Crime News Kannada: ಹುಬ್ಬಳ್ಳಿ ಸಿಸಿಬಿ ಪೋಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ 11.57 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿರುವ ಘಟನೆ ಹುಬ್ಬಳ್ಳಿಯ ಕೇಶ್ವಾಪುರದ ಆಜಾದ್ ನಗರದಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಹೈಟೆಕ್ ಡ್ರಗ್ಸ್‌ ಮಾರಾಟ ಯತ್ನ ವಿಫಲ:
ಈ ಮೂವರು ಬಂಧಿತ ಆರೋಪಿಗಳು ಕಾರಿನಲ್ಲಿ ಬಂದು ಎಂಡಿಎಂಎ ಎಂಬ ಹೈಟೆಕ್ ಡ್ರಗ್ಸ್‌ ನ್ನು ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಈ ಕುರಿತಂತೆ ಮಾಹಿತಿ ಪಡೆದು ಆರೋಪಿಗಳಿಗಾಗಿ ಬಾಳೆ ಬೀಸಿದ್ದ ಹುಬ್ಬಳ್ಳಿ ಸಿಸಿಬಿ ಪೊಲೀಸರು,  ಆರೋಪಿಗಳನ್ನು ಬಂಧಿಸಿ ಡ್ರಗ್ಸ್ ಮಾರಾಟ ಯತ್ನವನ್ನು ವಿಫಲಗೊಳಿಸಿದ್ದಾರೆ. 


ಇದನ್ನೂ ಓದಿ- ಸಿಎಂ ಮನೆ ಪಕ್ಕದಲ್ಲೇ ಕೆಜಿಗಟ್ಟಲೇ ಚಿನ್ನ ಕದ್ದ ಕಳ್ಳ


ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟದಲ್ಲಿ ತೊಡಗಿದ್ದರ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ವಿಭಾಗದ ಎಸಿಪಿ ಎಸ್.ಟಿ.ಒಡೆಯರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ತಂಡವು ಸಿಸಿಬಿ ವಿಭಾಗದ ಪೊಲೀಸ್ ಇನ್ಸಪೆಕ್ಟರ್‌ ಮಾರುತಿ ಗುಳ್ಳಾರಿ, ಪ್ರಭು ಗಂಗೇನಹಳ್ಳಿ ಮತ್ತಿತರರ ಸಿಬ್ಬಂದಿಯನ್ನು ಒಳಗೊಂಡಿತ್ತು ಎಂದು ತಿಳಿದುಬಂದಿದೆ. 


ಇದನ್ನೂ ಓದಿ- ಪೋಕ್ಸೋ ಪ್ರಕರಣ: ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ 


ಹುಬ್ಬಳ್ಳಿ ಗಾಂಧಿವಾಡದ ಅನಫಲ್ ಅಬ್ದುಲ್ ಅಜೀಜ್, ಆಕಾಶಪಾರ್ಕ ನ ವಿಕ್ರಮ್ ಚೌಧರಿ, ನವನಗರದ ದಾವಲ್ ಮಲಿಕ್ ನದಾಫ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 1,38,450 ರೂ. ಮೌಲ್ಯದ 0.923 ಗ್ರಾಂ ತೂಕದ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಇದಲ್ಲದೆ, ಕೃತ್ಯಕ್ಕೆ ಬಳಸಿದ ಒಂದು ಕಾರ್, 3 ಮೊಬೈಲ್, 4000 ರೂ. ನಗದು ಸೇರಿ ಒಟ್ಟು 11.57 ಲಕ್ಷ ರೂ ಮೌಲ್ಯದ ವಸ್ತು ವಶಕ್ಕೆ ಪಡೆಯಲಾಗಿದ್ದು, ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಸಿಸಿಬಿ ಪೋಲೀಸರ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.