ಕೋಲಾರ: ಅವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟಲಾರದಷ್ಟು  ಪ್ರೀತಿ, ಆದ್ರೆ ಅವರಿಬ್ಬರ ಪ್ರೀತಿಗೆ ಜಾತಿಯ ಸಂಕೋಲೆ ಅಡ್ಡ ಬಂದಿದ್ದು, ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆಯೇ ಕುತ್ತಿಗೆ ಹಿಸುಕಿ‌ 
ಮರ್ಯಾದೆ ಹತ್ಯೆ ಮಾಡಿದ್ದು, ತಾನು ಪ್ರೀಸಿದ ಹುಡುಗಿ ಮೃತಪಟ್ಟಿದ್ದಾಳೆ ಅನ್ನೋ ವಿಷಯ ತಿಳಿಯುತ್ತಿದ್ದಂತೆ ಪಾಗಲ್ ಪ್ರೇಮಿ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡು ಸಾವಿನಲ್ಲಿ ಒಂದಾಗಿರುವ‌ ದಾರುಣ ಘಟನೆ ಕೋಲಾರದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಹೀಗೆ ಈಡೀ ಗ್ರಾಮವೇ ಸೂತಕದಲ್ಲಿರುವುದು, ಸಾವಿನ ಸೂತಕದಿಂದ ಹೊರಬರದೆ ನೋವಿನಲ್ಲಿರುವ ಕುಟುಂಬಗಳು,ಮತ್ತೊಂದಡೆ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್  ಮಾಡಿರುವುದು, ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರದಲ್ಲಿ. ಅದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಬೋಡಗುರ್ಕಿ ಗ್ರಾಮ, ಆಂದ್ರ ಹಾಗೂ ತಮಿಳುನಾಡು ರಾಜ್ಯಗಳಿಗೆ ಕೇವಲ ಕೂಗಳತೆ ದೂರದಲ್ಲಿರುವ ಗ್ರಾಮ. ಈ ಗ್ರಾಮದಲ್ಲಿ ಮರ್ಯಾದ ಹತ್ಯೆಯೊಂದು ನಡೆದು ಹೋಗಿದೆ. ಬೋಡಗುರ್ಕಿ ಗ್ರಾಮದ ಗೊಲ್ಲ ಸಮುದಾಯಕ್ಕೆ ಸೇರಿದ ಕೃಷ್ಣಮೂರ್ತಿ ಎಂಬುವರ ಮಗಳು ಕೀರ್ತಿ (20) ಕೆಜಿಎಫ್​ನಲ್ಲಿ ದ್ವಿತೀಯ ವರ್ಷದ ಪದವಿ ಓದುತ್ತಿದ್ದಳು, ಈ ಯುವತಿ ಅದೇ ಗ್ರಾಮದ ಪರಿಶಿಷ್ಟ ಜನಾಂಗಕ್ಕೆ ಸೇರಿದ ಗಂಗಾಧರ್​ ಎಂಬ ಯುವಕನನ್ನು ಹಲವು ದಿನಗಳಿಂದ ಪ್ರೀತಿಸುತ್ತಿದ್ದಾಳೆ . ಕಳೆದ ಭಾನುವಾರ ಕೀರ್ತಿ ಹುಡುಗನ ಮನೆಯ ಹತ್ತಿರ ಹೋಗಿ ನಿನ್ನನ್ನು ಬಿಟ್ಟು ಬೇರೆ ಯಾರನ್ನು ಮದುವೆ ಯಾಗುವುದಿಲ್ಲವೆಂದು ತಿಳಿಸಿದ್ದಾಳೆ.‌ಅಲ್ಲಿಯವರೆಗೂ ಇವರಿಬ್ಬರ ಲವ್ ವಿಚಾರ ಎರಡು ಮನೆಗಳಲ್ಲಿ ಗೊತ್ತಿರಲಿಲ್ಲ,  ಇನ್ನು ಇವರಿಬ್ಬರ ಪ್ರೀತಿ ವಿಚಾರ ಗ್ರಾಮದಲ್ಲಿ ಹರದಡಿತು. ಈ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾತು ಕಥೆ ನಡೆದಿದೆ ಅಲ್ಲದೆ ಯುವತಿಗೆ ಬುದ್ದಿ ಹೇಳುವ ಕೆಲಸ ಕೂಡಾ ನಡೆದಿತ್ತಾದರೂ ಯವತಿ ತಂದೆ ತಾಯಿಯ ಮಾತನ್ನು ದಿಕ್ಕರಿಸಿ ಆತನನ್ನೇ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ. ಇದರಿಂದ ನಿನ್ನೆ ಬೆಳಿಗ್ಗೆ ಹೊತ್ತಿಗೆ ಯುವತಿ ಕೀರ್ತಿ ತಂದೆ ಕೃಷ್ಣಮೂರ್ತಿ ಮಗಳನ್ನು ಕುತ್ತಿಗೆ ಹಿಸುಕಿ ಸಾಯಿಸಿದ್ದಾನೆ. ಈ ವಿಷಯ ಗ್ರಾಮದಲ್ಲಿ ತಿಳಿದಿದೆ, ವಿಷಯ ತಿಳಿಯುತ್ತಿದ್ದಂತೆ ಅದೇ ಗ್ರಾಮದ ಗಂಗಾಧರ್​ ತಾನು ಪ್ರೀತಿಸುತ್ತಿದ್ದ ಹುಡುಗಿ ಮೃತಪಟ್ಟ ವಿಚಾರ ತಿಳಿದು ಗಾಬರಿಗೊಂಡಿದ್ದಾನೆ, ವಿಷಯ ತಿಳಿಯುತ್ತಿದ್ದಂತೆ ಗ್ರಾಮದಿಂದ ಓಡಿ ಹೋದ ಯುವ ಗಂಗಾಧರ್ ಕಾಮಸಮುದ್ರ ಬಳಿ ಚಲಿಸುತ್ತಿದ್ದ ರೈಲಿಗೆ ಅಡ್ಡಿ ನಿಂತು ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ.


ಇನ್ನು ಗ್ರಾಮದಲ್ಲಿ ಕೀರ್ತಿ ಮತ್ತು ಗಂಗಾಧರ ಒಂದೇ ರಸ್ತೆಯಲ್ಲಿ ವಾಸ ಮಾಡುತ್ತಿದ್ದ ಅಕ್ಕಪಕ್ಕದ ಮನೆಯವರು. ಹೀಗೆ ಓಡಾಡುವಾಗ ಇಬ್ಬರ ನಡುವೆ ಪ್ರೇಮ ಅಂಕುರ ಬೆಳೆದಿದೆ. ಕೀರ್ತಿ ಕೆಜಿಎಫ್ ನಲ್ಲಿ ದ್ವಿತೀಯ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಗಂಗಾಧರ್ ದ್ವಿತೀಯ ಪಿಯುಸಿ ಮುಗಿಸಿ ಗಾರೆ ಮತ್ತು ತಮಟೆ ಹೊಡೆಯುವ ಕೆಲಸಕ್ಕೆ ಹೋಗುತ್ತಿದ. ಪ್ರೇಮ ಅಂಕುರಕ್ಕೆ ಬಿದ್ದ ಗಂಗಾಧರ ಗಾರೆ ಕೆಲಸ ಬಿಟ್ಟು ಐಟಿಐ ಸೇರಲು ಬಯಸಿ ಕೆಜಿಎಫ್ ಕಾಲೇಜಿನಲ್ಲಿ ಅರ್ಜಿಯನ್ನು ಸಲ್ಲಿಸಿದ. ಇನ್ನು ಒಂದು ತಿಂಗಳನಿಂದ ಇಬ್ಬರ ನಡುವೆ‌ ಪ್ರೇಮ‌ ಹೆಚ್ಚಾಗಿ ಕೀರ್ತಿ ಕಳೆದ ಭಾನುವಾರ ನೇರವಾಗಿ ಗಂಗಾಧರ ಮನೆಗೆ ಆಗಮಿಸಿ ಮದುವೆ ಯಾಗುವುದರೆ ಗಂಗಾಧರ್ ನ್ನೇ ಎಂದು‌ ಹೇಳಿದ್ದಾಳೆ. ಇದರಿಂದ‌ ಆತಂಕಗೊಂಡ ಕೀರ್ತಿ ತಂದೆ ಇದಕ್ಕೆ ಬಿಲ್ ಕುಲ್ ಒಪ್ಪದೆ ಮಗಳಿಗೆ ಎಚ್ಚರಿಕೆಯನ್ನು ಕೊಟ್ಟಿದ್ದಾನೆ. ಆದ್ರೆ ಇದಕ್ಕೆ ಮಗಳು ದಿಕ್ಕರಿಸಿದ ಕಾರಣ ಕೃಷ್ಣಮೂರ್ತಿ ಮಗಳನ್ನು ಕುತ್ತಿಗೆ ಹಿಸುಕಿ ಸಾಯಿಸಿದ್ದಾನೆ.  ಇನ್ನು ಹಲವು ಸಮುದಾಯಗಳ ಜನರು ಬದುಕುತ್ತಿದ್ದು ಗ್ರಾಮದಲ್ಲಿ ಇಂಥದೊಂದು ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಒಂದು ರೀತಿಯ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​ ಕೂಡಾ ಮಾಡಲಾಗಿತ್ತು ಇನ್ನು ಕೆಜಿಎಫ್​ ಎಸ್ಪಿ ಧರಣೆದೇವಿ ಗ್ರಾಮಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ನಡೆದಿರುವ ಘಟನೆ ಹಿನ್ನೆಲೆ ಯಾವುದೇ ಅಹಿತರಕ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಎರಡು ಕುಟುಂಗಳಿಗೆ ತಿಳಿಹೇಳುವ ಕೆಲಸ ಮಾಡಲಾಗಿದೆ. ಸದ್ಯ ಗ್ರಾಮದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಲಾಗಿದೆ, ಪೊಲೀಸರ ಬಂದೋಬಸ್ತ್​ನಲ್ಲಿ ಎರಡು ಕುಟುಂಬಗಳ ಸಮ್ಮುಖದಲ್ಲೇ ಅಂತ್ಯಸಂಸ್ಕಾರ ಮಾಡಲಾಗಿದೆ.
ಇನ್ನು ಪೋಲೀಸರು ಕೃಷ್ಣಮೂರ್ತಿ ಅವರನ್ನು ಬಂಧಿಸಿ ತಮ್ಮ ವಶಕ್ಕೆ ಪಡೆದಿದ್ದಾರೆ. ಬಂಧಿತ ಕೃಷ್ಣಮೂರ್ತಿ ಅನ್ಯ ಜಾತಿಯ ಮದುವೆಗೆ ಇಷ್ಟವಿಲ್ಲದೆ  ಮರ್ಯಾದೆ ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಎಸ್ಪಿ ತಿಳಿಸಿದ್ದಾರೆ.
 


https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK