ಬೆಂಗಳೂರು: ಡೆಲವರಿ ಬಾಯ್ಸ್ ನೆಪದಲ್ಲಿ ಡ್ರಗ್ ಪೆಡ್ಲಿಂಗ್ ನಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಪ್ರಜೆಗಳು ಹಾಗೂ 8 ಮಂದಿ ಕೇರಳ, ಮೇಘಾಲಯದ ಒಬ್ಬ  ಸೇರಿ 11 ಮಂದಿ ಆರೋಪಿಗಳನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹದಳ ಅಧಿಕಾರಿಗಳು ಬಂಧಿಸಿದ್ದಾರೆ.  


COMMERCIAL BREAK
SCROLL TO CONTINUE READING

ಕಿನ್ಯಾ ಹಾಗೂ ತಾಂಜೇನಿಯಾದ ಟಿಬೇರಿಯಸ್ ನ್ಯಾಕುಂಡಿ, ಕೆರ್ರಿ ಸಾರಾ, ಕೇರಳದ ಸಚಿನ್, ರಾಗೇಶ್, ಸಾಹುಲ್, ಪ್ರಶಾಂತ್, ಸಿದ್ಧಾಂತ್ ಬಂಧಿತರು. ಆರೋಪಿಗಳು ಮಡಿವಾಳ, ಬಾಣಸವಾಡಿ, ಸುದ್ದಗುಂಟೆಪಾಳ್ಯ, ಕೆಆರ್ ಪುರಂ, ಬಂಡೇಪಾಳ್ಯ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದರು.


ಇದನ್ನೂ ಓದಿ- ಪ್ರಿಯಕರನ ಜೊತೆಗೂಡಿ ಪತಿ ಕೊಲೈಗೈದ ಪತ್ನಿ: 6 ತಿಂಗಳ ಬಳಿಕ ಸತ್ಯ ಬಯಲು!


ಈ ಇಬ್ಬರು ವಿದೇಶಿ ಆರೋಪಿಗಳು ಸ್ಟೂಡೆಂಟ್ ವೀಸಾದಡಿಯಲ್ಲಿ ನಗರಕ್ಕೆ ಬಂದು ಆಫ್ರಿಕಾ ಮೂಲದ‌ ಪ್ರಜೆಗಳಿಂದ ಕಡಿಮೆ ಬೆಲೆಗೆ ಡ್ರಗ್ ಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.  ಇನ್ನುಳಿದ ಆರೋಪಿಗಳು ಪರಿಚಯಸ್ಥ ಗಿರಾಕಿಗಳು, ಐಟಿ/ಬಿಟಿ ಕಂಪನಿ ವಿದ್ಯಾರ್ಥಿಗಳಿಗೆ ಕಾಲೇಜ್ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಮಾರಾಟ ಮಾಡುತಿದ್ದರು‌. 


ಇದನ್ನೂ ಓದಿ- WATCH : ನಡುರಸ್ತೆಯಲ್ಲಿ ಯುವತಿಗೆ ಹೆಲ್ಮೆಟ್‌ನಿಂದ ಹಿಗ್ಗಾಮುಗ್ಗ ಹೊಡೆದ ಯುವಕ, ವಿಡಿಯೋ ವೈರಲ್‌


ಸದ್ಯ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು 1 ಕೋಟಿ 35‌ ಲಕ್ಷ ಮೌಲ್ಯದ ಗಾಂಜಾ, ಎಂಡಿಎಂಎ, ಪಿಲ್ಸ್ , ಸೇರಿದಂತೆ ಒಟ್ಟು 900 ಗ್ರಾಂ  ಮಾದಕ ವಸ್ತು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಆರೋಪಿಗಳ ಸಂಪರ್ಕದಲ್ಲಿರುವ ಉಳಿದವರಿಗಾಗಿ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.