ಬೆಂಗಳೂರು: ಸಿಲಿಕಾನ್ ಸಿಟಿ ಪೊಲೀಸರು ಡ್ರಗ್ಸ್  ವಿರುದ್ಧ ಸಮರ ಮುಂದುವರೆಸಿದ್ದಾರೆ. ಪೊಲೀಸರು ಎಷ್ಟೇ ಪ್ರಯತ್ನಪಟ್ಟರು ಸಹ ಡ್ರಗ್‌ ಕಂಟ್ರೋಲ್‌ ಮಾಡಲು ಹರಸಾಹಸಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.  ಸದ್ಯ ಸಿಸಿಬಿಯ ಮಾದಕ ನಿಗ್ರಹದಳ ಬೆಂಗಳೂರಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಕೋಟಿ ಕೋಟಿ ಮೌಲ್ಯದ ಡ್ರಗ್‌ ಸೀಜ್‌ ಮಾಡಿದ್ದಾರೆ. ಈ ವೇಳೆ ನೈಜೀರಿಯಾ ಮೂಲದ ವಿಕ್ಟರ್ ಎಂಬಾತನನ್ನ ವಿಚಾರಣೆ ನಡೆಸಿದಾಗ ದೊಡ್ಡ ಮಟ್ಟದಲ್ಲಿ ಡ್ರಗ್ಸ್ ಗಳು  ಸೀಜ್‌ ಆಗಿದೆ. 


COMMERCIAL BREAK
SCROLL TO CONTINUE READING

ವಿಕ್ಟರ್ ಎಂಬಾತ ಮನೆಯಲ್ಲಿ ಸಿಕ್ಕಿದ್ದು 2.43 ಕೆ ಜಿ ಎಂಡಿಎಂಎ ಕ್ರಿಷ್ಟಲ್ಸ್. ಇದು ದುಬಾರಿ ಬೆಲೆ ಬಾಳುವ ಈ ಸಿಂಥೆಟಿಕ್ ಡ್ರಗ್. ಎಂಡಿ ಎಂಎ ಗೆ ಕ್ರಿಸ್ಟಲ್ ನ್ನು ಒಂದು ಗ್ರಾಂಗೆ ಸಾವಿರಾರು ರೂಪಾಯಿ ದರವಿದೆ. ಈ ತರಹದ ಡ್ರಗ್ ಒಂದೇ ಮನೆಯಲ್ಲಿ ಸಿಕ್ಕಿದ್ದು ಅದರ ಮೌಲ್ಯ ಬರೋಬ್ಬರಿ 2 ಕೋಟಿ ರೂಪಾಯಿ. ಕಾಡುಗೋಡಿ, ಕೆಆರ್‌ ಪುರಂ, ಸೋಲದೇವನಹಳ್ಳಿ, ಹೆಚ್‌ಎಸ್‌ಆರ್‌ ಲೇಔಟ್‌, ವೈಟ್‌ಫೀಲ್ಡ್‌ ಬಾಣಸವಾಡಿ, ಪರಪ್ಪನ ಅಗ್ರಹಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ. 


ಇದನ್ನೂ ಓದಿ- ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ರ‍್ಯಾಶ್ ಡ್ರೈವಿಂಗ್


ಇನ್ನು ಪರಪ್ಪನ ಅಗ್ರಹಾರ ಬಳಿಯ ಡೊಡ್ಡನಾಗಮಂಲದ ವೀರಭದ್ರ ಲೇಔಟ್ ಮನೆಗೆ ದಾಳಿ ನಡೆಸಿದಾಗ ಸಿಕ್ಕಿದ್ದ ಡಗ್ಸ್ ಇದು. ಶರವಣ ಎಂಬಾತನ ಮಾಲೀಕತ್ವದ ಮನೆಯಲ್ಲಿ  ಡ್ರಗ್ಸ್ ನ ಜೊತೆಗೆ ಅದನ್ನ ಕೌಂಟ್ ಮಾಡುವ ತೂಕದ ಯಂತ್ರ ಕೂಡ ಸಿಕ್ಕಿದೆ. ಹಾಗೆ ಅದನ್ನ ಮಾರಾಟ ಮಾಡಲು ಬೇಕಾದ ಸಣ್ಣ ಸಣ್ಣ ಪೊಟ್ಟಣಗಳನ್ನೂ ಕೂಡ ಸೀಝ್ ಮಾಡಲಾಗಿದೆ. 


ಇನ್ನು ಬಂಧಿತ ನೈಜೀರಿಯಾ ಪ್ರಜೆ ದೆಹಲಿಯ ಪೆಡ್ಲರ್ ನಿಂದ ಡ್ರಗ್ಸ್ ಗಳನ್ನ ತರಿಸುತ್ತಿದ್ದ ಎನ್ನಲಾಗಿದೆ. ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಕಂಪನಿಯ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆ ಡ್ರಗ್‌ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 


ಇದನ್ನೂ ಓದಿ- ಕೋಲಾರದಲ್ಲಿ ತಾಯಿ ಮಡಿಲು ಸೇರಿದ‌ ನಾಲ್ಕು ದಿನದ ಕಂದಮ್ಮ


ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ವಿದೇಶಿ ಪ್ರಜೆಗಳು ಹಾಗೂ ಇಬ್ಬರು ಭಾರತೀಯರು ಸೇರಿ 10 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ  ಎಂಡಿಎಂಎ ಕ್ರಿಸ್ಟೆಲ್‌ 3.806, ಕೋಕೆನ್‌ 50 ಗ್ರಾಂ,ಎಕ್ಸ್‌ಟಿಸಿ ಪಿಲ್ಸ್‌ 25, ಎಲ್‌ಎಸ್‌ಡಿ ಸ್ಟ್ರೀಪ್ಸ್‌ 50, ಗಾಂಜಾ 5 ಕೆಜಿ ವಶಕ್ಕೆ ಪಡೆದಿದ್ದಾರೆ. ಇನ್ನೂ ಕೃತ್ಯಕ್ಕೆ ಬಳಸಿದ್ದ 1 ಕಾರು,3 ಬೈಕ್‌,9 ಮೊಬೈಲ್‌ ಸೀಜ್  ಮಾಡಿದ್ದಾರೆ. ಇನ್ನು ಪಬ್ ಗಳಿಗೆ ಹೈ ಫೈ ಪಾರ್ಟಿಗಳಿಗೆ ಈ ಡ್ರಗ್ಸ್ ಪೂರೈಕೆಯಾಗುತ್ತಿತ್ತು ಎಂಬ ಮಾಹಿತಿ ಇದ್ದು, ಈ ಬಗ್ಗೆ ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.