ಚಿಕ್ಕೋಡಿ: ಹೆದ್ದಾರಿಯಲ್ಲಿ ಲಾರಿಗೆ ಅಡ್ಡ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಬ್ಲ್ಯಾಕ್ ಮೇಲ್ ಪತ್ರಕರ್ತರನ್ನು  ಯಮಕನಮರಡಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಬೆಳಗಾವಿ ಜಿಲ್ಲೆಯ ಕಿರಣ ಗಾಯಕವಾಡ್, ಸಚೀನ ಕಾಂಬಳೆ, ಸಂತೋಷ ದೊಡ್ಡಮನಿ, ದಾದು ವಿಶ್ವನಾಥ ಲೋಕಂಡೆ ಬಂಧಿತ ನಕಲಿ ಪತ್ರಕರ್ತರು. ಬಂಧಿತರು ಹುಕ್ಕೇರಿ ತಾಲೂಕಿನ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನದಿಗುಡಿಕ್ಷೇತ್ರ ಗ್ರಾಮದ ಶಿವಾನಂದ ಹುಕ್ಕೇರಿ ಎಂಬುವವರ ಲಾರಿ ಅಡ್ಡಗಟ್ಟಿ ಬೆದರಿಕೆ ಹಾಕಿ ಹಣ ಸುಲಿಗೆಗೆ ಪ್ರಯತ್ನಿಸಿದ್ದರು.


ಇದನ್ನೂ ಓದಿ: 'ನಿಮ್ಮ ಸರ್ಕಾರ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ ಎಂದು ನಿಮಗೂ ಗೊತ್ತಿದೆ'


ಲಾರಿಯಲ್ಲಿ ಜೋಳದ ಪಿಡ್ಸ್ ಲೋಡ್ ಮಾಡಿಕೊಂಡು ಹೋಗುತ್ತಿದ್ದಾಗ ಹೆದ್ದಾರಿಯಲ್ಲಿ ಅಡ್ಡಗಟ್ಟಿದ್ದ ಆರೋಪಿಗಳು ನಾವು ಪತ್ರಕರ್ತರು, ನಿಮ್ಮ ಲಾರಿಯಲ್ಲಿ ಅಕ್ರಮವಾಗಿ ಅಕ್ಕಿ ಸಾಗಿಸಲಾಗುತ್ತಿದೆ ಅಂತಾ ಧಮ್ಕಿ ಹಾಕಿದ್ದರು.


ನಮಗೆ ಹಣ ಕೊಡದಿದ್ದರೆ ಫುಡ್‌ ಇನ್ಸ್ಪೆಕ್ಟರ್ ಹಾಗೂ ಪೊಲೀಸರಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದರು. ನಾಲ್ವರು ನಕಲಿ ಪತ್ರಕರ್ತರ ಬಗ್ಗೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಲಾರಿ ಮಾಲೀಕರು ದೂರು ದಾಖಲಿಸಿದ್ದರು. ‌ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿದ ಖಾಕಿಪಡೆ ಜೈಲಿಗಟ್ಟಿದೆ.


ಇದನ್ನೂ ಓದಿ: PSI Recruitment Scam : ಪಿಎಸ್‌ಐ ಪರೀಕ್ಷೆ ಅಕ್ರಮ : ಸಿಐಡಿ ಬಲೆಗೆ ಬಿದ್ದ ಮಹಿಳಾ ಅಭ್ಯರ್ಥಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.