Freedom App Fraud Case: ಇಂಡಿಯನ್ ಮನಿ ಫ್ರೀಡಂ ಆ್ಯಪ್ CEO ಸುಧೀರ್ ಅರೇಸ್ಟ್!
Freedom App Fraud Case: ಮಂಗಳವಾರ ಈ ಪ್ರಕರಣ ಸಂಬಂಧ ಬನಶಂಕರಿ ಪೊಲೀಸರು ವಿಚಾರಣೆಗೆ ಕರೆದಿದ್ದರು. ವಿಚಾರಣೆ ನಡೆಯುವಾಗಲೇ ಸುಧೀರ್ ವಿರುದ್ದ 4 ಪ್ರತ್ಯೇಕ ದೂರು ದಾಖಲಾಗಿದ್ದವು. ಈ ದೂರು ಆಧಾರಿಸಿ ಪ್ರತ್ಯೇಕ FIR ದಾಖಲಿಸಿ ಅವರನ್ನು ಬಂಧಿಸಲಾಗಿದೆ.
ಬೆಂಗಳೂರು: ಫಾರ್ಟ್ ಟೈಂ ಕೆಲಸದ ಆಮಿಷವೊಡ್ಡಿ ಹಣ ನೀಡದೆ ವಂಚಿಸಿರುವ ಆರೋಪದ ಮೇಲೆ ಇಂಡಿಯನ್ ಮನಿ ಮತ್ತು ಫೈನಾನ್ಸಿಯಲ್ ಫ್ರೀಡಂ ಆ್ಯಪ್‍ನ ಸಿಇಒ ಸಿ.ಎಸ್.ಸುಧೀರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ವಂಚನೆಗೊಳಗಾಗಿರುವ 21 ಮಂದಿ ನೀಡಿದ ದೂರಿನ ಅನ್ವಯ ಸಿ.ಎಸ್.ಸುಧೀರ್ ಸೇರಿದಂತೆ 23 ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ನಿರೀಕ್ಷಣಾ ಜಾಮೀನು ಪಡೆದಿದ್ದ ಸುಧೀರ್‍ನನ್ನು ಮತ್ತೊಂದು ಪ್ರಕರಣದಲ್ಲಿ ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ʼನಮ್ಮ ಸರ್ಕಾರ ಬಂದ್ರೆ ಕೆಲವೊಂದು ಮೀಸಲಾತಿಯನ್ನ ತೆಗೆದು ಹಾಕುತ್ತೇವೆʼ
4 ಪ್ರತ್ಯೇಕ ವಂಚನೆ ಕೇಸ್ ದಾಖಲಾದ ಹಿನ್ನೆಲೆ ವಿಚಾರಣೆಗೆ ಬಂದಿದ್ದ ಸಿ.ಎಸ್.ಸುಧೀರ್‍ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಳೆದ ಏಪ್ರಿಲ್ 4ರಂದು ಸುಧೀರ್ ಸೇರಿ 22 ಜನರ ವಿರುದ್ದ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸುಧೀರ್ ಅಂಡ್ ಟೀಂ ನಿರೀಕ್ಷಣಾ ಜಾಮೀನು ಪಡೆದಿತ್ತು.
ಮಂಗಳವಾರ ಈ ಪ್ರಕರಣ ಸಂಬಂಧ ಬನಶಂಕರಿ ಪೊಲೀಸರು ವಿಚಾರಣೆಗೆ ಕರೆದಿದ್ದರು. ವಿಚಾರಣೆ ನಡೆಯುವಾಗಲೇ ಸುಧೀರ್ ವಿರುದ್ದ 4 ಪ್ರತ್ಯೇಕ ದೂರು ದಾಖಲಾಗಿದ್ದವು. ಈ ದೂರು ಆಧಾರಿಸಿ ಪ್ರತ್ಯೇಕ FIR ದಾಖಲಿಸಿ ಅವರನ್ನು ಬಂಧಿಸಲಾಗಿದೆ. ಸದ್ಯ ACMM ಕೋರ್ಟ್‍ಗೆ ಬನಶಂಕರಿ ಪೊಲೀಸರು ಸುಧೀರ್‍ನನ್ನು ಹಾಜರುಪಡಿಸಿದ್ದಾರೆ.
ಇದನ್ನೂ ಓದಿ: Crime News: ಇಂಗ್ಲಿಷ್ ಡಿಕ್ಷನರಿಯಂತೆ ಕಂಡರೂ ಇದು ಡಿಕ್ಷನರಿಯಲ್ಲ.. ಇದರ ಅಸಲಿಯತ್ತು ಬೇರೆನೆ ಇತ್ತು!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.