ವಿಧಾನಸೌಧದ ಆಡಳಿತ ಕೇಂದ್ರ ಎಂಎಸ್ ಬಿಲ್ಡಿಂಗ್ ಸಂಪ್ನಲ್ಲಿ ಶವಪತ್ತೆ
ವಿಧಾನಸೌಧದ ಆಡಳಿತ ಕೇಂದ್ರ ಎಂಎಸ್ ಬಿಲ್ಡಿಂಗನ ಸಂಪ್ ನಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಸಾವನ್ನಪ್ಪಿ ಎರಡು, ಮೂರು ದಿನಗಳಾಗಿರಬಹುದು ಎನ್ನಲಾಗಿದೆ.
ಬೆಂಗಳೂರು : ವಿಧಾನಸೌಧದ ಆಡಳಿತ ಕೇಂದ್ರ ಎಂಎಸ್ ಬಿಲ್ಡಿಂಗನ ಸಂಪ್ ನಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಸಾವನ್ನಪ್ಪಿ ಎರಡು, ಮೂರು ದಿನಗಳಾಗಿರಬಹುದು ಎನ್ನಲಾಗಿದೆ. ಕಟ್ಟಡದ ಸಂಪ್ ನಲ್ಲಿ ಶವ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Surathkal Fazil murder case : ಫಾಝಿಲ್ ಕೊಲೆ ಪ್ರಕರಣ : ಮತ್ತೋರ್ವ ಆರೋಪಿಯ ಬಂಧನ
ಕಳೆದ ಎರಡು ದಿನಗಳಿಂದ ಇದೇ ನೀರನ್ನು ಎಂಎಸ್ ಬಿಲ್ಡಿಂಗ್, ಲೋಕಾಯುಕ್ತ ಸೇರಿದಂತೆ ಮತ್ತೆ ಕೆಲವು ಕಟ್ಟಡದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಬಳಸಿದ್ದಾರೆ. ಬಹುಮಹಡಿ ಕಟ್ಟಡದಲ್ಲಿನ ವಾಟರ್ ಟ್ಯಾಂಕ್‌ನಲ್ಲಿ ಈ ಅಪರಿಚಿತ ಶವ ಪತ್ತೆಯಾಗಿದ್ದು, ಎರಡು ದಿನಗಳ ನಂತರ ವಿಷಯ ತಿಳಿದು ಬಂದಿದೆ.
ಈ ಬಗ್ಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಯಾರಾದರೂ ನೌಕರರಿರಬಹುದೇನೋ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ನೌಕರ ವರ್ಗದಲ್ಲಿ ಯಾರಾದರೂ ಎರಡು ದಿನಗಳಿಂದ ನಾಪತ್ತೆಯಾಗಿದ್ದಲ್ಲಿ, ದಯಮಾಡಿ ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರಾಜ್ಯದ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ಮತ್ತೆ 142 ಕೋಟಿ ವಿಶೇಷ ಅನುದಾನ: ಸಚಿವೆ ಶಶಿಕಲಾ ಜೊಲ್ಲೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.