ಅಕ್ಕನ ಗಂಡನ ಜೊತೆ ಚಕ್ಕಂದವಾಡಲು ಗಂಡನಿಗೆ ಚಟ್ಟ ಕಟ್ಟಿದ್ಲು : ಶವದ ಮುಂದೆ ಕಣ್ಣೀರಾಕಿ ನಾಟಕವಾಡಿದ್ಲು ಮಾಯಾಂಗನೆ
ಬಳ್ಳಾರಿ ಜಿಲ್ಲೆ, ಸಿರಗುಪ್ಪ ತಾಲೂಕಿನ ಕರೂರು ಗ್ರಾಮದ ದಂಪತಿ ಕಳೆದ ಕೆಲ ದಿನಗಳ ಹಿಂದೆ ಭೋಗನಹಳ್ಳಿಗೆ ಬಂದು ಗಾರ್ಡನರ್ ಆಗಿ ಕೆಲಸ ಮಾಡುತ್ತ ಲೇಬರ್ ಶೆಡ್ ನಲ್ಲಿ ಇಬ್ಬರು ಮಕ್ಕಳ ಜೊತೆಗೆ ವಾಸ ಮಾಡಿಕೊಂಡಿದ್ರು.. ಆದರೆ ನಾಗರತ್ನ ಅಕ್ಕನ ಗಂಡರಾಮನ ಮನದರಸಿ.. ಮುಂದೆನಾಯ್ತು..?
ಬೆಂಗಳೂರು: ಅದು ಕೆರೆ ಪಕ್ಕ ಇರೊ ತಂಪನೆಯ ಜಾಗ. ಸುತ್ತಾ ಎಲ್ಲಿ ನೋಡಿದ್ರು ನೀಲಿಗಿರಿ ತೋಪು. ಅದೇ ತೋಪಿನಲ್ಲಿ ಘನಘೋರವೇ ನಡೆದುಹೋಗಿತ್ತು. ವ್ಯಕ್ತಿಯೊಬ್ಬನ ಮೃತದೇಹ ಸ್ಥಳೀಯರಿಗೆ ಕಾಣಿಸಿತ್ತು. ಪತಿ ಸಾವಿನ ಸುದ್ದಿ ತಿಳಿದು ಪತ್ನಿ ಓಡೋಡಿ ಬಂದಿದ್ಳು. ಮೃತದೇಹ ತಬ್ಬಿ ಕಣ್ಣೀರು ಸುರಿಸಿದ್ಳು. ಆದ್ರೆ ತನಿಖೆಗೆ ಇಳಿದ ಪೊಲೀಸರು ಸತ್ಯ ಬಯಲು ಮಾಡಿದ್ರು. ವಿಚಾರಣೆ ವೇಳೆ ಭಾವನ ಜೊತೆಗಿನ ಲವ್ವಿ ಡವ್ವಿ ವಿಚಾರ ಬೆಳಕಿಗೆ ಬಂದಿದೆ.
ಹೌದು... ಹೀಗೆ ಸೆರಗು ಸುತ್ತಿಕೊಂಡು ಮಳ್ಳಿ ರೀತಿ ಪೊಲೀಸ್ ಠಾಣೆಯಲ್ಲಿ ನಿಂತವಳ ಹೆಸರು ನಾಗರತ್ನ. ಇನ್ನೂ ಹೀಗೆ ಹೆಣವಾಗಿ ಬಿದ್ದಿರುವವನ ಹೆಸರು ತಿಪ್ಪೇಶ. ನಾಗರತ್ನಳ ಪತಿ. ಬಳ್ಳಾರಿ ಜಿಲ್ಲೆ, ಸಿರಗುಪ್ಪ ತಾಲೂಕಿನ ಕರೂರು ಗ್ರಾಮದ ದಂಪತಿ ಕಳೆದ ಕೆಲ ದಿನಗಳ ಹಿಂದೆ ಭೋಗನಹಳ್ಳಿಗೆ ಬಂದು ಗಾರ್ಡನರ್ ಆಗಿ ಕೆಲಸ ಮಾಡುತ್ತ ಲೇಬರ್ ಶೆಡ್ ನಲ್ಲಿ ಇಬ್ಬರು ಮಕ್ಕಳ ಜೊತೆಗೆ ವಾಸ ಮಾಡಿಕೊಂಡಿದ್ರು. ಆದರೆ ಅದೆಲ್ಲ ಹಳೆ ಸಂಬಂಧ ಬಿಡಿ ಈಗ ಈ ನಾಗರತ್ನ ಅಕ್ಕನ ಗಂಡರಾಮನ ಮನದರಸಿ.
ಇದನ್ನೂ ಓದಿ: ಶಿವಲಿಂಗೇಗೌಡ ಮತ್ತು ಕಾರ್ಯಕರ್ತರದ್ದು ಎನ್ನಲಾದ ಆಡಿಯೋ ವೈರಲ್
ಹೌದು.. ಗಾರ್ಡನರ್ ಆಗಿ ಕೆಲಸ ಮಾಡಿಕೊಂಡಿದ್ದ ನಾಗರತ್ನಗೆ ಈ ರಾಮ್ ಅಂದ್ರೆ ಅದೇನೊ ಸೆಳೆತ. ಹಾಗಾಗಿ ಗಂಡನಿಗೆ ಗೊತ್ತಿಲ್ಲದಂತೆ ಭಾವನ ಜೊತೆಗೆ ಪಲ್ಲಂಗದಾಟವಾಡುತ್ತಿದ್ದಳು. ಈ ಕಳ್ಳ ಸಂಬಂಧವನ್ನ ಎಷ್ಟು ದಿನ ಅಂತಾ ಬಚ್ಚಿಡೋಕೆ ಸಾಧ್ಯ ಹೇಳಿ. ಒಂದಿನ ಗಂಡನಿಗೂ ವಿಚಾರ ಗೊತ್ತಾಗಿ ಪತ್ನಿಗೆ ಬುದ್ಧಿ ಹೇಳಿದ್ದ. ಮತ್ತೆ ಚಾಳಿ ಮುಂದುವರೆಸಿದಾಗ. ಬೈಯೋದನ್ನು ಮಾಡ್ತಿದ್ದ. ಇದು ನಾಗರತ್ನಗೆ ಹಿಂಸೆ ಅನಿಸಿತ್ತು.
ಹಾಗಾಗಿ ಭಾವನಿಗೆ ಹೇಳಿ ಗಂಡನಿಗೆ ಒಂದು ಗತಿ ಕಾಣಿಸೋಕೆ ಮುಂದಾಗಿದ್ದಾಳೆ. ಈತನನ್ನ ಕೊಂದು ನನ್ನ ಕರೆದುಕೊಂಡು ಹೋಗು ಅಂತಾ ಪ್ರಿಯತಮನಿಗೆ ಹೇಳಿದ್ದಾಳೆ. ಈ ಜೀವ ನಿನಗಾಗಿ ಅಂತಾ ಬಳ್ಳಾರಿಯಿಂದ ಬಂದ ರಾಮ್ ಪ್ಲಾನ್ ನಂತೆಯೇ ಕೊಲೆ ಮಾಡಿ ಮುಗಿಸಿದ್ದಾನೆ.
ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಆರೋಪಿ ದೀಪಕ್ ಜೈಲಿನಿಂದ ಬಿಡುಗಡೆ
ಅಕ್ಟೋಬರ್ 14 ರ ಬೆಳಗ್ಗೆ 11 ಗಂಟೆಯ ಸಮಯ. ಲೇಬರ್ ಶೆಡ್ ಖಾಲಿ ಮಾಡೋಕೆ ಮಾಲೀಕರು ಸೂಚನೆ ಕೊಟ್ಟಿದ್ರು. ಹಾಗಾಗಿ ಕೆಲಸ ಮಾಡ್ತಿದ್ದ ಜಾಗದಿಂದ ಹಣ ತರೋಕೆ ಅಂತಾ ಗಂಡ ಹೆಂಡತಿ ಕೆರೆ ದಾಟಿ ನೀಲಗಿರಿ ತೋಪಿನತ್ತ ಹೆಜ್ಜೆ ಇಟ್ಟಿದ್ರು. ಈ ವೇಳೆ ಮೂತ್ರ ವಿಸರ್ಜನೆಗೆ ಹೋಗಬೇಕು ಅಂತಾ ಪತ್ನಿ ಸ್ವಲ್ಪ ಪಕ್ಕಕ್ಕೆ ಹೋಗಿದ್ದಾಳೆ. ಈ ವೇಳೆ ಅಲ್ಲೇ ಅವಿತಿದ್ದ ನಾಲ್ವರು ಹಂತಕರು ತಿಪ್ಪೇಶನ ಮೇಲೆ ಎರಗಿದ್ದಾರೆ. ದೊಣ್ಣೆಯಿಂದ ಹೊಡೆದು, ಮರ್ಮಾಂಗಕ್ಕೆ ಒದ್ದು, ದೊಣ್ಣೆಯಿಂದ ಕುತ್ತಿಗೆ ಬಿಗಿದು ಭೀಕರವಾಗಿ ಕೊಲೆ ಮಾಡಿದ್ದಾರೆ.
ಎಲ್ಲಾ ಕಣ್ಣೆದುರೆ ಕಂಡ ನಾಗರತ್ನ ತನಗೇನು ಗೊತ್ತೇ ಇಲ್ಲ ಅನ್ನುವಂತೆ ಶೆಡ್ ಸೇರಿದ್ಳು. ಸ್ಥಳೀಯರು ಬಂದು ವಿಚಾರ ಮುಟ್ಟಿಸ್ತಿದ್ದಂತೆ ಓಡೋಡಿ ಹೋಗಿ ಗೋಳಾಡಿ ಡ್ರಾಮಾ ಮಾಡಿದ್ಲು. ಅಲ್ಲದೇ ಕೊಲೆ ವಿಚಾರವಾಗಿ ತಾನೇ ಬೆಳ್ಳಂದೂರು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ಳು. ಅನುಮಾನಗೊಂಡು ವಿಚಾರಸಿದ ಪೊಲೀಸರಿಗೆ ಅಸಲಿ ಸಂಗತಿ ಗೊತ್ತಾಗಿದೆ. ಭಾವನ ಜೊತೆಗಿನ ಅನೈತಿಕ ಸಂಬಂಧ ಹಿನ್ನೆಲೆ ಪತ್ನಿಯೇ ಪತಿಗೆ ಚಟ್ಟ ಕಟ್ಟಿರೋದು ಗೊತ್ತಾಗಿದೆ. ಸದ್ಯ ಮೃತ ತಿಪ್ಪೇಶನ ಪತ್ನಿ ನಾಗರತ್ನ ಪ್ರಿಯಕರ ಭಾವ ರಾಮ್, ಸ್ನೇಹಿತರಾದ ಶಶಿಕುಮಾರ್, ಚಿನ್ನ ಮತ್ತು ಸುರೇಶ್ ನನ್ನ ಪೊಲೀಸರು ಬಂಧಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ