Hollywood actress Paris Hilton : ಹಾಲಿವುಡ್ ನಟಿ ಪ್ಯಾರಿಸ್ ಹಿಲ್ಟನ್ ಒಂದರ ಹಿಂದೆ ಒಂದರಂತೆ ಹೇಳಿಕೆಗಳನ್ನು ನೀಡುವ ಮೂಲಕ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಇತ್ತೀಚೆಗೆ, ಕಾರ್ಟರ್ ರೆಮ್ ಮಗುವಿನ ತಾಯಿಯಾದ ಪ್ಯಾರಿಸ್ ಹಿಲ್ಟನ್ ತನ್ನ ಮೇಲೆ ಅತ್ಯಾಚಾರದಂತಹ ಘಟನೆ ನಡೆದಿರುವ ಬಗ್ಗೆ ಬಹಿರಂಗಪಡಿಸುವ ಮೂಲಕ ಎಲ್ಲರನ್ನು ಬೆಚ್ಚಿಬೀಳಿಸಿದ್ದಾರೆ. ಈ ಹಿಂದೆ ಹಾಲಿವುಡ್ ಸಿನಿಮಾ ನಿರ್ಮಾಪಕರ ವಿರುದ್ಧ ನಟಿ ದೊಡ್ಡ ಆರೋಪ ಮಾಡಿದ್ದರು. ಈ ದಿನಗಳಲ್ಲಿ ಪ್ಯಾರಿಸ್ ಹಿಲ್ಟನ್ ತನ್ನ ಜೀವನ ಚರಿತ್ರೆಯನ್ನು ಅಂದರೆ ಮಾರ್ಚ್ 2 ರಂದು ಬಿಡುಗಡೆಯಾಗುತ್ತಿರುವ 'ಪ್ಯಾರಿಸ್: ದಿ ಮೆಮೊಯಿರ್' ಪುಸ್ತಕವನ್ನು ಪ್ರಚಾರ ಮಾಡುವಲ್ಲಿ ನಿರತರಾಗಿದ್ದಾರೆ. ಪುಸ್ತಕದಲ್ಲಿ ತಮ್ಮ ವೈಯಕ್ತಿಕ ಬದುಕಿನ ಒಳ್ಳೆಯ ಮತ್ತು ಕೆಟ್ಟ ಅನುಭವಗಳನ್ನು ಹೇಳಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಬಾತ್‌ರೂಮ್‌ಗೆ ಹಿಂಬಾಲಿಸಿದ್ರು : 


ಸಂದರ್ಶನವೊಂದರಲ್ಲಿ, ಪ್ಯಾರಿಸ್ ಹಿಲ್ಟನ್ ಮಾಜಿ ಚಲನಚಿತ್ರ ನಿರ್ಮಾಪಕ ಹಾರ್ವೆ ವೈನ್ಸ್ಟೈನ್ ಬಗ್ಗೆ ದೊಡ್ಡ ಆರೋಪ ಮಾಡಿದ್ದಾರೆ. ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ಹಾರ್ವೆ ವೈನ್ಸ್ಟೈನ್ ಈ ದಿನಗಳಲ್ಲಿ ಜೈಲಿನಲ್ಲಿದ್ದಾರೆ. 2000 ರಲ್ಲಿ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಹಾಲಿವುಡ್ ಸ್ಟಾರ್ ಹಾರ್ವೆ ವೈನ್ಸ್ಟೈನ್ ಅವರೊಂದಿಗೆ ಪ್ಯಾರಿಸ್ ಭಯಾನಕ ಅನುಭವವನ್ನು ಹಂಚಿಕೊಂಡರು. ಆಗ ಪ್ಯಾರಿಸ್‌ಗೆ ಕೇವಲ 19 ವರ್ಷ. ಮಾಧ್ಯಮ ವರದಿಗಳ ಪ್ರಕಾರ, ಪ್ಯಾರಿಸ್ ಅವರು ಈವೆಂಟ್‌ನಲ್ಲಿ ಭಾಗವಹಿಸಲು ಹೋದಾಗ, ಹಾರ್ವೆ ತನ್ನನ್ನು ವಾಶ್‌ರೂಮ್‌ಗೆ ಹಿಂಬಾಲಿಸಿದರು.


[[{"fid":"287769","view_mode":"default","fields":{"format":"default","field_file_image_alt_text[und][0][value]":"Paris Hilton ","field_file_image_title_text[und][0][value]":"ಹಾಲಿವುಡ್ ನಟಿ ಪ್ಯಾರಿಸ್ ಹಿಲ್ಟನ್ "},"type":"media","field_deltas":{"1":{"format":"default","field_file_image_alt_text[und][0][value]":"Paris Hilton ","field_file_image_title_text[und][0][value]":"ಹಾಲಿವುಡ್ ನಟಿ ಪ್ಯಾರಿಸ್ ಹಿಲ್ಟನ್ "}},"link_text":false,"attributes":{"alt":"Paris Hilton ","title":"ಹಾಲಿವುಡ್ ನಟಿ ಪ್ಯಾರಿಸ್ ಹಿಲ್ಟನ್ ","class":"media-element file-default","data-delta":"1"}}]]


ಇದನ್ನೂ ಓದಿ : Parineeti Chopra : ಈ ನಟಿಗೆ ಮಕ್ಕಳು ಬೇಕಂತೆ.. ಹುಡುಗನನ್ನು ಹುಡುಕಿ ಕೊಡಬೇಕಂತೆ


ಪ್ಯಾರಿಸ್ ಹೇಳಿದ್ದೇನು?


ಪ್ಯಾರಿಸ್, 'ನಾನು ನನ್ನ ಸ್ನೇಹಿತನೊಂದಿಗೆ ಊಟ ಮಾಡುತ್ತಿದ್ದೆ ಮತ್ತು ಅವನು (ಹಾರ್ವೆ) ಇದ್ದಕ್ಕಿದ್ದಂತೆ ಟೇಬಲ್‌ಗೆ ಬಂದು 'ನೀವು ನಟಿಯಾಗಲು ಬಯಸುತ್ತೀರಿ' ಎಂದು ಕೇಳಿದರು. ಉತ್ತರವಾಗಿ ನಾನು ಹೌದು ಎಂದು ಹೇಳಿದೆ. ಆ ಸಮಯದಲ್ಲಿ ನನಗೆ ಸಿನಿಮಾ ಮಾಡಬೇಕೆಂಬ ಆಸೆ ಇತ್ತು. ನಂತರ ನಾನು ವಾಶ್ ರೂಮ್ ಕಡೆಗೆ ಹೋದೆ ಮತ್ತು ಅವನು ನನ್ನನ್ನು ಹಿಂಬಾಲಿಸಿದನು. ಅವರು ವಾಶ್ ರೂಮ್ ಬಾಗಿಲು ತೆರೆಯಲು ಪ್ರಯತ್ನಿಸಿದರು. ಅವರು ಬಾಗಿಲನ್ನು ಬಡಿಯುತ್ತಿದ್ದರು ಎಂದು ಹೇಳಿದ್ದಾರೆ. ಆದರೆ, ಪ್ಯಾರಿಸ್ ಆರೋಪದ ಬಗ್ಗೆ ಹಾರ್ವೆಯನ್ನು ಕೇಳಿದಾಗ ಅವರು ನಿರಾಕರಿಸಿದರು.


ಹಾರ್ವೆ ಜೈಲಿನಲ್ಲಿದ್ದಾರೆ 


ಹಾರ್ವೆ, ಇದು ಎಂದಿಗೂ ಸಂಭವಿಸಲಿಲ್ಲ, ನಾನು ಯಾವಾಗಲೂ ಪ್ಯಾರಿಸ್‌ನೊಂದಿಗೆ ಗೌರವ ಮತ್ತು ಘನತೆಯಿಂದ ಮಾತನಾಡುತ್ತೇನೆ. ನಾವು ಯಾವಾಗಲೂ ಉತ್ತಮ ಸ್ನೇಹವನ್ನು ಹಂಚಿಕೊಂಡಿದ್ದೇವೆ ಎಂದಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿ 2013 ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಚಲನಚಿತ್ರ ನಿರ್ಮಾಪಕರಿಗೆ 16 ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆ ವಿಧಿಸಿದ ಅದೇ ದಿನ ಪ್ಯಾರಿಸ್ ಹಾರ್ವೆ ವಿರುದ್ಧ ಈ ಆರೋಪಗಳನ್ನು ಮಾಡಿದರು. 2020 ರಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪದ ನಂತರ ಹಾರ್ವೆ ನ್ಯೂಯಾರ್ಕ್ ಜೈಲಿನಲ್ಲಿ 23 ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. 


ಇದನ್ನೂ ಓದಿ : Hrithik Roshan : ಎಲ್ಲರೆದುರೇ ಹೃತಿಕ್ - ಸಬಾ ಲಿಪ್ ಲಾಕ್, ವಿಡಿಯೋ ವೈರಲ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.