ಬೆಂಗಳೂರು : ಹಣ ಬದಲಾಯಿಸಲು ಹೊರಟಿದ್ದ ತಂಡವನ್ನು ವಿಚಾರಣೆ ನೆಪದಲ್ಲಿ ತಡೆದು 10 ಲಕ್ಷ ಕಳ್ಳತನ ಮಾಡಿದ್ದ ಆರೋಪದಡಿ ಹೆಡ್‌ ಕಾನ್‌ಸ್ಟೆಬಲ್ ಮಹೇಂದ್ರಗೌಡ ಎಂಬಾತನನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಬಂಧಿತ ಮಹೇಂದ್ರಗೌಡ, ಚಂದ್ರಾ ಲೇಔಟ್ ಠಾಣೆಯಲ್ಲಿ ಹಲವು ತಿಂಗಳಿನಿಂದ ಕೆಲಸ ಮಾಡುತ್ತಿದ್ದ. ಹೊಯ್ಸಳ ಗಸ್ತು ವಾಹನದ ಕೆಲಸಕ್ಕೆ ಈತನನ್ನು ನಿಯೋಜಿಸಲಾಗಿತ್ತು. ಹಣ ಬದಲಾವಣೆ ಜಾಲದ ಬಗ್ಗೆ ತಿಳಿದುಕೊಂಡಿದ್ದ ಈತ, ಆರೋಪಿ ಶಶಿ ಹಾಗೂ ಇತರರ ಜೊತೆ ಸೇರಿ ಇಂತಹ ಕೃತ್ಯ ಎಸಗಿದ್ದ. ಸದ್ಯ ಮಹೇಂದ್ರಗೌಡ ಜೊತೆ ಶಶಿ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  


ಇದನ್ನೂ ಓದಿ: ಬ್ಯೂಟಿಫುಲ್‌ ಮ್ಯೂಸಿಕಲ್ ಲವ್ ಸ್ಟೋರಿ ʼರೇಮೊʼ ನ. 25ರಂದು ಬಿಡುಗಡೆ


ಘಟನೆಯ ವಿವರ


ಚನ್ನಪಟ್ಟಣ ತಾಲೂಕಿನ ರಾಮಪುರದವರಾದ ಕೃಷಿಕ ಲಿಂಗೇಶ್, ರಿಯಲ್ ಎಸ್ಟೇಟ್ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ. ಇವರಿಗೆ ಬೆಂಗಳೂರಿನ ಪ್ರದೀಪ್ ಎಂಬುವವರ ಪರಿಚಯವಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಲಿಂಗೇಶ್‌ಗೆ ಕರೆ ಮಾಡಿದ್ದ ಪ್ರದೀಪ್, 2,000 ಮುಖಬೆಲೆಯ ನೋಟುಗಳು ಕೆಲವೇ ದಿನಗಳಲ್ಲಿ ರದ್ದಾಗುವ ಸಾಧ್ಯತೆ ಇದೆ. ನನ್ನ ಪರಿಚಯಸ್ಥರೊಬ್ಬರ ಬಳಿ 2,000 ಮುಖಬೆಲೆಯ ನೂರಾರು ಕೋಟಿ ರೂಪಾಯಿ ಹಣವಿದೆ. ಅವರಿಗೆ 500 ಮುಖಬೆಲೆಯ ನೋಟುಗಳನ್ನು ನೀಡಿದರೆ, ಶೇ 10ರಷ್ಟು ಕಮಿಷನ್ ಕೊಡುತ್ತಾರೆ ಎಂದಿದ್ದ. ಇದನ್ನು ನಂಬಿದ್ದ ಲಿಂಗೇಶ್ 50 ಲಕ್ಷ ನೀಡಲು ಸಿದ್ಧರಾಗಿದ್ದರು. ಅಕ್ಟೋಬರ್ 2ರಂದು 50 ಲಕ್ಷ ಸಮೇತ ನಗರಕ್ಕೆ ಬಂದಿದ್ದ ಲಿಂಗೇಶ್, ಪ್ರದೀಪನ  ಕಾರಿನಲ್ಲಿ ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರಕ್ಕೆ ಹೋಗಿದ್ದರು.


ಇದನ್ನೂ ಓದಿ: ಬೆಟ್ಟಿಂಗ್ ಹೆಸರಲ್ಲಿ ಸುಲಿಗೆ : ಇಬ್ಬರು ಪಿಎಸ್ಐ ಸೇರಿ ಐವರು ಪೊಲೀಸರು ಅಮಾನತು


ನೋಟು ಬದಲಾವಣೆ ಜಾಲದ ಸದಸ್ಯರು ಎನ್ನಲಾದ ವೆಟ್ರಿವೇಲು ಹಾಗೂ ಇತರರು ಈ ಸ್ಥಳದಲ್ಲಿ ಹಣ ಬದಲಾವಣೆ ಸಾಧ್ಯವಿಲ್ಲ. ಜ್ಞಾನಭಾರತಿಯ ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ ಬಳಿ ಹೋಗೋಣ ಎಂದು ಲಿಂಗೇಶ್ ಹಾಗೂ ಪ್ರದೀಪ್‌ ಕರೆದುಕೊಂಡು ಅಲ್ಲಿಂದ ಹೊರಟಿದ್ದರು. ಮಾರ್ಗಮಧ್ಯೆ ಸ್ಥಳ ಬದಲಿಸಿದ್ದ ವೆಟ್ರಿವೇಲು ಹಾಗೂ ಇತರರು ಲಿಂಗೇಶ್ ಹಾಗೂ ಪ್ರದೀಪ್ ಅವರನ್ನು ಚಂದ್ರಾ ಲೇಔಟ್‌ಗೆ ಕಡೆಗೆ  ಕರೆದುಕೊಂಡು ಹೋಗಿದ್ದರು. ಅದೇ ಸ್ಥಳಕ್ಕೆ ಶ್ಯಾಮ್‌ ಸಂತೋಷ್ ಎಂಬಾತ ಬಂದಿದ್ದ. ಎಲ್ಲರೂ ಸೇರಿ ಕಾರಿನ ಎದುರು ನಿಂತುಕೊಂಡು ಮಾತನಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಹೋಗಿದ್ದ ಹೆಡ್‌ ಕಾನ್‌ಸ್ಟೆಬಲ್ ಮಹೇಂದ್ರಗೌಡ ಎಲ್ಲರನ್ನೂ ವಿಚಾರಣೆ ನಡೆಸುವ ನೆಪದಲ್ಲಿ ಕಾರಿನಲ್ಲಿದ್ದ 50 ಲಕ್ಷ ಹಣದಲ್ಲಿ 10 ಲಕ್ಷ ರೂಪಾಯಿ ಎಗರಿಸಿ ನಂತರ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದ.


ನಂತರ ಕಾರು ಜಪ್ತಿ ಮಾಡಿ ಲಿಂಗೇಶ್‌ ಹಾಗೂ ಇತರರನ್ನು ಠಾಣೆಗೆ ಕಳುಹಿಸಿ ಕಾರಿನಲ್ಲಿ 40 ಲಕ್ಷ ರೂಪಾಯಿ ಮಾತ್ರ ಇತ್ತು ಎಂದು ಹಿರಿಯ ಅಧಿಕಾರಿಗಳನ್ನು ಬಿಬಿಸಿದ್ದ. ಆದರೆ ಈ ಬಗ್ಗೆ  ಲಿಂಗೇಶ್ ದೂರು ನೀಡಿದಾಗ ಹಿರಿಯ ಅಧಿಕಾರಿಗಳು ಪರಿಶೀಲಿಸಿದಾಗ ಹೆಡ್‌ ಕಾನ್‌ಸ್ಟೇಬ್‌ ಬಂಡವಾಳ ಬಯಲಾಗಿದೆ.  ಸದ್ಯ ಘಟನೆಯ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ  ಹೆಡ್‌ ಕಾನ್‌ಸ್ಟೆಬಲ್ ಅಮಾನತು ಮಾಡಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಆದೇಶ ಹೊರಡಿಸಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.