Bengaluru Suicide Case: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಂಗಳೂರು ಜಿಲ್ಲೆಯ ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿಯ ಯಡಿಯೂರಪ್ಪ ನಗರದಲ್ಲಿ  ನಡೆದಿದೆ. ನೇಣು ಬಿಗಿದುಕೊಂಡು ದಂಪತಿ ಅವಿನಾಶ್(33), ಮಮತಾ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ರಾಜಾನುಕುಂಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರ್ಥಿಕ ಸಂಕಷ್ಟದಿಂದ ಮನನೊಂದು ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣಾಗಿದೆ ಎಂದು ಹೇಳಲಾಗಿದೆ. 


COMMERCIAL BREAK
SCROLL TO CONTINUE READING

ಗಂಡನ ಆರ್ಥಿಕ ಸಂಕಷ್ಟವೇ ಆತ್ಮಹತ್ಯೆಗೆ ಕಾರಣ?


5 ವರ್ಷಗಳಿಂದ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅವಿನಾಶ್​ ಸುಮಾರು 6 ವರ್ಷದ ಹಿಂದೆ ಕಲಬುರಗಿಯಿಂದ ಬೆಂಗಳೂರಿಗೆ ಕುಟುಂಬ ಸಮೇತ ಬಂದಿದ್ದರಂತೆ. ಪತಿಯ ಆರ್ಥಿಕ ಸಂಕಷ್ಟದಿಂದ ಪತ್ನಿ ಮಮತಾ ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ. ಮೊದಲಿಗೆ ತನ್ನ ಇಬ್ಬರು ಮಕ್ಕಳ ಕತ್ತು ಹಿಸುಕಿ ಕೊಂದು ಬಳಿಕ ತಾನು ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಗಂಡನಿಗೆ ಕರೆ ಮಾಡಿ ಮಮತಾ ಮಾತನಾಡಿದ್ದರಂತೆ. ಸಂಜೆ ಅವಿನಾಶ್ ಹಲವು ಬಾರಿ ಕರೆ ಮಾಡಿದರೂ ಸಹ ಫೋನ್ ರಿಸೀವ್ ಮಾಡಿಲ್ಲ. ಹೀಗಾಗಿ ಮೇಲಿನ ಮನೆಯವರಿಗೆ ಕರೆ ಮಾಡಿ ಪತ್ನಿಗೆ ಫೋನ್ ನೀಡುವಂತೆ ಹೇಳಿದ್ದಾರೆ. ಈ ವೇಳೆ ಅನೇಕ ಬಾರಿ ಮನೆಯ ಬಾಗಿಲು ಬಡಿದರೂ ತೆಗೆದಿಲ್ಲ.


ಇದನ್ನೂ ಓದಿ: ಚಳಿಗಾಲ ಬರುವ ಮೊದಲು ಈಗಲೇ ಈ ಸಿದ್ಧತೆಗಳನ್ನು ಮಾಡಿಕೊಳ್ಳಿ, ನಂತರ ಯಾವುದೇ ವ್ಯಥೆ ಪಡಬೇಕಾಗಿಲ್ಲ


ರಾತ್ರಿ 9 ಗಂಟೆ ವೇಳೆಗೆ ಅವಿನಾಶ್​ ಮನೆಗೆ ವಾಪಸ್ ಬಂದಿದ್ದಾರೆ. ಮತ್ತೊಂದು ಕೀ ಇಂದು ಮನೆ ಬೀಗ ತೆಗೆದು ಒಳ ಹೋದಾಗ ಮಕ್ಕಳನ್ನ ಸಾಯಿಸಿ ಪತ್ನಿ ಆತ್ಮಹತ್ಯೆಗೆ ಶರಣಾಗಿರುವುದನ್ನು ಕಂಡಿದ್ದಾರೆ. ಪತ್ನಿ ಮಕ್ಕಳ ಸಾವನ್ನು ಕಂಡ ಅವಿನಾಶ್ ಬೆಚ್ಚಿಬಿದ್ದಿದ್ದಾರೆ. ನಂತರ ಪತ್ನಿಯ ಮೃತದೇಹವನ್ನು ತೆಗೆದು ಅದೇ ಹಗ್ಗಕ್ಕೆ ಅವಿನಾಶ್ ಕೂಡ ನೇಣಿಗೆ ಶರಣಾಗಿದ್ದಾರೆ. ಸದ್ಯ ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಯಲಹಂಕದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.  


ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ! 


ನಾಲ್ವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅವಿನಾಶ್ ಸಂಬಂಧಿ ದತ್ತು ರಾಥೋಡ್​ ಮಾತನಾಡಿದ್ದಾರೆ. ʼಅವಿನಾಶ್‌ ಸ್ವಂತ ಕ್ಯಾಬ್ ತೆಗೆದುಕೊಂಡು ಓಲಾ ಮತ್ತು ಊಬರ್​ಗೆ ಅಟ್ಯಾಚ್ ಮಾಡಿ ಕೆಲಸ ಮಾಡುತ್ತಿದ್ದರು. ಗಂಡ-ಹೆಂಡತಿ ಮತ್ತು ಮಕ್ಕಳು ಇಬ್ಬರೂ ಸಹ ಅನ್ಯೋನ್ಯವಾಗಿಯೇ ಇದ್ದರು. ಕಳೆದ ವಾರ ನಮ್ಮ ಮಾವನಿಗೆ ಅವಿನಾಶ್ ಕರೆ ಮಾಡಿದ್ದರು. ಕ್ರೆಡಿಟ್ ಕಾರ್ಡ್​​ಗೆ ಹಣ ಬೇಕು ಅಂತಾ ಕೇಳಿದ್ದರು. ಈಗ ನನ್ನ ಹತ್ತಿರ ಹಣ ಇಲ್ಲ ನೋಡುತ್ತೇನೆ ಅಂತಾ ನಮ್ಮ ಮಾವ ತಿಳಿಸಿದ್ದರು. ಆರ್ಥಿಕ ಸಂಕಷ್ಟದಿಂದಲೇ ಈ ಘಟನೆ ನಡೆದಿರಬಹುದುʼ ಎಂದು ಹೇಳಿದ್ದಾರೆ. 


ಇದನ್ನೂ ಓದಿ: "ಸಲ್ಮಾನ್ ಖಾನ್ ಬದುಕಬೇಕೆಂದರೆ ಇರೋದು ಒಂದೇ ದಾರಿ... ಆತ ಪಬ್ಲಿಕ್‌ನಲ್ಲಿ ಹೀಗೆ ಮಾಡಬೇಕು"- ಬಿಷ್ಣೋಯ್ ಗ್ಯಾಂಗ್‌ನಿಂದ ಸಂಚಲನಕಾರಿ ಹೇಳಿಕೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.