ಬೆಂಗಳೂರು: ಇಂದಿನ ಹೈಟೆಕ್ ಜಮಾನದಲ್ಲಿ ಟೆಕ್ನಾಲಜಿ ಹೆಚ್ಚು ಬಳಕೆಯಾಗುತ್ತಿದ್ದಂತೆ ದುರ್ಬಳಕೆ ಮಾಡುವವರ ಸಂಖ್ಯೆ ಸಹ ಜಾಸ್ತಿಯಾಗಿದೆ.  ಸೈಬರ್ ಕಳ್ಳರು ಬೇರೆ ಬೇರೆ ಐಡಿಯಾ ಬಳಸಿ ಹಣ ಎಗರಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ 7 ವರ್ಷಗಳಲ್ಲಿ ಸಿಲಿಕಾನ್ ಸಿಟಿಯಲ್ಲಿ 50 ಸಾವಿರಕ್ಕಿಂತ ಹೆಚ್ಚು ಸೈಬರ್ ಪ್ರಕರಣಗಳು ದಾಖಲಾಗಿವೆ. ಹಣಕಾಸಿನ ವ್ಯವಹಾರ ಬಹುತೇಕ ಡಿಜಿಟಲ್ ರೂಪದಲ್ಲಿ ನಡೆಯುತ್ತಿದೆ. ಡೆಬಿಟ್ ಕಾರ್ಡ್, ಒಟಿಪಿ, ಬಹುಮಾನ ಹೀಗೆ ಆಸೆ ತೋರಿಸಿ ಕೋಟ್ಯಾಂತರ ರೂ. ಹಣವನ್ನು ಸೈಬರ್ ಖದೀಮರು ಲೂಟಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಆನ್‍ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗಿದ್ದರಿಂದ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ 2017ರ ಮಾರ್ಚ್‍ನಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಓಪನ್ ಮಾಡಲಾಯಿತು. ಸಾಲದು ಅಂತಾ ಕೆಲ ವರ್ಷಗಳಲ್ಲಿ ವಲಯಕ್ಕೊಂದರಂತೆ 8 ಸೈಬರ್, ಆರ್ಥಿಕ, ನಾರ್ಕೋಟಿಕ್ಸ್ ವಿಭಾಗದ   ಪೊಲೀಸ್ ಠಾಣೆಗಳನ್ನು ತರೆದಾಗ ದೂರುಗಳ ಸುರಿಮಳೆಯೇ ಹರಿದುಬಂತು. ಅಂಕಿ-ಅಂಶಗಳನ್ನು ಗಮನಿಸಿದರೆ ಕಳೆದ 7 ವರ್ಷಗಳಲ್ಲಿ 50,027 ಪ್ರಕರಣಗಳು ದಾಖಲಾಗಿದ್ದು, ಡಿಜಿಟಲ್ ಪ್ರಪಂಚದಲ್ಲಿ ಸೈಬರ್ ಕ್ರೈಂ ಮಾಮೂಲಿಯಂತೆ ಕಾಣುತ್ತಿದೆ.‌ 


ಇದನ್ನೂ ಓದಿ: 10 ಕೋಟಿ ರೂ. ಲಾಟರಿ ಗೆದ್ದ ಮಹಿಳಾ ಪೌರಕಾರ್ಮಿಕರು!


2017ರಲ್ಲಿ 2,742 ಪ್ರಕರಣಗಳು ದಾಖಲಾದರೆ, 2018ರಲ್ಲಿ 5,252, 2019ರಲ್ಲಿ ದಾಖಲೆಯ 10,553 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ 9,940 ಕೇಸ್ ದಾಖಲಾದರೆ, 2023 ಜೂನ್ ಅಂತ್ಯದವರೆಗೆ ನಗರದಲ್ಲಿ 6,226 ಪ್ರಕರಣಗಳು ರಿಜಿಸ್ಟರ್ ಆಗಿವೆ.


ಡೆಬಿಟ್ / ಕ್ರೆಡಿಟ್ ಕಾರ್ಡ್ ಹೆಸರಿನಲ್ಲಿ ವಂಚನೆ ಪ್ರಕರಣಗಳು ಅಧಿಕ


ಕಳೆದ 7 ವರ್ಷಗಳಲ್ಲಿ ದಾಖಲಾಗಿರುವ  ಪ್ರಕರಣಗಳಲ್ಲಿ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಹೆಸರಿನಲ್ಲಿ ಅತಿಹೆಚ್ಚು ಅಂದರೆ 20,662 ಪ್ರಕರಣಗಳು ದಾಖಲಾಗಿವೆ. ಜನರಿಗೆ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಹೆಸರಲ್ಲಿ ಬ್ಯಾಂಕ್ ಅಧಿಕಾರಿ ರೀತಿ ಕರೆ ಮಾಡಿ ಖಾತೆದಾರರ ಪಾಸ್ ವರ್ಡ್, ಒಟಿಪಿ ಸೇರಿದಂತೆ ವೈಯಕ್ತಿಕ ವಿವರ ಸಂಗ್ರಹಿಸಿ ಹಣ ಗುಳುಂ ಮಾಡಲಾಗುತ್ತಿದೆ. 2022ರಲ್ಲಿ 4,252 ಕೇಸ್ ದಾಖಲಾದರೆ ಈ ವರ್ಷ ಮೊದಲ 5 ತಿಂಗಳಲ್ಲಿ 1,872 ಪ್ರಕರಣಗಳು ದಾಖಲಾಗಿವೆ. ಮುಂಗಡವಾಗಿ ಉಚಿತ ಗಿಫ್ಟ್ ನೀಡುವ ಸೋಗಿನಲ್ಲಿ ಸಾರ್ವಜನಿಕರನ್ನು ಯಾಮಾರಿಸಿ ಪ್ರಕರಣ ಹೆಚ್ಚಾಗಿದ್ದು, 7 ವರ್ಷಗಳಲ್ಲಿ 9,198 ಕೇಸ್ ದಾಖಲಾಗಿವೆ. ಕಾರ್ಡ್ ಸ್ಕಿಮ್ಮಿಂಗ್ (5,012), ಉದ್ಯೋಗ ವಂಚನೆ (4,453) ಸೋಷಿಯಲ್ ಮೀಡಿಯಾ ಮುಖಾಂತರ ವಂಚನೆಯ 2,378 ಪ್ರಕರಣಗಳು ದಾಖಲಾಗಿವೆ.


ಯಾವ ವರ್ಷ ಎಷ್ಟು ಪ್ರಕರಣಗಳು!


2017- 2,742


2018- 5,252


2019-10,553


2020- 8,892


2021-6,422


2022-9,940


2023-6,226 (ಮೇ ಅಂತ್ಯಕ್ಕೆ)


ಇದನ್ನೂ ಓದಿ: Crime : ಮಗಳ ಮೇಲೆ ಲೈಗಿಂಕ ದೌರ್ಜನ್ಯವೆಸಗಿದ ತಂದೆ..ಶಿಕ್ಷಕಿಗೆ ನೋವು ಹೇಳಿಕೊಂಡ ಬಾಲಕಿ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.