Ramanagar : ರಾಮನಗರ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಆರನೇ ತರಗತಿ ವಿದ್ಯಾರ್ಥಿನಿಯ ನಾಪತ್ತೆ ಕೇಸ್‌ಗೆ ದೊಡ್ಡ ತಿರುವು ದೊರಕಿದೆ. ಮಲತಂದೆಯ ಲೈಂಗಿಕ ದೌರ್ಜನ್ಯ ತಾಳಲಾರದೇ ವಿದ್ಯಾರ್ಥಿನಿ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದಳು. ಈ ವಿಚಾರ ಈಗ ಬೆಳಕಿಗೆ ಬಂದಿದ್ದು, ತಾಲೂಕಿನ ಜನರು ಬೆಚ್ಚಿಬಿದ್ದಿದ್ದಾರೆ. 


COMMERCIAL BREAK
SCROLL TO CONTINUE READING

ಮಲ ತಂದೆಯ ಕಿರುಕುಳ ತಾಳಲಾರದೇ ಬಾಲಕಿಯು ಶಾಲೆಯಿಂದ ಮನೆಗೆ ಹೋಗುವುದರ ಬದಲು ಕೆಎಸ್‌ಆರ್‌ಟಿಸಿ ಹತ್ತಿ ಬೆಂಗಳೂರಿಗೆ ತೆರಳಿದ್ದಾಳೆ. ಇನ್ನು ಈ ದುಷ್ಕೃತ್ಯ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


ಆರೋಪಿ ಮೂಲತಃ ತಮಿಳುನಾಡಿನವನಾಗಿದ್ದು, ಬಾಲಕಿಯ ತಾಯಿ ಆಂಧ್ರಪ್ರದೇಶದವರು. ಇತ್ತೀಚೆಗೆ ರಾಮನಗರ ತಾಲ್ಲೂಕಿಗೆ ಆಗಮಿಸಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಇವರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಬಾಲೆಯ ತಾಯಿಗೆ ಮೂರನೇ ಗಂಡನಾಗಿದ್ದ ಆರೋಪಿ, ಪತ್ನಿ ಮೆನಯಲ್ಲಿ ಇಲ್ಲದಿದ್ದಾಗ ಬಾಲಕಿಗೆ ಲೈಗಿಂಕ ಕಿರುಕುಳ ಕೊಟ್ಟಿದ್ದಾನೆ ಎನ್ನುವುದು ಬೆಳಕಿಗೆ ಬಂದಿದೆ. 


ಇದನ್ನೂ ಓದಿ-Kalaburgi News: ಮೊಹರಂ ಹಬ್ಬದ ವೇಳೆ ಎರಡು ಕುಟುಂಬಗಳ ನಡುವೆ ಕಲ್ಲು ತೂರಾಟ


ರಾಮನಗರದಲ್ಲಿ ನೆಲೆಸಿದಾಗಲೂ ಆ ದುಷ್ಕೃತ್ಯವನ್ನು ಮುಂದುವರೆಸಿದ್ದ. ಇದೇ ಕಾರಣಕ್ಕೆ ಬಾಲಕಿ ಶಾಲೆ ಮುಗಿಸಿಕೊಂಡು ಮನೆಗೆ ಹೋಗದೇ ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಕೋಣನಕುಂಟೆ ಶಾಲೆಗೆ ಹೋಗಿದ್ದಳು. ರಾತ್ರಿಯಾದರೂ ಬಾಲಕಿ ಮನೆಗೆ ಬರದೇ ಇರುವುದನ್ನು ನೋಡಿ ಗಾಬರಿಗೊಂಡ ತಂದೆ ತಾಯಿ ಇಬ್ಬರೂ ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಿದ್ದರು.


ಇನ್ನು ಈ ಕುರಿತು ಬಾಲಕಿ ಓದುತ್ತಿದ್ದ ಶಾಲೆಯಲ್ಲಿ ವಿಚಾರಿಸಿದ ಪೊಲೀಸರು ಆಕೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಕೋಣನಕುಂಟೆಯ ಶಾಲೆಯಲ್ಲಿ ಶಿಕ್ಷಕಿಯನ್ನು ಭೇಟಿ ಮಾಡಿದ್ದ ಬಾಲಕಿ, ತಂದೆ ನೀಡುತ್ತಿದ್ದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಳು. ಅವರ ಮಾರ್ಗದರ್ಶನದಂತಯೇ ಬಾಲಕಿ ಮಕ್ಕಳ ರಕ್ಷಣಾ ಘಟಕದಲ್ಲಿ ದೂರು ದಾಖಲಿಸಿದ್ದಳು. 


ಈ ಕುರಿತು ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ತಂದೆಯನ್ನು ಹುಡುಕಿಕೊಂಡು ತಾಲ್ಲೂಕಿಗೆ ಬಂದಿದ್ದು, ಬಾಲಕಿ ತಮ್ಮ ವಶದಲ್ಲಿರುವ ಕುರಿತು ತಿಳಿಸಿದರು ಎಂದು ಹೇಳಿದ್ದಾರೆ. ನಂತರ ರಾಮನಗರ ಪೊಲೀಸರು ತಮ್ಮ ವಶದಲ್ಲಿದ್ದ ತಂದೆಯನ್ನು ಕೊಣನಕುಂಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.


ಇದನ್ನೂ ಓದಿ-Kalaburgi News: ಮೊಹರಂ ಹಬ್ಬದ ವೇಳೆ ಎರಡು ಕುಟುಂಬಗಳ ನಡುವೆ ಕಲ್ಲು ತೂರಾಟ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.