Crime News: ಇಂಗ್ಲಿಷ್ ಡಿಕ್ಷನರಿಯಂತೆ ಕಂಡರೂ ಇದು ಡಿಕ್ಷನರಿಯಲ್ಲ.. ಇದರ ಅಸಲಿಯತ್ತು ಬೇರೆನೆ ಇತ್ತು!
Crime News: ಪಕ್ಕಾ ಸಿನಿಮಾ ಸ್ಟೈಲ್ ನ ಖತರ್ನಾಕ್ ಐಡಿಯಾದ ಪ್ರಕರಣವೊಂದು ಒಂದು ಬಳಕಿಗೆ ಬಂದಿದೆ. ವಿದೇಶಿಗ ಬಿಟ್ಟು ಹೋದ ಬುಕ್ ನೋಡಲು ದಿಟ್ಟು ಇಂಗ್ಲಿಷ್ ಡಿಕ್ಷನರಿಯಂತೆ ಕಾಣುತ್ತಿತ್ತು ಆದರೆ ಇದು ಡಿಕ್ಷನರಿಯಲ್ಲ.ಇದರ ಅಸಲಿಯತ್ತು ಬೇರೆನೆ ಇತ್ತು. ಅದೇನೆಂದು ನೀವೆ ನೋಡಿ..
ಬೆಂಗಳೂರು: ನಗರದ ಬಸವನಗುಡಿಯಲ್ಲಿ ಪಕ್ಕಾ ಸಿನಿಮಾ ಸ್ಟೈಲ್ ನ ಖತರ್ನಾಕ್ ಐಡಿಯಾದ ಪ್ರಕರಣವೊಂದು ಒಂದು ಬಳಕಿಗೆ ಬಂದಿದೆ. ವಿದೇಶಿಗ ಬಿಟ್ಟು ಹೋದ ಬುಕ್ ನೋಡಲು ದಿಟ್ಟು ಇಂಗ್ಲಿಷ್ ಡಿಕ್ಷನರಿ ಯಂತೆ ಕಾಣುತ್ತಿತ್ತು. ಡಿಕ್ಷನರಿ ಹಿಡಿದುಕೊಂಡಿದಾತ ಪೊಲೀಸರನ್ನುಕಂಡು ವಿಚಿತ್ರವಾಗಿ ವರ್ತಿಸುತ್ತಿದ್ದನು.
ಆತನ ವರ್ತನೆ ಮೇಲೆ ಅನುಮಾನ ಬಂದ ಪೋಲಿಸರು ಅವನ ಬಳಿ ತೆರಳಿದ್ದಾರೆ . ಪೋಲಿಸರು ಹತ್ತಿರ ಸಮೀಪಿಸುತ್ತಿದ್ದಂತೆ ಬುಕ್ ಬಿಟ್ಟು ಹೋಗಿದ್ದಾನೆ. ಬಳಿಕ ಆತ ಬಿಟ್ಟು ಹೋದ ಇಂಗ್ಲಿಷ್ ಡಿಕ್ಷನರಿಯಂತ್ತಿದ್ದ ಬುಕ್ ಪರೀಶಿಲಿಸಿದರೇ ಪೋಲಿಸರನ್ನೇ ಬೆಚ್ಚಿ ಬೀಳಿಸಿದೆ. ಅಸಲಿಗೆ ಬುಕ್ ನಲ್ಲಿತ್ತು ಮಿನಿ ಲಾಕರ್.
ಇದನ್ನೂ ಓದಿ: Video: ಸ್ವಚ್ಛ ಭಾರತ್ ಅಭಿಯಾನಕ್ಕೆ ಮಾದರಿ ಈ ನಾರಿ! ಹಾಡಿ ಹೊಗಳಿದ ಆನಂದ್ ಮಹೀಂದ್ರ
ಲಾಕರ್ ನಲ್ಲಿದ್ದ ವಸ್ತು ಓಪನ್ ಮಾಡಲು ಪಾಸ್ ವರ್ಡ್ ಸೆಟ್ ಮಾಡಲಾಗಿತ್ತು. ಅನುಮಾನ ಬಂದು ಲಾಕರ್ ಪಾಸ್ ವರ್ಡ್ ನ್ನು ನುರಿತ ವ್ಯಕ್ತಿಯಿಂದ ತೆಗೆಸಲಾಯಿತು. ಲಾಕರ್ ಓಪನ್ ಮಾಡುತ್ತಿದ್ದಂತೆಯೇ ಗೊತ್ತಾಯಿತು ಪಕ್ಕ ಸಿನಿಮಾ ಸ್ಟೈಲ್ ನ ಖತರ್ನಾಕ್ ಡ್ರಗ್ ಮಾಫಿಯಾ ಬಯಲಾಗಿದೆ.
ಇದನ್ನೂ ಓದಿ: ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಮುಳುಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ: ಡಿ.ಕೆ.ಸುರೇಶ್
ಡಿಕ್ಷನರಿ ಲಾಕರ್ ಒಳಗೆ ಲಕ್ಷ ಲಕ್ಷ ಬೆಲೆಬಾಳುವ ಪ್ಯೂರೆಸ್ಟ್ ಡ್ರಗ್ಸ್ ಹಾಗೂ ಕೊಕೇನ್ ಮತ್ತು ಎಂಡಿ ಕ್ರಿಸ್ಟಲ್ಸ್ ಪತ್ತೆಯಾಗಿವೆ. ಪತ್ತೆಯಾದ ಮಾದಕ ವಸ್ತುವಿನ ಮಾರ್ಕೆಟ್ ಬೆಲೆ ಬರೊಬ್ಬರಿ 10 ಲಕ್ಷದಾಗಿದೆ. ಸದ್ಯ ಸಿನಿಮಾ ಸ್ಟೈಲ್ ನ ಖತರ್ನಾಕ್ ಡ್ರಗ್ ಮಾಫಿಯಾ ಪ್ರಕರಣವನ್ನು ಬಸವನಗುಡಿ ಪೊಲೀಸರು ದಾಖಲಿದ್ದಾರೆ. ಸದ್ಯ ಪರಾರಿಯಾದ ವಿದೇಶಿಗನ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.