ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಪ್ರಕರಣ.. ʻಎನ್‌ಕೌಂಟರ್ ನಕಲಿʼ ಎಂದ ಆಯೋಗ
ಹೈದರಾಬಾದ್ ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಆರೋಪಿಗಳ ಎನ್‌ಕೌಂಟರ್ ಬಗ್ಗೆ ತನಿಖೆ ನಡೆಸುತ್ತಿರುವ ಸುಪ್ರೀಂಕೋರ್ಟ್ ನೇಮಿಸಿದ ಆಯೋಗ ತನ್ನ ವರದಿಯಲ್ಲಿ ಆರೋಪಿಗಳ ಎನ್‌ಕೌಂಟರ್ ನಕಲಿ ಎಂದು ಸಲ್ಲಿಸಿದೆ.
ಹೈದರಾಬಾದ್: ಹೈದರಾಬಾದ್ ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಆರೋಪಿಗಳ ಎನ್‌ಕೌಂಟರ್ ಬಗ್ಗೆ ತನಿಖೆ ನಡೆಸುತ್ತಿರುವ ಸುಪ್ರೀಂಕೋರ್ಟ್ ನೇಮಿಸಿದ ಆಯೋಗ ತನ್ನ ವರದಿಯಲ್ಲಿ ಆರೋಪಿಗಳ ಎನ್‌ಕೌಂಟರ್ ನಕಲಿ ಎಂದು ಸಲ್ಲಿಸಿದೆ. ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು "ಉದ್ದೇಶಪೂರ್ವಕವಾಗಿ ಕೊಲ್ಲಾಗಿದೆ. ಅವರನ್ನು ಕೊಲ್ಲುವ ಉದ್ದೇಶದಿಂದ ಗುಂಡು ಹಾರಿಸಲಾಗಿದೆ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವಿಚಾರದಲ್ಲಿ ಆಯೋಗ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದ್ದು, ಆಯೋಗದ ವರದಿ ಕುರಿತು ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ತೆಲಂಗಾಣ ಹೈಕೋರ್ಟ್‌ಗೆ ಸೂಚಿಸಿದೆ.
ಇದನ್ನೂ ಓದಿ: Pension Scheme : ಸರ್ಕಾರದ ಈ ಯೋಜನೆಯಲ್ಲಿ ಪಡೆಯಿರಿ ₹60,000 ಪಿಂಚಣಿ!
ನಾಲ್ವರು ಆರೋಪಿಗಳು ಪಿಸ್ತೂಲ್ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದರು ಎಂದು ಪೊಲೀಸರು ಹೇಳಿರುವುದನ್ನು ನಂಬಲು ಸಾಧ್ಯವಿಲ್ಲ ಮತ್ತು ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ವರದಿ ತಿಳಿಸಿದೆ.
ಆಯೋಗವು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದೆ. ಈ ಎನ್‌ಕೌಂಟರ್ ಪೊಲೀಸರ ಸೃಷ್ಟಿ. ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳ ಮೇಲೆ ಅವರನ್ನು ಸಾಯಿಸುವ ಬಯಕೆಯಿಂದಲೇ ಉದ್ದೇಶಪೂರ್ವಕವಾಗಿ ಗುಂಡು ಹಾರಿಸಲಾಗಿತ್ತು. ಒಟ್ಟಾರೆ ಅಭಿಪ್ರಾಯದ ಪ್ರಕಾರ, ಆರೋಪಿಗಳ ಮೇಲೆ ಅವರನ್ನು ಸಾಯಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ಗುಂಡು ಹಾರಿಸಲಾಗಿದೆ ಎಂದು ಆಯೋಗ ವರದಿಯಲ್ಲಿ ತಿಳಿಸಿದೆ.
ಆಯೋಗವು ತನಿಖೆಯ ಸಮಯದಲ್ಲಿ ಸಂಗ್ರಹಿಸಲಾದ ವಿಧಿವಿಜ್ಞಾನದ ವಸ್ತುಗಳ ಪಾಲನೆಯಲ್ಲಿ ಅನೇಕ ಲೋಪಗಳನ್ನು ಗಮನಿಸಿದೆ. ಪಾಲನೆಯಲ್ಲಿನ ಯಾವುದೇ ಲೋಪವು ಫೋರೆನ್ಸಿಕ್ ವಸ್ತುವಿನ ಸಾಕ್ಷ್ಯದ ಮೌಲ್ಯವನ್ನು ನಾಶಪಡಿಸುತ್ತದೆ. ಆದ್ದರಿಂದ ಫೋರೆನ್ಸಿಕ್ ಸಾಕ್ಷ್ಯಗಳ ಸಂಗ್ರಹಣೆ ಮತ್ತು ಸಂರಕ್ಷಣೆಯನ್ನು ಸರಿಯಾಗಿ ದಾಖಲಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ.
ಇದನ್ನೂ ಓದಿ: Viral video : ವೇದಿಕೆಯಲ್ಲಿದ್ದ ಕುರ್ಚಿಗೆ ಒದ್ದು ಅಳುತ್ತಾ ವೇದಿಕೆಯಿಂದ ಕೆಳಗಿಳಿದ ವರ .! ಇಷ್ಟಕ್ಕೂ ಆಗಿದ್ದೇನು ?
2019 ರಲ್ಲಿ 26 ವರ್ಷದ ಪಶುವೈದ್ಯೆಯೊಬ್ಬರು ಕ್ಲಿನಿಕ್‌ಗೆ ಭೇಟಿ ನೀಡಿ ಮನೆಗೆ ತೆರಳುತ್ತಿದ್ದಾಗ ಅತ್ಯಾಚಾರ ನಡೆಸಿ ಸಜೀವ ದಹನ ಮಾಡಲಾಗಿತ್ತು. ಕೆಲವು ಗಂಟೆಗಳ ನಂತರ, ಆಕೆಯ ಮೃತದೇಹವು ಹೆದ್ದಾರಿಯ ಅಂಡರ್‌ಪಾಸ್‌ನಲ್ಲಿ ಪತ್ತೆಯಾಗಿತ್ತು. ಈ ಸಂಬಂಧ (ದಿಶಾ ಪ್ರಕರಣ) ಸಂಬಂಧಿಸಿದಂತೆ ಮೊಹಮದ್ ಆರಿಫ್, ಜೋಲು ಶಿವ, ಜೋಲು ನವೀನ್ ಮತ್ತು ಚಿಂತಕುಂಟ ಚೆನ್ನಕೇಶವುಲು ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. 2019 ರಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಈ ನಾಲ್ವರು ಕೊಲ್ಲಲ್ಪಟ್ಟರು. ಈ ಸಂಬಂಧ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಎನ್‌ಕೌಂಟರ್ ಬಗ್ಗೆ ತನಿಖೆ ನಡೆಸುವಂತೆ ಮೂವರು ಸದಸ್ಯರ ಆಯೋಗವನ್ನು ಸುಪ್ರೀಂಕೋರ್ಟ್ ನೇಮಕ ಮಾಡಿತ್ತು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.