ಶಿಕಾರಿಪುರ/ ಶಿವಮೊಗ್ಗ/ ಶಿಕಾರಿಪುರ ತಾಲೂಕು ಬಂಡಿಬೈರನಹಳ್ಳಿ, ಮಜಿರೆ ಸಿದ್ಧನಪುರ ಗ್ರಾಮದ ಸರ್ವೆ ನಂ 36 ರಲ್ಲಿರುವ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ  ಅವರಿಗೆ ಸೇರಿದ ಅಡಿಕೆ ತೋಟದ ಕಾಪೌಂಡ್ ಬಳಿ ವಾಮಚಾರ ನಡೆದಿತ್ತಾ?  ಬಿ ವೈ ವಿಜಯೇಂದ್ರ  ರವರು ಚುನಾವಣೆಯಲ್ಲಿ ಸೋಲಿಸುವ ನಿಟ್ಟಿನಲ್ಲಿ ಇಂತಹದ್ದೊಂದು ಕೃತ್ಯವನ್ನ ಎಸೆಗಲಾಗಿದೆ ಎಂದು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. 


COMMERCIAL BREAK
SCROLL TO CONTINUE READING

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಸೋಲಬೇಕು ಎಂಬ ದುರುದ್ದೇಶದಿಂದ ಬಿ‌ಎಸ್‌ವೈ ಅವರಿಗೆ ಸೇರಿದ ಅಡಿಕೆ ತೋಟದ ಕಾಂಪೌಂಡ್ ಬಳಿ ವಾಮಾಚಾರ ನಡೆಸಲಾಗಿತ್ತು ಎಂದು ದೂರು ದಾಖಲಿಸಲಾಗಿದೆ. ಈ ಸಂಬಂಧ ಕಾಯಿದೆ ಮತ್ತು ವಿಭಾಗ: IPC 1860 (U/s-426,447); ಕರ್ನಾಟಕ ಅಮಾನವೀಯ ಮತ್ತು ದುಷ್ಟ ಪದ್ಧತಿಗಳ ನಿರ್ಮೂಲನೆ ಮತ್ತು ಕಪ್ಪು ಮ್ಯಾಜಿಕ್ ನಿರ್ಮೂಲನೆ ಕಾಯಿದೆ, 2017, U/s-3(2)) ರ ಅನ್ವಯ ಕೇಸ್​ ಕೂಡ ದಾಖಲಾಗಿದೆ. 


ಇದನ್ನೂ ಓದಿ- ಹುಬ್ಬಳ್ಳಿ: ಪಕ್ಷೇತರ ಅಭ್ಯರ್ಥಿಗೆ ಚಾಕು ಇರಿತ


ದೂರಿನಲ್ಲಿ ಏನಿದೆ?
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ತೋಟದಲ್ಲಿ ನಡೆದ ಕೃತ್ಯದ ಸಂಬಂಧ ತೋಟದ ಸಿಬ್ಬಂದಿ ದೂರು ನೀಡಿದ್ದಾರೆ. ದೂರಿನ ಪ್ರಕಾರ, ದಿನಾಂಕ: 11-05-2023 ರಂದು ರಾತ್ರಿ 10:00 ಗಂಟೆಯಿಂದ 10:30 ಗಂಟೆ ನಡುವಿನ ಸಮಯದಲ್ಲಿ ಮೂರರಿಂದ ನಾಲ್ಕು ಜನ ದುಷ್ಕರ್ಮಿಗಳು ಕಾಡು ಪ್ರಾಣಿಯೊಂದನ್ನ ಕೊಂದು, ತೋಟದಲ್ಲಿ ಹೂತು ಹಾಕಿದ್ದಾರೆ.  


ಇದನ್ನೂ ಓದಿ- ಗೂಡ್ಸ್ ರೈಲಿನಡಿ ಬಿದ್ದು 20ಕ್ಕೂ ಹೆಚ್ಚು ಎಮ್ಮೆಗಳು ಮೃತ


ಬಿ‌ಎಸ್‌ವೈ ಪುತ್ರ ಬಿ.ವೈ. ವಿಜಯೇಂದ್ರ ರವರಿಗೆ ಕೇಡನ್ನು ಉಂಟು ಮಾಡುವ ಸಲುವಾಗಿ ತೋಟದ ಕಾಂಪೌಂಡ್​ ಬಳಿ ವಾಮಚಾರ ಮಾಡಿ, ಕೊಂದ ಪ್ರಾಣಿಯನ್ನು ಹೂತು ಹಾಕಲಾಗಿದೆ. ಇದರ  ಹಿಂದಿನ ಉದ್ದೇಶ ಹಾಗೂ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವಂತೆ ಮನವಿ ಮಾಡಿ ದೂರು ದಾಖಲಿಸಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ