Davanagere News: 31.34 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ 6 ಜನ ಕಳ್ಳರ ಬಂಧನ
ನಗರದ ವಿದ್ಯಾನಗರವೊಂದರಲ್ಲಿ ಮನೆ ಬಾಗಿಲು ಮುರಿದು 31.34 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ 6 ಜನ ಕಳ್ಳರ ಬಂಧಿಸುವಲ್ಲಿ ದಾವಣಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.ಕಳ್ಳರಿಂದ 23.35 ಲಕ್ಷ ಚಿನ್ನಾಭರಣ, 60 ಸಾವಿರ ಮೌಲ್ಯದ ಬೆಳ್ಳಿ ಆಭರಣ, ಎರಡು ಬೈಕ್ ಗಳ ಜಪ್ತಿ ಮಾಡಿದ್ದಾರೆ.
ದಾವಣಗೆರೆ: ನಗರದ ವಿದ್ಯಾನಗರವೊಂದರಲ್ಲಿ ಮನೆ ಬಾಗಿಲು ಮುರಿದು 31.34 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ 6 ಜನ ಕಳ್ಳರ ಬಂಧಿಸುವಲ್ಲಿ ದಾವಣಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.ಕಳ್ಳರಿಂದ 23.35 ಲಕ್ಷ ಚಿನ್ನಾಭರಣ, 60 ಸಾವಿರ ಮೌಲ್ಯದ ಬೆಳ್ಳಿ ಆಭರಣ, ಎರಡು ಬೈಕ್ ಗಳ ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ: ಬಸದಿಯಿಂದ ನಾಪತ್ತೆಯಾಗಿದ್ದ ʼಜೈನ ಮುನಿʼ ಬರ್ಬರ ಹತ್ಯೆ..!
ಈ ಘಟನೆ ಕುರಿತಾಗಿ ನಗರದ ವಿದ್ಯಾನಗರದಲ್ಲಿ ದೂರು ಬಂದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಿ ಪೊಲೀಸರು ರಾಣೆಬೆನ್ನೂರಿನ ಶಿವರಾಜ್,ಮಾರುತಿ,ಸುನೀಲ್,ಮನೋಜ್, ಅಭಿಷೇಕ, ಮಾಲತೇಶ್ ಎನ್ನುವವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಇದನ್ನೂ ಓದಿ: ಕಿತ್ತೂರು ಕರ್ನಾಟಕ ಭಾಗದ ಪ್ರವಾಸಿ ತಾಣಗಳ ಅಭಿವೃದ್ಧಿ
ಕಳ್ಳತನದ ಘಟನೆಯು ದಾವಣಗೆರೆ ಹೊರಭಾಗದ ಡಾಲರ್ಸ್ ಕಾಲೋನಿಯಲ್ಲಿ ವಾಸವಾಗಿದ್ದ ತಿಪ್ಪೇಸ್ವಾಮಿ ಎನ್ನುವವರ ಮನೆಯಲ್ಲಿ ನಡೆದಿತ್ತು.ಅವರು ಜೂನ್ 3 ರಂದು ಬೆಂಗಳೂರಿಗೆ ತೆರಳಿದ್ದರು ಎನ್ನಲಾಗಿದೆ.ಯಾರೂ ಇಲ್ಲದ ಸಮಯವನ್ನು ಬಳಿಸಿಕೊಂಡು ಕಳ್ಳರು ಮನೆಯಲ್ಲಿ ಕಳ್ಳತನ ಮಾಡಿದ್ದರು.
ಜೂನ್ 4 ರಂದು ಅವರು ಮನೆಗೆ ವಾಪಸ್ ಬಂದು ನೋಡಿದಾಗ ಕಳ್ಳರು ಮನೆ ಬಾಗಿಲು ಮುರಿದು ಚಿನ್ನಾಭರಣ ಕದ್ದು ಪರಾರಿಯಾಗಿದ್ದರು.ಇದಾದ ಬೆನ್ನಲ್ಲೇ ಈ ಬಗ್ಗೆ ತಿಪ್ಪೇಸ್ವಾಮಿ ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈಗ ಒಂದು ತಿಂಗಳಲ್ಲಿ ಕಾರ್ಯಾಚರಣೆ ನಡೆಸಿ ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.