Bengaluru Crime News: ಆಕೆ ಯಾವ ಸಿನಿಮಾ ನಟಿಗೂ ಕಡಿಮೆ ಇಲ್ಲದ ಬ್ಯೂಟಿ. ವಿದೇಶದಲ್ಲಿ ವ್ಯಾಸಂಗ ಮಾಡಿ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದವಳು. ಆದರೆ ಅನುಮಾನ ಎಂಬ ಭೂತ ತಲೆಗೇರಿಸಿಕೊಂಡ ಗಂಡನ ಮನೆಯವರ ಕಾಟ ತಾಳಲಾರದೆ ಮನನೊಂದು ನೇಣಿಗೆ ಶರಣಾಗಿದ್ದಾಳೆ. ಐಶ್ವರ್ಯ ಎಂಬಾಕೆಯೇ ಮೃತಪಟ್ಟ ದುರ್ದೈವಿ. 


COMMERCIAL BREAK
SCROLL TO CONTINUE READING

ಸೌಂದರ್ಯದಲ್ಲಿ ರೂಪವತಿ ಆಗಿದ್ದ ಐಶ್ವರ್ಯ ಕಳೆದ ಐದು ವರ್ಷದ ಹಿಂದೆ ರಾಜ್ಯದ ಪ್ರತಿಷ್ಟಿತ ಐಸ್ ಕ್ರೀಂ ಕಂಪನಿ ಮಾಲೀಕ ಗಿರಿಯಪ್ಪ ಗೌಡನ ಪುತ್ರ ರಾಜೇಶ್ ಎಂಬಾತನನ್ನು ಮದುವೆಯಾಗಿದ್ದಳು. ಬಿಇ ಅಂತಿಮ ವರ್ಷದಲ್ಲಿದ್ದ ಐಶ್ವರ್ಯಳನ್ನು ಮುಂದೆ‌ ಓದಿಸೋದಾಗಿ ಮಾತು ಕೊಟ್ಟಿದ್ದ ಗಿರಿಯಪ್ಪ ಗೌಡ ಫ್ಯಾಮಿಲಿ ಅದರಂತೆ ಅಮೇರಿಕಾಗೆ ಐಶ್ವರ್ಯಾಳನ್ನ ಕಳುಹಿಸಿ ಮಾಸ್ಟರ್ ಮಾಡಿಸಿದ್ದರು. ಈ ವೇಳೆ ಐಶ್ವರ್ಯ ಪಾಲಿಗೆ ವಿಲನ್ ಆಗಿಬಂದಿದ್ದು ಇದೇ ಐಶ್ವರ್ಯ ಸೋದರತ್ತೆ ಗೀತಾ ಮತ್ತು ಅತ್ತೆ ಮಗಳು ಲಿಪಿ. 


ಇದನ್ನೂ ಓದಿ- ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವು..!


ಐಶ್ವರ್ಯ ತಂದೆ ಸುಬ್ರಹ್ಮಣ್ಯ ಜೊತೆಗೆ ಆಸ್ತಿ ವಿಚಾರಕ್ಕೆ ಕಿರಿಕ್ ಮಾಡಿಕೊಂಡಿದ್ದ ಗೀತಾ, ಐಶ್ವರ್ಯ ಅಮೆರಿಕಾದಲ್ಲಿ ಸ್ನೇಹಿತರ ಜೊತೆಗೆ ಇದ್ದ ಒಂದಷ್ಟು ಪೋಟೋಗಳನ್ನ ಐಶ್ವರ್ಯ ಇನ್ಸ್ಟಾಗ್ರಾಮ್ ನಿಂದ ಸೇವ್ ಮಾಡಿಕೊಂಡಿದ್ದಳು. ಐಶ್ವರ್ಯ ಮಾಡ್ರನ್ ಡ್ರೆಸ್ ಹಾಕಿದ್ದ ಫೋಟೋಗಳನ್ನ ಕ್ರಾಪ್ ಮಾಡಿ ಐಶ್ವರ್ಯ ಮಾವ ಗಿರಿಯಪ್ಪಗೆ  ಕಳುಹಿಸಿ ನಿಮ್ಮ ಸೊಸೆ ಅಮೇರಿಕಾಗೆ ಓದೋಕೆ ಹೋಗಿಲ್ಲ ಶೋಕಿ ಮಾಡೋಕೆ ಹೋಗಿದ್ದಾಳೆ ಅಂತಾ ಐಶ್ವರ್ಯ ಬಗ್ಗೆ ಇಲ್ಲ ಸಲ್ಲದನ್ನ ಹೇಳಿ ತಲೆ ಕೆಡಿಸಿದ್ದರು. ಇದೇ ಅನುಮಾನದ ಮೇಲೆ ಅಮೇರಿಕಾದಿಂದ ಮನೆಗೆ ಬಂದ ಐಶ್ವರ್ಯಾಳಿಗೆ ಗಂಡ ರಾಜೇಶ್, ಮಾವ ಗಿರಿಯಪ್ಪ, ಅತ್ತೆ ಸೀತಾ, ಮೈದುನ ವಿಜಯ್, ಓರಗಿತ್ತಿ ತಸ್ಮಿ ಕಿರುಕುಳ ನೀಡಿದ್ದರಂತೆ. ಇದರಿಂದ ಮನ ನೊಂದ ಐಶ್ವರ್ಯ ತಾಯಿ ಮನೆಗೆ ಬಂದು ಕಳೆದ ತಿಂಗಳು 26ರಂದು ನೇಣಿಗೆ ಶರಣಾಗಿದ್ದಾಳೆ.


ಇದನ್ನೂ ಓದಿ- ಮಾಲ್‌ನಲ್ಲಿ ಮಹಿಳೆರ ಜೊತೆ ಅನುಚಿತ ವರ್ತನೆ ತೋರಿದ್ದ ಆರೋಪಿ ಪತ್ತೆ..! ʼಶಿಕ್ಷಕʼರಂತೆ ಇವರು


ಇನ್ನು ಘಟನೆ ಸಂಬಂಧ ಐಶ್ವರ್ಯ ತಾಯಿ ಉಷಾ ಗೊವಿಂದರಾಜನಗರ ಠಾಣೆಯಲ್ಲಿ ದೂರು ನೀಡಿದ್ದು, ದೂರಿನ್ವಯ ಪೊಲೀಸರು ಗಿರಿಯಪ್ಪ, ಸೀತಾ, ರಾಜೇಶ್, ಸೇರಿ ಐವರನ್ನು ಬಂಧಿಸಿದ್ದಾರೆ.


ಇನ್ನೂ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಐಶ್ವರ್ಯ ತನ್ನ ಕಣ್ಣುಗಳನ್ನ ಇಬ್ಬರಿಗೆ ದಾನ ಮಾಡಿ ಮಣ್ಣು ಸೇರಿದ್ದಾಳೆ. ಅನುಮಾನ ಎಂಬ ಭೂತ ತಲೆಗೆ ಹತ್ತಿಸಿಕೊಂಡು ಒಂದು ಹೆಣ್ಣಿನ ಸಾವಿಗೆ ಕಾರಣವಾದ ಇಡೀ ಕುಟುಂಬ ಈಗ ಪೊಲೀಸರ ಅತಿಥಿಯಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.