Crime News: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಗಂಡನೇ ಹೆಂಡತಿಯನ್ನು ಕೊಡಲಿಯಿಂದ ಭೀಕರವಾಗಿ ಕೊಲೆಗೈದು, ಪೋಲಿಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಹುಬ್ಬಳ್ಳಿ ಜಿಲ್ಲೆಯ ಆನಂದ ನಗರದ ಘೋಡಕೆ ಪ್ಲಾಟ್'ನ ನಿವಾಸಿಯಾಗಿದ್ದ ಮಂಜುಳಾ ಮುತ್ತಳಿ ಎಂಬಾಕೆಯೇ ಕೊಲೆಯಾದ ದುರ್ದೈವಿಯಾಗಿದ್ದು, ಇಂದು ಬೆಳಿಗ್ಗೆ ಆಕೆಯ ಗಂಡ ಭೀಮಪ್ಪ ಹಣಕಾಸಿನ ವಿಚಾರಕ್ಕೆ ಜಗಳ ತೆಗೆದಿದ್ದಾನೆ. 


ಇದನ್ನೂ ಓದಿ- ಜೈನಮುನಿ ಕೊಲೆಯಲ್ಲಿ ಉಗ್ರರ ಕೈವಾಡ!: ಸಿದ್ದು ಸವದಿ ಆರೋಪಕ್ಕೆ ಪ್ರಿಯಾಂಕ ಖರ್ಗೆ ತಿರುಗೇಟು


ಪತಿ-ಪತ್ನಿಯ ಜಗಳ ಅತಿರೇಕಕ್ಕೆ ತಿರುಗಿದ್ದು ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಪತಿ  ಮನೆಯಲ್ಲಿದ್ದ ಕೊಡಲಿಯಿಂದ ಮಂಜುಳಾಗೆ ಮನಬಂದಂತೆ ಹೊಡೆದ ಪರಿಣಾಮ ತೀವ್ರವಾದ ರಕ್ತಸ್ರಾವದಿಂದ ಆಕೆ ಸಾವನ್ನಪ್ಪಿದ್ದಾಳೆ. 


ಇದನ್ನೂ ಓದಿ- ಶಿಶ್ನ ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಎಂಬಿಬಿಎಸ್‌ ವಿದ್ಯಾರ್ಥಿ..!


ಕೊಲೆ ಮಾಡಿದ ತದನಂತರ ಆರೋಪಿ ಭೀಮಪ್ಪ ತಾನಾಗಿಯೇ ಹಳೇಹುಬ್ಬಳ್ಳಿ ಪೋಲಿಸ್ ಠಾಣೆಗೆ ಹೋಗಿ  ಶರಣಾಗಿದ್ದಾನೆ. ಇನ್ನು ಘಟನೆ ಮಾಹಿತಿ ತಿಳಿಯುತ್ತಿದ್ದ ಹಾಗೇ ಕೊಲೆಯಾದ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಈ ದುರ್ಘಟನೆ ಕುರಿತಂತೆ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.