ವಿದೇಶಿ ಪೆಡ್ಲರ್ ಹಣ ಮುಟ್ಟುಗೋಲಿಗೆ ಬೆಂಗಳೂರು ಪೊಲೀಸರ ಮುನ್ನುಡಿ: ದೇಶದಲ್ಲೇ ಮೊದಲು
ಮಾದಕ ವಸ್ತು ದಂಧೆಕೋರರ ವಿರುದ್ಧ ಸಮರ ಸಾರಿರುವ ಬೆಂಗಳೂರು ಪೊಲೀಸರು ರಾಷ್ಟ್ರದಲ್ಲೇ ಮೊದಲ ಬಾರಿಗೆ ವಿದೇಶಿ ಪೆಡ್ಲರ್ ಗಳಿಗೆ ಸಂಬಂಧಿಸಿದ ಹಣ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನೈಜೀರಿಯಾ ಮೂಲದ ಪೀಟರ್ ಇಕೆಡಿ ಬೆಲನ್ವು (38) ಎಂಬ ಪೆಡ್ಲರ್ ಗೆ ಸಂಬಂಧಿಸಿದ 12.60 ಲಕ್ಷ ರೂ ಹಣವನ್ನ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಬೆಂಗಳೂರು : ಮಾದಕ ವಸ್ತು ದಂಧೆಕೋರರ ವಿರುದ್ಧ ಸಮರ ಸಾರಿರುವ ಬೆಂಗಳೂರು ಪೊಲೀಸರು ರಾಷ್ಟ್ರದಲ್ಲೇ ಮೊದಲ ಬಾರಿಗೆ ವಿದೇಶಿ ಪೆಡ್ಲರ್ ಗಳಿಗೆ ಸಂಬಂಧಿಸಿದ ಹಣ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನೈಜೀರಿಯಾ ಮೂಲದ ಪೀಟರ್ ಇಕೆಡಿ ಬೆಲನ್ವು (38) ಎಂಬ ಪೆಡ್ಲರ್ ಗೆ ಸಂಬಂಧಿಸಿದ 12.60 ಲಕ್ಷ ರೂ ಹಣವನ್ನ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಇದನ್ನೂ ಓದಿ: ಶ್ರೀರಾಮ ಜನ್ಮ ಭೂಮಿಯಲ್ಲಿ ಕರ್ಣಾಟಕ ಬ್ಯಾಂಕ್ ನ 915 ನೇ ಶಾಖೆ ಪ್ರಾರಂಭ
2023ನೇ ಸಾಲಿನ ನವೆಂಬರ್ ತಿಂಗಳಲ್ಲಿ ವಿದ್ಯಾರಣ್ಯಪುರ ಠಾಣಾ ಪೊಲೀಸರು ಆರೋಪಿ ಪೀಟರ್ ಇಕೆಡಿ ಬೆಲನ್ವುನನ್ನ ಬಂಧಿಸಿದ್ದರು. ಡ್ರಗ್ ಪೆಡ್ಲರ್ ಆಗಿರುವ ಆರೋಪಿಯ ಬಳಿ ನಗದು ಹಣ ಮತ್ತು ವಿವಿಧ ಬ್ಯಾಂಕ್‌ಗಳ ಪಾಸ್‌ಬುಕ್, ಡೆಬಿಟ್ ಕಾರ್ಡ್‌ಗಳು ಪತ್ತೆಯಾಗಿದ್ದವು.ಈ ಕುರಿತು ಪ್ರಕರಣದ ತನಿಖೆಯನ್ನು ಮುಂದುವರಿಸಿದ ಸಿಸಿಬಿ ಪೊಲೀಸರು ತನಿಖಾಧಿಕಾರಿಗಳಿಗಿರುವ ಪ್ರದತ್ತ ಅಧಿಕಾರವನ್ನ ಬಳಸಿ ಆರೋಪಿಯ ಪತ್ನಿಯ ಎರಡು ಬ್ಯಾಂಕ್ ಖಾತೆಯಿಂದ 2.55 ಲಕ್ಷ ರೂ ಇತರೆ ಹೆಸರಿನಲ್ಲಿದ್ದ 5 ಬ್ಯಾಂಕ್ ಖಾತೆಗಳಲ್ಲಿದ್ದ 4.90 ಲಕ್ಷ ಸೇರಿ 7 ಬ್ಯಾಂಕ್ ಖಾತೆಗಳಲ್ಲಿ ಒಟ್ಟು 12.60 ಲಕ್ಷ ರೂ ಹಣವನ್ನ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನಂತರ ಈ ಆದೇಶವನ್ನು ಎನ್.ಡಿ.ಪಿಎಸ್ ಕಾಯ್ದೆ 5(ಎ), ಕಲಂ 68 (ಎಫ್) (2)ರಡಿ ಈ ಮುಟ್ಟುಗೋಲು ಆದೇಶ ಅನುಮೋದಿಸಲ್ಪಟ್ಟಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಬೇಕೆ? ಇಲ್ಲಿದೆ 5 ಸುಲಭ ಮಾರ್ಗಗಳು..!
ಆರೋಪಿಯು 2018ರಲ್ಲಿ ವೈದ್ಯಕೀಯ ವೀಸಾದ ಆಧಾರದಲ್ಲಿ ಭಾರತಕ್ಕೆ ಬಂದಿದ್ದು,ನಂತರ 2022ರಲ್ಲಿ ಮಣಿಪುರ ಮೂಲದವಳನ್ನ ಮದುವೆಯಾಗಿದ್ದ. ಆಕೆಯ ಹೆಸರಿನಲ್ಲಿ ಬೆಂಗಳೂರು ನಗರದಲ್ಲಿ ಎರಡು ಬ್ಯಾಂಕ್ ಖಾತೆಗಳನ್ನು ಹಾಗೂ ನಕಲಿ ದಾಖಲಾತಿಗಳನ್ನು ನೀಡಿ ಇತರರ ಹೆಸರಿನಲ್ಲಿ ಐದು ಬ್ಯಾಂಕ್ ಖಾತೆಗಳು ಸೇರಿದಂತೆ ಒಟ್ಟು ಏಳು ಬ್ಯಾಂಕ್ ಖಾತೆಗಳನ್ನು ಹೊಂದಿದ್ದ. ಈ ಖಾತೆಗಳಿಂದ ಗೂಗಲ್ ಪೇ & ಪೋನ್ ಪೇ ಮೂಲಕ ಡ್ರಗ್ ಪೆಡ್ಲಿಂಗ್ ಹಣದ ವಹಿವಾಟನ್ನು ನಿರ್ವಹಿಸುತ್ತಿದ್ದ ಎಂದು ಪೊಲೀಸರ ತನಿಖೆಯಿಂದ ಬಯಲಾಗಿತ್ತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.