ಅಳಿಯನನ್ನೇ ಸರಪಳಿಯಲ್ಲಿ ಕಟ್ಟಿ ಹಾಕಿ ಅಮಾನುಷ ಕೃತ್ಯ
ಹೆಂಡತಿ ತವರು ಮನೆ ಸೇರಿದ ಬಳಿಕ ಕುಡಿತಕ್ಕೆ ದಾಸನಾಗಿದ್ದ ರಂಗನಾಥ, ಮಾವ ಉತ್ತಮಸ್ಥನಾದರೂ ಊರಲ್ಲಿ ಅನ್ನ ಆಹಾರ ಇಲ್ಲದೆ ಅಲೆಯುತ್ತಿದ್ದ. ಆದರೆ, ಇದ್ದಕ್ಕಿದ್ದಂತೆ ಈತನ ಮಾವ ಉಮೇಶ್ ಮತ್ತು ಹೆಂಡತಿ ಅಮೃತ ಮತ್ತು ಕುಟುಂಬಸ್ಥರು ಅವನನ್ನು ಮನೆಗೆ ಕರೆತಂದು ಸರಪಳಿ ಹಾಕಿ ಬಂಧಿಸಿದ್ದಾರೆ.
ಚಿತ್ರದುರ್ಗ: ಅಮಾಯಕ ಯುವಕನನ್ನು ನಾಯಿಯನ್ನು ಕಟ್ಟುವಂತೆ ಸರಪಳಿಯಲ್ಲಿ ಕಟ್ಟಿ ಹಾಕಿ ಥಳಿಸಿರುವ ಘಟನೆ ಹಿರಿಯೂರು ತಾಲ್ಲೂಕಿನ ಅಬ್ಬಿನಹೊಳೆ ಠಾಣಾ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಅದೂ ಕೂಡ ಅಗ್ನಿ ಸಾಕ್ಷಿಯಾಗಿ ಕೈ ಹಿಡಿದ ಹೆಂಡತಿಯೇ ತನ್ನ ತಂದೆಯ ಜೊತೆಗೂಡಿ ಪತಿಯ ಕಾಲಿಗೆ ಸರಪಳಿ ಹಾಕಿ ಅಮಾನುಷವಾಗಿ ಥಳಿಸಿರುವುದು ಇಡೀ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ. ರಂಗನಾಥ ಎಂಬಾತನೇ ಆ ದುರ್ದೈವಿ ಪತಿ.
ವಾಸ್ತವವಾಗಿ, ಯುವಕ ರಂಗನಾಥ, ಹಿರಿಯೂರು ತಾಲ್ಲೂಕಿನ ಹರ್ತಿಕೋಟೆಯಲ್ಲಿ ವಾಸವಿದ್ದ. ಉತ್ತಮ ದುಡಿಮೆ ಮಾಡುತ್ತಾ ಸುಖವಾಗಿದ್ದ. ಆದರೆ ಕೋವಿಡ್ ನಂತರ ಹರ್ತಿಕೋಟೆಯಲ್ಲಿ ವಾಸವಿದ್ದ ರಂಗನಾಥನಿಗೆ ಹೊಸಹಳ್ಳಿಯ ಉಮೇಶ್ ಎಂಬುವವರ ಮಗಳು ಅಮೃತ ಎಂಬಾಕೆಯನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಆದರೆ, ಅದ್ಯಾಕೋ ಅಮೃತ ಗಂಡನಿಂದ ದೂರವಾಗಿ ತವರು ಮನೆ ಸೇರಿದ್ದಳು.
ಇದನ್ನೂ ಓದಿ- ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಚಾಕು ಇರಿತಕ್ಕೆ ಯುವತಿ ಬಲಿ
ಹೆಂಡತಿ ತವರು ಮನೆ ಸೇರಿದ ಬಳಿಕ ಕುಡಿತಕ್ಕೆ ದಾಸನಾಗಿದ್ದ ರಂಗನಾಥ, ಮಾವ ಉತ್ತಮಸ್ಥನಾದರೂ ಊರಲ್ಲಿ ಅನ್ನ ಆಹಾರ ಇಲ್ಲದೆ ಅಲೆಯುತ್ತಿದ್ದ. ಆದರೆ, ಇದ್ದಕ್ಕಿದ್ದಂತೆ ಈತನ ಮಾವ ಉಮೇಶ್ ಮತ್ತು ಹೆಂಡತಿ ಅಮೃತ ಮತ್ತು ಕುಟುಂಬಸ್ಥರು ಅವನನ್ನು ಮನೆಗೆ ಕರೆತಂದು ಸರಪಳಿ ಹಾಕಿ ಬಂಧಿಸಿದ್ದಾರೆ. ಮಾತ್ರವಲ್ಲ, ತುತ್ತು ಅನ್ನವನ್ನೂ ಹಾಕದೆ ಉಪವಾಸ ಕೆಡವಿದ್ದರು ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಗ್ರಾಮಸ್ಥರಿಂದ ಮಾಹಿತಿ ಪಡೆಯುತ್ತಿದ್ದಂತೆ ಅಬ್ಬಿನಹೊಳೆ ಪೊಲೀಸರು, ವಕೀಲರು, ಕನ್ನಡ ಪರ ಸಂಘಟನೆ ಮುಖಂಡ ಭೇಟಿ ನೀಡಿ ಪರಿಶೀಲಿಸಿದರು. ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ವಕೀಲರು ಮತ್ತು ಸಂಘಟನೆಯಿಂದ ದೂರು ನೀಡಿದ್ದು. ಇಡೀ ಗ್ರಾಮದಲ್ಲಿ ಇವರ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದೆ.
ಇದನ್ನೂ ಓದಿ- Bengaluru : ಲೋಕಾಯುಕ್ತಗೆ ದೂರು ನೀಡಿದಕ್ಕೆ ಬಾರ್ಗೆ ಬೆಂಕಿ ಇಡಿಸಿದ ಅಬಕಾರಿ ಇನ್ಸ್ಪೆಕ್ಟರ್
ಇದೇ ವೇಳೆಗೆ ಸ್ಥಳಕ್ಕೆ ರಂಗನಾಥ್ ಬಂಧುಗಳು ಭೇಟಿ ನೀಡಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಮಾತಿನ ಚಕಮಕಿ ನಡೆದಿದೆ. ಕುಡಿತದ ಮತ್ತಿನಲ್ಲಿ ಉಮೇಶ್ ಅವರು ಸಂಘಟನೆ ಮುಖಂಡರು, ವಕೀಲರು ಮತ್ತು ಸಿವಿಲ್ ಡ್ರೆಸ್ ನಲ್ಲಿದ್ದ ಪೋಲೀಸರ ಮೇಲೆ ಹಲ್ಲೆಗೆ ಯತ್ನ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.