BBMP ಚೀಫ್ ಇಂಜಿನಿಯರ್ ಅಂತ ಹೇಳ್ಕೊಂಡು ಓಡಾಡ್ತಿದ್ದ ಆರೋಪಿ ಅಂದರ್!
ತಾನು ಬಿಬಿಎಂಪಿ ಚೀಫ್ ಇಂಜಿನಿಯರ್ ಅಂದ್ಕೊಂಡೇ ಸಾಕಷ್ಟು ಸರ್ಕಾರಿ ಅಧಿಕಾರಿಗಳಿಗೆ ಆರೋಪಿ ಪರಮೇಶ್ ಮೋಸ ಮಾಡಿದ್ದಾನೆ.
ಬೆಂಗಳೂರು: ಬಿಬಿಎಂಪಿ ಚೀಫ್ ಇಂಜಿನಿಯರ್ ಅಂತ ಹೇಳ್ಕೊಂಡು ಓಡಾಡ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಬೆಂಗಳೂರಿನ ಹೈಗ್ರೌಂಡ್ ಪೊಲೀಸರು ಬೀದರ್ ಮೂಲದ ಪರಮೇಶ್ ಎಂಬಾತನನ್ನು ಅರೆಸ್ಟ್ ಮಾಡಿದ್ದಾರೆ.
ಆರೋಪಿ ಪರಮೇಶ್ ಸಿಎಂ ಬಸವರಾಜ್ ಬೊಮ್ಮಾಯಿಯವರ ಕಚೇರಿಗೆ ಆರೋಪಿ ಏಕಾಏಕಿ ನುಗ್ಗಿದ್ದ. ಈ ವೇಳೆ ಸೆಕ್ಯುರಿಟಿಗೆ ನೇಮಿಸಿದ್ದ ಪೊಲೀಸ್ ಸಿಬ್ಬಂದಿ ತಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಆರೋಪಿ ಪರಮೇಶ್ ತಾನು ಬಿಬಿಎಂಪಿ ಚೀಫ್ ಇಂಜಿನಿಯರ್, ಸಿಎಂ ಆಪ್ತ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಒಳಗೆ ಕರೆದಿದ್ದಾರೆ. ನನ್ನನ್ನ ಸಿಎಂ ಪರ್ಸನಲ್ ಸೆಕ್ರೆಟರಿ ಪೋಸ್ಟ್ ಗೆ ನೇಮಿಸಲಾಗಿದೆ. ಹೀಗೆ ಬೇಕಾಬಿಟ್ಟಿ ಮಾತನಾಡಿದ್ದ.
ಇದನ್ನೂ ಓದಿ: ಅಥಣಿಯಲ್ಲಿ ಭೀಕರ ಅಪಘಾತ.. ಶಾಲಾ ಬಸ್ - ಗೂಡ್ಸ್ ವಾಹನ ನಡುವೆ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು
ಆರೋಪಿಯ ಮಾತುಗಳಿಂದ ಅನುಮಾನಗೊಂಡ ಪೊಲೀಸರು ಈ ಬಗ್ಗೆ ವಿಚಾರಣೆ ಕೈಗೊಂಡಿದ್ದರು. ಈ ವೇಳೆ ಆರೋಪಿ ವಂಚಕ ಎಂಬ ಮಾಹಿತಿ ತಿಳಿದುಬಂದಿತ್ತು. ಈ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ಪರಮೇಶ್‍ನ ಮೊಬೈಲ್‍ನಲ್ಲಿ ಸಾಕಷ್ಟು ಮಾಹಿತಿಗಳು ಹೊರಬಿದ್ದಿದ್ದವು.
ತಾನು ಬಿಬಿಎಂಪಿ ಚೀಫ್ ಇಂಜಿನಿಯರ್ ಅಂದ್ಕೊಂಡೇ ಸಾಕಷ್ಟು ಸರ್ಕಾರಿ ಅಧಿಕಾರಿಗಳಿಗೆ ಆರೋಪಿ ಪರಮೇಶ್ ಮೋಸ ಮಾಡಿದ್ದಾನೆ. ಅದರಲ್ಲೂ ಸರ್ಕಾರಿ ಇಲಾಖೆಯಲ್ಲಿರುವ ಮಹಿಳಾ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಿಕೊಂಡು ವಂಚಿಸುತ್ತಿದ್ದ. ರಾಜಕಾರಣಿಗಳ ಜೊತೆ ಫೋಟೋ ತೆಗೆಸಿಕೊಂಡು ವಂಚಿಸ್ತಿದ್ದನೆಂದು ವಿಚಾರಣೆ ವೇಳೆ ತಿಳಿದುಬಂದಿದೆ. ನನಗೆ ಎಲ್ಲಾ ರಾಜಕಾರಣಿಗಳು ಪರಿಚಯವಿದೆ, ನಿಮಗೆ ಟ್ರಾನ್ಪರ್ ಮಾಡಿಕೊಡ್ತೀನಿ, ಟೆಂಡರ್ ಕೊಡಿಸ್ತೀನಿ ಅಂತಾ ಆರೋಪಿ ಲಕ್ಷ ಲಕ್ಷ ಹಣ ಸುಲಿಗೆ ಮಾಡಿರುವುದು ತಿಳಿದುಬಂದಿದೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.
ಇದನ್ನೂ ಓದಿ: 40% ಸರ್ಕಾರದ ಸಚಿವರನ್ನು ಸಿನೆಮಾ ಥಿಯೇಟರ್‌ನಲ್ಲಿ ಹುಡುಕಿದ್ರೆ ಸಿಗ್ತಾರೆ!: ಕಾಂಗ್ರೆಸ್
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.