ಬೆಂಗಳೂರು: ಯುವಕರನ್ನು ಟಾರ್ಗೆಟ್ ಮಾಡಿ ನಶೆ ಬರುವ ಮಾದಕ ವಸ್ತುವಿರುವ ಸಿರಪ್ ಮಾರಾಟ ಮಾಡುತ್ತಿದ್ದ ಹಿನ್ನೆಲೆ ಜೆಪಿ ನಗರ ಪೊಲೀಸರು ಅಮಾನ್ ಉಲ್ಲಾ ಎಂಬುವವನ್ನ ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ವಿಜಯನಗರದ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಮೆಡಿಕಲ್ ಮಾಲೀಕ ಇಮ್ರಾನ್ ನಿಂದ ನಿಷೇಧಿತ ಎಸ್ಕೂಪ್ ಹೆಸರಿನ ಸಿರಪ್ ಖರೀದಿ ಮಾಡಿ ಜೆಪಿ ನಗರ ಆಕ್ಸ್‌ಫರ್ಡ್ ಗ್ರೌಂಡ್ ಬಳಿ ಯುವಕರಿಗೆ ಮಾರಲು ಯತ್ನಿಸುತ್ತಿದ್ದ. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನ ಬಂಧಿಸಿ 356ಬಾಟಲ್ ಎಸ್ಕೂಪ್ ಸಿರಪ್ ಬಾಟಲ್ ಸೀಜ್ ಮಾಡಿದ್ದಾರೆ.


ಇದನ್ನೂ ಓದಿ: 30ರ ಹರೆಯದ WWE ʼಟಫ್ ಎನಫ್ʼ ಫೈಟರ್‌ ನಿಧನ : ನಿನ್ನೆ ಆರೋಗ್ಯವಾಗಿದ್ದ ಲೀ ಇಂದಿಲ್ಲ..!


ಎಸ್ಕೂಪ್ ಸಿರಪ್ ನಲ್ಲಿ ಕೊಡೈನ್ ಎಂಬ ಮಾದಕ ವಸ್ತುವಿನ ಅಂಶವಿದ್ದು, ಈ ಸಿರಪ್ ನೋವು ಮತ್ತು ಕೆಮ್ಮಿನ ಚಿಕಿತ್ಸೆಗೆ ಬಳಸಲಾಗುತ್ತಿತ್ತು. ಮಾದಕ‌ ಅಂಶ ಹೆಚ್ಚಾಗಿರುವ ಕಾರಣ ಈ ಸಿರಪ್ಪನ್ನು ರಾಜ್ಯದಲ್ಲಿ ನಿಷೇಧಿಸಲಾಗಿತ್ತು. ಆದರೆ ಕಡಿಮೆ ಬೆಲೆಗೆ ಸಿಗುವ ಈ ಸಿರಪ್ ನ ಮಾದಕ ವ್ಯಸನಿಗಳು ಬಳಸಿ ನಶೆ ಏರಿಸಿಕೊಳ್ಳುತ್ತಿದ್ದರು.
ಸದ್ಯ ಈ ಜಾಲ ಹಿಂದೆ ಬಿದ್ದಿರುವ ಜೆಪಿ ನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ