ಉಂಡ ಮನೆಗೆ ಕನ್ನ ಹಾಕಿದವಳನ್ನು ವೈದ್ಯಕೀಯ ಸಹಾಯದಿಂದ ಬಂಧಿಸಿದ ಪೊಲೀಸರು: ಹೇಗೆ..?
ನೋಬ್ರೋಕರ್ ನಲ್ಲಿ ಅಡ್ಮಿನ್ ಆಗಿ ಕೆಲಸ ಮಾಡುತ್ತಿದ್ದ ಶಶಿಕಾಂತ್ ಎನ್ನುವವರ ಮನೆಯಲ್ಲಿ ಕೆಲಸಕ್ಕಿದ್ದ ಶಾರದಮ್ಮ ಮನೆಯಲ್ಲಿ ಸಾಕಷ್ಟು ಚಿನ್ನಾಭರಣ ಇರುವುದನ್ನು ಗಮನಿಸಿದ್ದಳು. ಮನೆಯಲ್ಲಿ ಯಾರು ಇಲ್ಲದ ಸಮಯಕ್ಕೆ ಹೊಂಚು ಹಾಕಿ ಕೂತು ಲಾಕರ್ ನಲ್ಲಿದ್ದ ಚಿನ್ನಾಭರಣ ಎಗರಿಸಿದ್ದಳು.
ಬೆಂಗಳೂರು: ಕಳೆದ ವರ್ಷ ನಡೆದ ಕಳ್ಳತನ ಪ್ರಕರಣವೊಂದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಸದ್ಯ ವೈದ್ಯಕೀಯ ಸಹಾಯದಿಂದ ಪ್ರಕರಣವನ್ನು ಭೇದಿಸಿ ಉಂಡ ಮನೆಗೆ ಕನ್ನ ಹಾಕಿದ್ದ ಮಹಿಳೆಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಬಿಡದಿ ಮೂಲದ ಶಾರದಮ್ಮ ಬಂಧಿತ ಮಹಿಳೆಯಾಗಿದ್ದಾಳೆ.
ನೋಬ್ರೋಕರ್ ನಲ್ಲಿ ಅಡ್ಮಿನ್ ಆಗಿ ಕೆಲಸ ಮಾಡುತ್ತಿದ್ದ ಶಶಿಕಾಂತ್ ಎನ್ನುವವರ ಮನೆಯಲ್ಲಿ ಕೆಲಸಕ್ಕಿದ್ದ ಶಾರದಮ್ಮ ಮನೆಯಲ್ಲಿ ಸಾಕಷ್ಟು ಚಿನ್ನಾಭರಣ ಇರುವುದನ್ನು ಗಮನಿಸಿದ್ದಳು. ಮನೆಯಲ್ಲಿ ಯಾರು ಇಲ್ಲದ ಸಮಯಕ್ಕೆ ಹೊಂಚು ಹಾಕಿ ಕೂತು ಲಾಕರ್ ನಲ್ಲಿದ್ದ ಚಿನ್ನಾಭರಣ ಎಗರಿಸಿದ್ದಳು. ಈ ಬಗ್ಗೆ ಅನುಮಾನ ಬಂದು ಮನೆಯವರು ಪ್ರಶ್ನೆ ಮಾಡಿದಾಗ ನಮಗೂ ಕಳ್ಳತನಕ್ಕೂ ಸಂಬಂಧವಿಲ್ಲ ಎಂದಿದ್ದಳು.
ಇದನ್ನೂ ಓದಿ- ಸ್ವಿಮ್ಮಿಂಗ್ ಪೂಲ್ ಗೆ ಚಿನ್ನಾಭರಣ ಧರಿಸಿ ಹೋಗುವ ಮುನ್ನ ಎಚ್ಚರ: ನಿಮ್ಮ ಚಿನ್ನಾಭರಣ ಕಳ್ಳತನವಾಗಬಹುದು..!
ಸಿಸಿಟಿವಿ ಪರಿಶೀಲನೆ ನಡೆಸಿದಾಗ ಆಕೆಯ ಸೀರೆಯ ಸೆರಗಲ್ಲಿ ಚಿನ್ನ ಕದ್ದಿರೋದು ಪತ್ತೆಯಾಗಿತ್ತು. ಕೆಂಗೇರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗಲೂ ನಾನು ಚಿನ್ನಾಭರಣ ಕದ್ದಿಲ್ಲ ಎಂದು ವಾದಿಸಿದ್ದಳು. ಹೀಗಾಗಿ ಪಾಲಿಗ್ರಾಪ್ ಹಾಗೂ ಬ್ರೈನ್ ಮ್ಯಾಪಿಂಗ್ ಮಾಡಿದಾಗ ತಾನೇ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ- ಕಲಘಟಗಿ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ: 32 ಲಕ್ಷ ರೂ. ಮೌಲ್ಯದ ಅಕ್ರಮ ಸಾರಾಯಿ ಜಪ್ತಿ, ನಾಲ್ವರ ಬಂಧನ
ಸದ್ಯ ಶಾರದಮ್ಮಳಿಂದ 35 ಲಕ್ಷ ಮೌಲ್ಯದ 583 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದು ಜೈಲಿಗಟ್ಟಲಾಗಿದೆ. 2022 ರಲ್ಲಿ ಮಹಾಲಕ್ಷ್ಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೇ ರೀತಿ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ ಮಹಿಳೆಯೊಬ್ಬಳನ್ನು ಬಂಧಿಸಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.