Heinous crime : ಶವವನ್ನು 72 ತುಂಡುಗಳಾಗಿ ಕತ್ತರಿಸಿದ್ದ ಕಿರಾತಕ! ಶ್ರದ್ಧಾ ಕೊಲೆಗಿಂತಲೂ ಭಯಾನಕವಾಗಿದೆ ಈ ಘಟನೆ..
Heinous crime : ದೆಹಲಿಯ ಮೆಹ್ರೌಲಿಯಲ್ಲಿ ನಡೆದ ಶ್ರದ್ಧಾ ಹತ್ಯೆ ಪ್ರಕರಣ ದೇಶಾದ್ಯಂತ ಚರ್ಚೆಯಾಗುತ್ತಿದೆ. ಆರೋಪಿ ಶ್ರದ್ಧಾಳನ್ನು 35 ತುಂಡು ಮಾಡಿ ಎಸೆದ ರೀತಿ ಭಯ ಹುಟ್ಟಿಸುವಂತಿದೆ. ಇದೊಂದು ವಿಚಿತ್ರ ಘಟನೆ ಎಂದು ಜನ ಹೇಳುತ್ತಿದ್ದಾರೆ. ಆದರೆ ಈ ಪ್ರಕರಣವು ಇದೀಗ ಡೆಹ್ರಾಡೂನ್‌ನ ಅನುಪಮಾ ಗುಲಾಟಿ ಹತ್ಯೆ ಪ್ರಕರಣವನ್ನು ನೆನಪಿಸಿದೆ.
ನವದೆಹಲಿ : ದೆಹಲಿಯ ಮೆಹ್ರೌಲಿಯಲ್ಲಿ ನಡೆದ ಶ್ರದ್ಧಾ ಹತ್ಯೆ ಪ್ರಕರಣ ದೇಶಾದ್ಯಂತ ಚರ್ಚೆಯಾಗುತ್ತಿದೆ. ಆರೋಪಿ ಶ್ರದ್ಧಾಳನ್ನು 35 ತುಂಡು ಮಾಡಿ ಎಸೆದ ರೀತಿ ಭಯ ಹುಟ್ಟಿಸುವಂತಿದೆ. ಇದೊಂದು ವಿಚಿತ್ರ ಘಟನೆ ಎಂದು ಜನ ಹೇಳುತ್ತಿದ್ದಾರೆ. ಆದರೆ ಈ ಪ್ರಕರಣವು ಇದೀಗ ಡೆಹ್ರಾಡೂನ್‌ನ ಅನುಪಮಾ ಗುಲಾಟಿ ಹತ್ಯೆ ಪ್ರಕರಣವನ್ನು ನೆನಪಿಸಿದೆ. ಅಕ್ಟೋಬರ್ 17, 2010 ರಂದು, ಡೆಹ್ರಾಡೂನ್‌ನ ಕಣಿವೆಯಲ್ಲಿ ಶ್ರದ್ಧಾ ಕೊಲೆಗಿಂತ ಹೆಚ್ಚು ಭಯಾನಕವಾಗಿರುವ ಘಟನೆ ನಡೆಯಿತು. ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.
ಅನುಪಮಾ ಪತಿ ರಾಜೇಶ್ ಆಕೆಯನ್ನು ಕೊಂದು ಶವವನ್ನು 72 ತುಂಡುಗಳನ್ನಾಗಿ ಮಾಡಿದ್ದ. ಆ ನಂತರ ಒಂದೊಂದಾಗಿ ಬಿಸಾಕುತ್ತಿದ್ದ. ಮತ್ತೊಂದೆಡೆ, ಅನುಪಮಾ ಅವರ ಕುಟುಂಬ ಸದಸ್ಯರು ಆಕೆಗಾಗಿ ಹುಡುಕಾಟ ಆರಂಭಿಸಿದ್ದರು. ಆದರೆ ಯಾವುದೇ ಸುದ್ದಿ ಸಿಗದಿದ್ದಾಗ, ಅನುಪಮಾ ಅವರ ಸಹೋದರ ಸೂರಜ್ 12 ಡಿಸೆಂಬರ್ 2010 ರಂದು ದೆಹಲಿಯಿಂದ ಡೆಹ್ರಾಡೂನ್ ತಲುಪಿದರು. ಅಲ್ಲಿಗೆ ಹೋದ ಮೇಲೆ ತಂಗಿಯ ಕೊಲೆಯಾದ ವಿಷಯ ತಿಳಿಯಿತು. ಇದಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿದರು. 2011ರಲ್ಲಿ ಡೆಹ್ರಾಡೂನ್ ಪೊಲೀಸರು ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಇದನ್ನೂ ಓದಿ : ಈ ವೆಬ್ ಸಿರೀಸ್‌ನಿಂದ ಸಿಕ್ಕಿತ್ತಂತೆ ಕೊಲೆ ಐಡಿಯಾ! ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ಯಾಕೆ? ಇಲ್ಲಿದೆ ಬೆಚ್ಚಿ ಬೀಳಿಸುವ ಸತ್ಯ
1999ರಲ್ಲಿ ಪ್ರೇಮ ವಿವಾಹವಾಗಿತ್ತು :
ದೆಹಲಿ ಮೂಲದ ಅನುಪಮಾ ಅವರು 1999 ರಲ್ಲಿ ರಾಜೇಶ್ ಗುಲಾಟಿ ಅವರೊಂದಿಗೆ ಪ್ರೇಮ ವಿವಾಹವಾಗಿದ್ದರು. ರಾಜೇಶ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ಮದುವೆಯಾದ ನಂತರ ಇಬ್ಬರೂ 2000ನೇ ಇಸವಿಯಲ್ಲಿ ಅಮೆರಿಕಕ್ಕೆ ಹೋದರು. ಅಲ್ಲಿಂದ ಮರಳಿ ಭಾರತಕ್ಕೆ ಬಂದ ಬಳಿಕ ತನ್ನ 2 ಮಕ್ಕಳೊಂದಿಗೆ ಡೆಹ್ರಾಡೂನ್ ನ ಪ್ರಕಾಶ್ ನಗರದಲ್ಲಿ ನೆಲೆಸಿದ್ದರು. ಭಾರತಕ್ಕೆ ಮರಳಿದ ನಂತರ ಇಬ್ಬರ ನಡುವೆ ಜಗಳ ಆರಂಭವಾಯಿತು. ಕೊಲೆಯಾದ ದಿನವೂ ಇಬ್ಬರ ನಡುವೆ ಜಗಳ ನಡೆದಿತ್ತು. ಈ ವೇಳೆ ಅನುಪಮಾ ಅವರ ತಲೆಗೆ ಜೋರಾದ ಪೆಟ್ಟುಬಿದ್ದಿದೆ. ಇದಾದ ಬಳಿಕ ರಾಜೇಶ್ ಅನುಪಮಾಳ ಬಾಯಿಗೆ ದಿಂಬು ಒತ್ತಿ ಹಿಡಿದು ಕೊಲೆ ಮಾಡಿದ್ದ.
ಹಾಲಿವುಡ್ ಸಿನಿಮಾ ನೋಡಿ ಬಂದಿತ್ತು ಪ್ಲಾನ್ :
ಪೊಲೀಸರು ರಾಜೇಶ್‌ನನ್ನು ವಿಚಾರಣೆಗೊಳಪಡಿಸಿದಾಗ ಹಾಲಿವುಡ್ ಚಿತ್ರ ನೋಡಿದ ಬಳಿಕ ಅನುಪಮಾ ಅವರನ್ನು ಕೊಲ್ಲಲು ಯೋಜನೆ ರೂಪಿಸಿದ್ದರು ಎಂದು ತಿಳಿದು ಬಂದಿದೆ. ಮೊದಲು ಅನುಪಮಾಳನ್ನು ಕೊಂದು, ಅಪರಾಧವನ್ನು ಮರೆಮಾಚಲು ಡೀಪ್ ಫ್ರೀಜರ್ ಖರೀದಿಸಿ ಅದರಲ್ಲಿ ಅನುಪಮಾ ಮೃತದೇಹವನ್ನು ಇಟ್ಟಿದ್ದ. ಮೃತ ದೇಹವು ಮಂಜುಗಡ್ಡೆಯಲ್ಲಿ ಹೆಪ್ಪುಗಟ್ಟಿದಾಗ, ಅದನ್ನು ಸ್ಟೋನ್ ಕಟ್ಟರ್ ಯಂತ್ರದಿಂದ 72 ತುಂಡುಗಳಾಗಿ ಕತ್ತರಿಸಿ ನಿಧಾನವಾಗಿ ಮಸ್ಸೂರಿಯ ಕಾಡುಗಳಲ್ಲಿ ಎಸೆಯಲು ಪ್ರಾರಂಭಿಸಿದ್ದ. ಅಷ್ಟರಲ್ಲಿ ಅನುಪಮಾ ಸಹೋದರನಿಗೆ ಸತ್ಯ ತಿಳಿಯಿತು. ಅವರ ದೂರಿನ ಮೇರೆಗೆ ಪೊಲೀಸರು ರಾಜೇಶ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ಬಳಿಕ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 15 ಲಕ್ಷ ರೂಪಾಯಿ ದಂಡ ವಿಧಿಸಿತು.
ಇದನ್ನೂ ಓದಿ : ಶ್ರದ್ಧಾ ರುಂಡವನ್ನು ಅಫ್ತಾಬ್ ದಿನವೂ ನೋಡುತ್ತಿದ್ದ : ಹೇಗಿತ್ತು ಆ ಕರಾಳರಾತ್ರಿ...!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.