ಬೆಂಗಳೂರು: ಕೆಲಸದ ಅವಧಿ‌ ಮೀರಿದರೂ ಹೆಚ್ಚುವರಿ ಕೆಲಸ, ರಜೆ ನೀಡುವಲ್ಲಿ ತಾರತಮ್ಯ ಹಾಗೂ ಸರ್ಕಾರಿ ವಾಹನ ದುರ್ಬಳಕೆ ಸೇರಿದಂತೆ ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ‌ ಅಶೋಕ್ ಆರ್‌.ಜುಂಜರವಾಡ ವಿರುದ್ಧ ಚಾಲಕ ನೋವಿನಿಂದ‌ ಬರೆದಿರುವ ಪತ್ರ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಗಾಯದ ಮೇಲೆ ಬರೆ: ಜುಲೈ 1ರಿಂದ ಮತ್ತೆ ವಿದ್ಯುತ್‌ ಬೆಲೆ ಏರಿಕೆ!


ಪೊಲೀಸ್ ಇಲಾಖೆಯು ಶಿಸ್ತಿನ ಇಲಾಖೆ ಎಂದೇ‌ ಕರೆಯಲಾಗುತ್ತದೆ. ಆದರೆ ಕಳೆದ‌ ಮೂರು ವರ್ಷಗಳಿಂದ ವಿಧಾನಸೌಧದ ಭದ್ರತಾ ವಿಭಾಗದಲ್ಲಿ ಅಶೋಕ್ ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌ ಚಾಲಕನ ಕೆಲಸ ಆರು ಗಂಟೆಯಾದರೂ 12ರಿಂದ 14 ಗಂಟೆವರೆಗೂ ಕೆಲಸ‌ ಮಾಡಿಸಲಾಗುತ್ತಿದೆ. ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ರಜೆ‌‌ ನೀಡದೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ.‌ ಆರೋಗ್ಯ ಸಮಸ್ಯೆಯಿದ್ದರೂ ರಜೆ‌ ರದ್ದುಪಡಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಕಿರಿಕಿರಿ ಮಾಡಲಾಗುತ್ತಿದೆ.‌ ರಜೆ ವಿಚಾರದಲ್ಲಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಎಂದು ತಾರತಮ್ಯ ಎಸಗಲಾಗುತ್ತಿದೆ‌ ಎಂದು ಬರೆದಿರುವ ಪತ್ರ ವೈರಲ್ ಆಗುತ್ತಿದೆ.


ಮಕ್ಕಳನ್ನು ಶಾಲೆಗೆ ಬಿಡಲು ಒಂದು ವಾಹನ ಕರ್ತವ್ಯಕ್ಕೆ‌ ಮತ್ತೊಂದು ವಾಹನ ಬಳಸುವ‌ ಮೂಲಕ ಸರ್ಕಾರಿ ವಾಹನ ದುಬರ್ಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಬಂದಿದೆ. ಡಿಸಿಪಿ ವರ್ತನೆ ಬೇಸತ್ತಿರುವ ಚಾಲಕ, ಚಾಲನೆ ವೇಳೆ‌ ಏನಾದರೂ ಅಪಘಾತ ಸಂಭವಿಸಿದರೆ ಅದಕ್ಕೆ‌‌ ನೇರ ಹೊಣೆ, ಅವರೇ ಕಾರಣರಾಗಿರುತ್ತಾರೆ ಎಂದು ನಾಲ್ಕು‌ ಪುಟಗಳ‌ ಪತ್ರದಲ್ಲಿ ನೋವು ತೋಡಿಕೊಂಡಿದ್ದಾರೆ.


ಇದನ್ನೂ ಓದಿ: Earthquake In Kodagu: ಕೊಡಗು ಜಿಲ್ಲೆಯ ಹಲವೆಡೆ ಮತ್ತೆ ಕಂಪಿಸಿದ ಭೂಮಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.