ಬೆಂಗಳೂರು : ಗುರಾಯಿಸಿದ ಎಂಬ ಕಾರಣಕ್ಕೆ ಪಾಪಿ ಅಣ್ಣನೊಬ್ಬ ತನ್ನ ಸ್ವಂತ ತಮ್ಮನನ್ನೇ ಚಾಕು ಇರಿದು ಕೊಲೆ ಮಾಡಿರುವ ಘಟನೆ ಕೆಆರ್ ಪುರಂ ಠಾಣಾ ವ್ಯಾಪ್ತಿಯ ಪ್ರಿಯಾಂಕ ನಗರದಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ರಾಮಕೃಷ್ಣ ಎಂಬಾತ ಬಾಲಕೃಷ್ಣ ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಯಾವಾಗ್ಲೂ ತಮ್ಮನ ಜೊತೆ ಕಿರಿಕ್ ತೆಗೆದುಕೊಳ್ತಿದ್ದ ರಾಮಕೃಷ್ಣ ಕಿರಿಕ್ ಮಾಡಿಕೊಳ್ಳುತ್ತಿದ್ದ. ಬೇರೆ ಊರಿನವರಾದ್ರೂ ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ವಾಸವಿದ್ರು. 


ಇದನ್ನೂ ಓದಿ : ಜಾರಕಿಹೊಳಿ ಸಿಡಿ ಕೇಸ್ : FIR ರದ್ದುಕೋರಿ ನರೇಶ್, ಶ್ರವಣ್ ಕೋರ್ಟ್ ಮೊರೆ‌


ಆರೋಪಿಗೆ ಒಬ್ಬ ತಮ್ಮನಿದ್ರೆ ಇಬ್ಬರು ತಂಗಿಯರಿದ್ದಾರೆ. ಅಪ್ಪ ತಂಗಿಯರು ಕಜ್ಜಾಯ ಮಾರಿ ಜೀವನ ಸಾಗಿಸ್ತಿದ್ರೆ, ಅಮ್ಮ ಮಾನಸಿಕವಾಗಿ ವೀಕ್ ಇರೋದ್ರಿಂದ ಮನೆಯಲ್ಲೇ ಇರ್ತಿದ್ಳು.ತಮ್ಮ ಬಾಲಕೃಷ್ಣ ಪೇಂಟರ್ ಆಗಿ ಕೆಲಸ ಮಾಡ್ತಿದ್ರೆ ಆರೋಪಿ ರಾಮಕೃಷ್ಣ ಬಾರ್ ಬೈಂಡಿಗ್ ಕೆಲಸ ಮಾಡ್ತಿದ್ದ. ಕುಟುಂಬದ ಜೊತೆ ಸದಾ ಕಿರಿಕ್ ತೆಗೆದುಕೊಳ್ತಿದ್ದ ಆರೋಪಿ ಕುಟುಂಬಸ್ಥರಿಂದ ದೂರವೇ ವಾಸವಿದ್ದ. 


ಆದ್ರೆ ಆಗಾಗ ಮನೆಗೆ ಬಂದು ಗಲಾಟೆ ಮಾಡ್ತಿದ್ದ. ತಮ್ಮನ ಜೊತೆ ಕ್ಷುಲ್ಲಕ ವಿಚಾರಗಳಿಗೆ ಜಗಳ ತೆಗೀತ್ತಿದ್ದ.. ಈ ಹಿಂದೆ ಇದೇ ರೀತಿ ಜಗ ತೆಗೆದು ಕೊಲೆಗೆ ಯತ್ನಿಸಿದ್ದ. ಆದರೆ ಸ್ಥಳೀಯರು ರಾಮಕೃಷ್ಣನನ್ನ ತಡೆದು ಓಡಿಸಿದ್ರು.ಅದೇ ರೀತಿ ನಿನ್ನೆ ಕೂಡ ತಮ್ಮ ಗುರಾಯಿಸಿದ ಅಂತಾ ಜಗಳ ತೆಗೆದು ಚಾಕು ಇರಿದು ಹತ್ಯೆ ಮಾಡಿದ್ದಾನೆ.ಇನ್ನೂ ಘಟನಾ ಸ್ಥಳಕ್ಕೆ ಕೆ.ಆರ್ ಪುರಂ ಪೊಲೀಸರು ಭೇಟಿ ನೀಡಿದ್ದು ಆರೋಪಿ ರಾಮಕೃಷ್ಣ ನನ್ನ ಬಂಧಿಸಿದ್ದಾರೆ.


ಇದನ್ನೂ ಓದಿ : Bengaluru City police : ನಗರ ಪೊಲೀಸ್ ಇಲಾಖೆಯಲ್ಲಿ ಒಂದೇ ದಿನ 3 ಸಾವಿರ ಪೊಲೀಸರ ವರ್ಗಾವಣೆ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.