾತ್ರಿಯೇ ಹಂತಕರು ಕೊಲೆ ಮಾಡಿರುವ ಸಾಧ್ಯತೆ ದಟ್ಟವಾಗಿದ್ದು ಕೊಲೆಗೆ ಕಾರಣ ಇನ್ನೂ ನಿಗೂಢವಾಗಿಯೇ ಇದೆ.
ಮೂರು ದಿನಗಳ ಹಿಂದೆಯೇ ನಾಪತ್ತೆಯಾಗಿದ್ದ ಮಹಾದೇವಯ್ಯ ಅವರ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಭಾನುವಾರ ರಾತ್ರಿ ರಾಮಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಅವರ ಕಾರು ಪತ್ತೆಯಾಗಿತ್ತು. ಬಳಿಕ, ಅದು ಮಹಾದೇವಯ್ಯ ಅವರು ಬಳಸುತ್ತಿದ್ದ ಕಾರು ಎಂದು ಗೊತ್ತಾದ ಕೂಡಲೇ ಅಲರ್ಟ್ ಆದ ಪೊಲೀಸರು ಮಹಾದೇವಯ್ಯ ಸುಳಿವಿಗಾಗಿ ತಡಕಾಡಿದರು. ಕಾರಿನಲ್ಲಿದ್ದ ರಕ್ತದ ಕಲೆಗಳು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟರೂ ಎಲ್ಲೋ ಇರಬಹುದು ಎಂಬ ಆಶಾಭಾವನೆಯಿಂದಲೇ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್ ನಡೆಸಿದ್ದರು.
ಕಾರು ಪತ್ತೆಯಾಗುತ್ತಿದ್ದಂತೆ ಅರಣ್ಯ ಪ್ರದೇಶ, ನಿರ್ಜನ ಪ್ರದೇಶಗಳಲ್ಲಿ ತಡಕಾಡಿದ ಪೊಲೀಸರಿಗೆ 50 ಅಡಿ ಕಂದಕದಲ್ಲಿ ಬೆಡ್ ಶೀಟ್, ಟಾರ್ಪಲ್ ಮುಚ್ಚಿದ ಸ್ಥಿತಿಯಲ್ಲಿ ಮಹಾದೇವಯ್ಯ ಶವ ಪತ್ತೆಯಾಗಿದೆ. ಚಾಮರಾಜನಗರ ಪೊಲೀಸರು ಸ್ಥಳಕ್ಕೆ ಬೆರಳಚ್ಚು ತಜ್ಞರು, ವಿಧಿ ವಿಜ್ಞಾನ ಸಿಬ್ಬಂದಿ ತೆರಳಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ- ಮುಂಬೈ ಕ್ರೈಂ ಬ್ರಾಂಚ್ ಪೊಲೀಸರ ಸೋಗಿನಲ್ಲಿ ವಂಚಿಸ್ತಿದ್ದ ಆರೋಪಿಗಳ ಬಂಧನ
ಹಂತಕರ ಸುಳಿವು ಕೊಟ್ಟ ಸಿಸಿಟಿವಿ: ಸುಪಾರಿ ಹಂತಕರೆಂಬ ಗುಮಾನಿ
ಮಹಾದೇವಯ್ಯ ಕಾರು ಪತ್ತೆಯಾದ ಸ್ಥಳದ ಸಮೀಪವೇ ಪೊಲೀಸರಿಗೆ ಸಿಸಿಟಿವಿ ದೃಶ್ಯ ಸಿಕ್ಕಿದ್ದು ಮೂವರು ವ್ಯಕ್ತಿಗಳು ನಡೆದು ಹೋಗುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಓರ್ವ ಪಂಚೆ ಉಟ್ಟು ಬೀಡಿ ಸೇದುತ್ತಾ ನಡೆಯುತ್ತಿದ್ದರೆ ಇನ್ನಿಬ್ಬರು ಪ್ಯಾಂಟ್ -ಶರ್ಟ್ ಧರಿಸಿದ್ದಾರೆ.
ಶನಿವಾರ ಮುಂಜಾನೆಯ ವೀಡಿಯೋ ಇದಾಗಿದ್ದು ಖಾಸಗಿ ಬಸ್ ನಲ್ಲಿ ಕೊಳ್ಳೇಗಾಲದ ಕಡೆ ಮೂವರು ತೆರಳಿರುವುದು ಖಚಿತವಾಗಿದೆ. ಮೇಲ್ನೋಟಕ್ಕೆ ಸುಪಾರಿ ಹಂತಕರಾಗಿರುವ ಶಂಕೆ ವ್ಯಕ್ತವಾಗಿದೆ.
ಒಟ್ಟಿನಲ್ಲಿ ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯನ್ನೇ ಕಿಡ್ನಾಪ್ ಮಾಡಿ ಕೊಂದು ಬಿಸಾಡಿರುವುದು ಸದ್ಯ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ, ಪೊಲೀಸರು ಯಾವ ರೀತಿ ಈ ಪ್ರಕರಣ ಬೇಧಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.