ಧಿಢೀರ್ ಶ್ರೀಮಂತನಾಗಿದ್ದ ʼಶೂ ಕಳ್ಳʼನ ಬಂಧನ..! ಲಕ್ಷ.. ಲಕ್ಷ.. ಬೆಲೆಬಾಳುವ ಬಂಗಾರ ವಶಕ್ಕೆ
ಮೊದ ಮೊದಲು ಮನೆ ಮುಂದೆ ಇಟ್ಟಿದ್ದ ಶೂ ಕಳ್ಳತನ ಮಾಡ್ತಿದ್ದ. ಒಮ್ಮೆ ಶೂ ಕಳ್ಳತನ ಮಾಡಬೇಕಾದ್ರೆ ಶೂ ನಲ್ಲಿ ಮನೆಯ ಕೀ ಸಿಕ್ಕಿದೆ. ಮನೆಯಿಂದ ಹೊರಗೆ ಹೋಗಿದ್ದ ಮಾಲೀಕರು ಶೂ ನಲ್ಲಿ ಬೀಗದ ಕೀ ಇಟ್ಟು ಹೋಗಿದ್ದರು.. ಮುಂದೆನಾಯ್ತು..? ಇಲ್ಲಿದೆ ಸಂಪೂರ್ಣ ವಿವರ..
ಬೆಂಗಳೂರು : ಆತ ಮನೆ ಮುಂದೆ ಇಟ್ಟಿದ್ದ ಶೂ ಕದಿಯುತ್ತಿದ್ದ ಸಾಮಾನ್ಯ ಕಳ್ಳ. ಆದ್ರೆ ಅದೊಂದು ದಿನ ನಡೆದ ಘಟನೆ ಆತನ ಬದುಕನ್ನೇ ಬದಲಿಸಿಬಿಟ್ಟಿತ್ತು. ಧಿಢೀರ್ ಅಂತಾ ಶ್ರೀಮಂತನಾಗಿಬಿಟ್ಟಿದ್ದ. ಅದೇ ಕೆಲಸ ಮುಂದುವರೆಸಿದ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ..
ಈ ಮೇಲಿನ ಫೋಟೊದಲ್ಲಿ ಕಾಣುತ್ತಿರುವ ಆರೋಪಿಯ ಹೆಸರು ಮುನಿಯಪ್ಪನ್ ಅಲಿಯಾಸ್ ಮುನಿಯಾ. ಬೆಂಗಳೂರಿನ ಬಿಟಿಎಂ 1ನೇ ಹಂತದಲ್ಲಿರುವ ಗುರುಪ್ಪನ ಪಾಳ್ಯ ನಿವಾಸಿ. ಹಗಲು ಹೊತ್ತಲ್ಲಿ ಆಟೋ ಓಡಿಸ್ತಿದ್ದ ಆಸಾಮಿ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಳ್ತಿದ್ದ. ನಂತರ ರಾತ್ರಿ ವೇಳೆ ಬಂದು ಅತ್ತ ಇತ್ತ ನೋಡ್ತಿದ್ದ. ಯಾರು ಇಲ್ಲ ಅನ್ನೋದು ಕನ್ಫರ್ಮ್ ಆಗ್ತಿದ್ದಂತೆ ಬೀಗ ಒಡೆದು ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡ್ತಿದ್ದ.
ಇದನ್ನೂ ಓದಿ: "ಪಾಕ್ ಪರ ಜೈಕಾರ ಸಾಬೀತಾದರೆ ಕಠಿಣ ಶಿಕ್ಷೆ"
ಹೀಗೆ ಕಳ್ಳತನವನ್ನೇ ಕಾಯಕ ಮಾಡ್ಕೊಂಡು ಓಡಾಡ್ತಿದ್ದ ಆಸಾಮಿಯನ್ನ ಬೈಯಪ್ಲನಹಳ್ಳಿ ಪೊಲೀಸರು ಬಂಧಿಸಿದ್ದು, ಬಂಧಿತನಿಂದ 7 ಲಕ್ಷ ಮೌಲ್ಯದ 132 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಈತನ ಬಂಧನದಿಂದ ವಿವಿಧ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಐದು ಪ್ರಕರಣಗಳು ಬೆಳಕಿಗೆ ಬಂದಿದೆ.
ಅಷ್ಟಕ್ಕೂ ಈ ಮುನಿಯಪ್ಪನ್ ಏಕಾ ಏಕಿ ಮನೆಗಳ್ಳನಾಗಿದ್ದವನಲ್ಲ. ಮೊದ ಮೊದಲು ಮನೆ ಮುಂದೆ ಇಟ್ಟಿದ್ದ ಶೂ ಕಳ್ಳತನ ಮಾಡ್ತಿದ್ದ. ಒಮ್ಮೆ ಶೂ ಕಳ್ಳತನ ಮಾಡಬೇಕಾದ್ರೆ ಶೂ ನಲ್ಲಿ ಮನೆಯ ಕೀ ಸಿಕ್ಕಿದೆ. ಮನೆಯಿಂದ ಹೊರಗೆ ಹೋಗಿದ್ದ ಮಾಲೀಕರು ಶೂ ನಲ್ಲಿ ಬೀಗದ ಕೀ ಇಟ್ಟು ಹೋಗಿದ್ದರು.
ಇದನ್ನೂ ಓದಿ:ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಿ; ಇಲ್ಲದಿದ್ದರೆ ಪರವಾನಿಗೆ ರದ್ದು
ಕೀ ಓಪನ್ ಮಾಡಿ ಒಳಗೆ ಹೋದವನು ಚಿನ್ನಾಭರಣ ಕದ್ದು ಪರಾರಿಯಾಗಿದ್ದ. ಅಂದಿನಿಂದ ಫುಲ್ ಟೈಂ ಮನೆಗಳ್ಳತನಕ್ಕೆ ಇಳಿದುಬಿಟ್ಟಿದ್ದ. ಹೀಗೆ ಸಾಲು ಸಾಲು ಕಳ್ಳತನ ಮಾಡಿದ್ದವನು ಕೊನೆಗೂ ಲಾಕ್ ಆಗಿದ್ದಾನೆ. ಸದ್ಯ ಆರೋಪಿಯನ್ನ ಬಂಧಿಸಿರೊ ಬೈಯಪ್ಪನಹಳ್ಳಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.ದುಡಿಯೊ ವಯಸ್ಸಲ್ಲಿ ದುಡಿದು ತಿನ್ನೋದನ್ನ ಬಿಟ್ಟು,ಕಳ್ಳತನಕ್ಕೆ ಕೈ ಹಾಕಿ ಲಾಕ್ ಆಗಿದ್ದಾನೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ