ಬೆಂಗಳೂರು: ಹಣಕ್ಕಾಗಿ ಏನೆಲ್ಲಾ ಕೆಲಸ ಮಾಡುತ್ತಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಈ ಕಥೆಯಲ್ಲಿ ಕಂಪ್ಲೈಂಟ್ ಕೊಟ್ಟವನದೇ ಕಥೆ-ಚಿತ್ರಕಥೆ ನಿರ್ದೇಶನ. ಸಿನಿಮಾ ಶೈಲಿಯಲ್ಲಿ ಪ್ಲಾನ್ ಮಾಡಿ 20 ದಿನ ಅಪ್ರಾಪ್ತರಿಗೆ ತರಬೇತಿ ನೀಡಿದ್ದ ಕಿಲಾಡಿ ಈಗ ಅಂದರ್ ಆಗಿದ್ದಾನೆ. ಇನ್ಶೂರೆನ್ ಹಣ‌ ಕ್ಲೈಮ್ ಮಾಡಿಕೊಳ್ಳಲು ಪಕ್ಕ ಪ್ಲಾನ್ ಮಾಡಿ ಬೈಕ್ ನಲ್ಲಿ ಹೋಗುವಾಗ ಸುಲಿಗೆಕೋರರು 4 ಕೋಟಿ ಮೌಲ್ಯದ 3.780 ಕೆ.ಜಿ. ಚಿನ್ನ ದೋಚಿದ್ದಾರೆ ಎಂದು ಸುಳ್ಳು ದೂರು ನೀಡಿದ್ದ ಜ್ಯೂವೆಲ್ಲರಿ ಶಾಪ್ ಮಾಲೀಕನನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಕೃತ್ಯವೆಸಲು ಬಳಸಿಕೊಂಡಿದ್ದ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: KPSC Recruitment 2023: ಕೆಪಿಎಸ್‍ಸಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ


ರಾಜಸ್ತಾನ ಮೂಲದ ರಾಜು ಜೈನ್ ಬಂಧಿತ ಖತರ್ನಾಕ್  ಮಾಲೀಕ.ಈತ ನಗರತ್ ಪೇಟೆಯ ಕೇಸರ್ ಜ್ಯೂವೆಲರ ಶಾಪ್ ನ ಮಾಲೀಕನಾಗಿದ್ದಾನೆ. ಜುಲೈ 12 ರಂದು ಸಂಜೆ 7.30ಕ್ಕೆ ಹೈದರಾಬಾದಿಗೆ 3.780 ಕೆ.ಜಿ ಚಿನ್ನ ಕಳುಹಿಸಲು ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ತೆಗೆದುಕೊಂಡು ಹೋಗುವಾಗ ಮಾರ್ಕೆಟ್ ಮೇಲುಸೇತುವೆ ಬಳಿ‌ ಅಪರಿಚಿತರು ಹಿಂದಿನಿಂದ ಕಾಲಿನಿಂದ ಒದ್ದು ಬ್ಯಾಗ್ ನಲ್ಲಿದ್ದ ಚಿನ್ನಾಭರಣ ದೋಚಿದ್ದಾರೆ ಎಂದು‌ ದೂರು ಕೊಟ್ಟಿದ್ದ. ರಾಜು ಜೈನ್ ನಿಂದ ಮಾಹಿತಿ ಪಡೆದುಕೊಂಡು ತನಿಖೆ ನಡೆಸಿದ‌ ಪೊಲೀಸರಿಗೆ ದೂರುದಾರನ ಹೇಳಿಕೆ, ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದರೂ ಪ್ರಯೋಜನವಾಗಿರಲಿಲ್ಲ. ತನ್ನ ಮೇಲೆ ಅನುಮಾನ ಬರದಿರಲು ನಾನಾ ತಂತ್ರಗಳನ್ನ ರೂಪಿಸಿಕೊಂಡಿದ್ದ ಜೈನ್, ಪ್ರಕರಣ ಬಗೆಹರಿಸುವಂತೆ ಅಧಿಕಾರಿಗಳಿಂದ ಹಾಗೂ ಸಂಬಂಧಿಕರಿಂದ‌ ಫೋನ್ ಮಾಡಿಸಿ ಪೊಲೀಸರ ಮೇಲೆ‌ ಒತ್ತಡ ಹಾಕಿಸಿದ್ದ.ತಾಂತ್ರಿಕ ಹಾಗೂ ವೈಜ್ಞಾನಿಕವಾಗಿ  ತನಿಖೆ ನಡೆಸಿದರೂ ಪ್ರಯೋಜನವಾಗದ ಪರಿಣಾಮ ಸಾಕಷ್ಟು ತಲೆ ಓಡಿಸಿದ  ಪೊಲೀಸರು ದೂರುದಾರ ಜೈನ್, ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ಕಾನೂನುಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮೊಬೈಲ್ ಜಪ್ತಿ‌ ಮಾಡಿಕೊಂಡು ಪರಿಶೀಲನೆ ವೇಳೆ ಅದೊಂದು ವಾಟ್ಸಾಪ್ ಕರೆಯಿಂದ ಇವರ ಕಳ್ಳಾಟ ಬಯಲಾಗಿದೆ. 


ಇದನ್ನೂ ಓದಿ: Jyothi Rai : ಪ್ರಿಯಕರನಿಗಾಗಿ ಹೆಸರು ಬದಲಿಸಿಕೊಂಡ ಕಿರುತೆರೆ ನಟಿ..ಗುಟ್ಟಾಗಿ 2ನೇ ಮದುವೆಯಾದ್ರಾ ಜ್ಯೋತಿ ರೈ..?


ಇನ್ಶೂರೆನ್ಸ್ ಹಣಕ್ಕಾಗಿ ವಾಮ ಮಾರ್ಗದ ಮೊರೆ ಹೋಗಿದ್ದ ಈ ಆರೋಪಿ ರಾಜು‌ ಜೈನ್. ಚಿನ್ನಾಭರಣ ಕಳ್ಳತವಾದರೆ ಸುಲಭವಾಗಿ ಸುಲಭವಾಗಿ ಇನ್ಶೂರೆನ್ಸ್ ಕ್ಲೈಮ್ ಮಾಡಬಹುದು ಎಂದುಕೊಂಡಿದ್ದ. ಪೊಲೀಸರ ಕೈಗೆ ಸಿಕ್ಕಿಬಿದ್ದರೂ ಸಹ ಶಿಕ್ಷೆಯಿಂದ ಪಾರಾಗಲು  ಉದ್ದೇಶಪೂರ್ವವಾಗಿ ಇಬ್ಬರು ಬಾಲಕರನ್ನ‌ ಕೃತ್ಯಕ್ಕೆ ಬಳಸಿಕೊಂಡಿದ್ದ. ಎಲ್ಲೆಲ್ಲಿ ಸಿಸಿಟಿವಿಗಳಿವೆ ಎಂಬುದನ್ನ ಅಧ್ಯಯನ ಮಾಡಿ ಹೇಗೆ ಅಪರಾಧ ಎಸಗಬೇಕು. ಯಾವ ರೀತಿ ತಂತ್ರ ರೂಪಿಸಿದರೆ ಪೊಲೀಸರು ನಂಬುತ್ತಾರೆ‌. ಪೊಲೀಸರು ಪ್ರಶ್ನಿಸಿದರೆ ಹೇಗೆ ವರ್ತಿಸಬೇಕು. ಏನು ಹೇಳಬೇಕು ಎಂಬುದರ ಬಗ್ಗೆ ಹುಡುಗರಿಗೆ ತರಬೇತಿ ನೀಡಿದ್ದ. ಇದರಂತೆ ಮಾರ್ಕೆಟ್ ಮೇಲ್ ಸೇತುವೆ ಬಳಿ ಸಿಸಿಟಿವಿ ಇಲ್ಲದಿರುವುದನ್ನ ಖಚಿತಪಡಿಸಿಕೊಂಡು ಅಲ್ಲೇ ಸುಲಿಗೆಯಾಗಿದೆ ಎಂದು ಪೊಲೀಸರಿಗೆ ಕಥೆ ಕಟ್ಟಿದ್ದ.ಬೈಕ್ ನಲ್ಲಿಟ್ಟಿದ್ದ ಬಂಗಾರ ಕಳ್ಳತನವಾಗಿದೆ ಎಂದು ಬಿಂಬಿಸಿಕೊಂಡಿದ್ದ‌. ಆನಂತರ ಚಿನ್ನವಿರುವ ಬ್ಯಾಗ್ ನ್ನ ತಮ್ಮ‌ ಸ್ಕೂಟರ್ ಡಿಕ್ಕಿಯಲ್ಲಿ‌ ಇಟ್ಟುಕೊಂಡು ಕಾಟನ್ ಪೇಟೆ ಪೊಲೀಸರಿಗೆ ದೂರು ನೀಡಿ ನವರಂಗಿ ನಾಟಕವಾಡಿದ್ದ. ಸದ್ಯ ಪೊಲೀಸರು ವಶಕ್ಕೆ ಪಡೆದು ತಮ್ಮದೇ ಸ್ಟೈಲಲ್ಲಿ ವಿಚಾರಣೆ ನಡೆಸಿದಾಗ ಸತ್ಯವನ್ನು ಒಪ್ಪಿಕೊಂಡಿದ್ದಾನೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.