ಕಿರಿಮಗನ ಲವ್ ಸ್ಟೋರಿ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ..!
ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಸುದ್ದಿ ತಿಳಿದು ಇಡೀ ಗ್ರಾಮದ ಜನತೆಯೇ ಬಿಚ್ಚಿಬಿದ್ದಿದ್ದಾರೆ. ಸುತ್ತಮುತ್ತಲಿನ ಗ್ರಾಮಸ್ಥರಿಗೆ ಇದರಿಂದ ಶಾಕ್ ಆಗಿದೆ. ವಿಷಯ ತಿಳಿದು ಸ್ಥಳಕ್ಕೆ ಪೋಲೀಸರ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಹಾವೇರಿ: ಕಿರಿಮಗನ ಲವ್ ಸ್ಟೋರಿ ಹಿನ್ನಲೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಭಾರತಿ (38), ಅವರ ಪುತ್ರ ಕಿರಣ್ (24) ಮತ್ತು ಸೊಸೆ ಸೌಜನ್ಯ (20) ಮೃತ ದುರ್ದೈವಿಗಳು.
ಹಾವೇರಿ ತಾಲೂಕಿನ ಅಗಡಿ ಗ್ರಾಮದಲ್ಲಿ ತಾಯಿ, ಮಗ ಮತ್ತು ಸೊಸೆ ಸಾವಿಗೆ ಶರಣಾಗಿದ್ದಾರೆ. ಮೃತ ಭಾರತಿಯವರ ಕಿರಿಮಗನ ಲವ್ ಸ್ಟೋರಿ ಹಿನ್ನಲೆ ಅವಮಾನ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ : ಮಧ್ಯಂತರ ವರದಿ ಬಗ್ಗೆ ಚರ್ಚಿಸಿ ಮುಂದಿನ ಕ್ರಮ : ಸಿಎಂ
ಕಿರಿ ಮಗ ಅರುಣ್, ಗೌರಮ್ಮ ಎಂಬ ಯುವತಿಯನ್ನು ಲವ್ ಮಾಡಿ ಮದುವೆಯಾಗಿದ್ದ. ಈ ಕಾರಣಕ್ಕೆ ಊರಿನಲ್ಲಿ ಗೌರಮ್ಮನ ಪೋಷಕರು ಮೃತರನ್ನು ಹೊಡೆದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.
ನಿಮ್ಮ ಮಗ ನಮ್ಮ ಹುಡುಗಿಯನ್ನು ಓಡಿಸಿಕೊಂಡು ಹೋಗಿದ್ದಾನೆಂದು ಮೃತ ಭಾರತಿ ಮತ್ತು ಅವರ ಕುಟುಂಬಸ್ಥರಿಗೆ ಅರುಣ್ ಮದುವೆಯಾಗಿದ್ದ ಗೌರಮ್ಮನ ಪೋಷಕರು ಚಿತ್ರಹಿಂಸೆ ನೀಡಿದ್ದರಂತೆ. ಅಗಡಿ ಗ್ರಾಮಕ್ಕೆ ಬಂದು ಹೊಡೆದಿದ್ದಕ್ಕೆ ಮೃತರು ಅವಮಾನಕ್ಕೀಡಾಗಿದ್ದರು. ಈ ಕಾರಣದಿಂದಲೇ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೃತರ ಸಂಬಂಧಿ 'ಜೀ ಕನ್ನಡ ನ್ಯೂಸ್'ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಬ್ಲಾಕ್ ಮೇಲ್ ತಂತ್ರ ಯಶಸ್ವಿ; ಈಶ್ವರಪ್ಪ-ಜಾರಕಿಹೊಳಿ ಸದನಕ್ಕೆ ಹಾಜರು: ಸಚಿವ ಸ್ಥಾನ ಪ್ರತಿಷ್ಠೆ ಅಷ್ಟೇ!
ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಸುದ್ದಿ ತಿಳಿದು ಇಡೀ ಗ್ರಾಮದ ಜನತೆಯೇ ಬಿಚ್ಚಿಬಿದ್ದಿದ್ದಾರೆ. ಸುತ್ತಮುತ್ತಲಿನ ಗ್ರಾಮಸ್ಥರಿಗೆ ಇದರಿಂದ ಶಾಕ್ ಆಗಿದೆ. ವಿಷಯ ತಿಳಿದು ಸ್ಥಳಕ್ಕೆ ಪೋಲೀಸರ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹಾವೇರಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.