ಬೆಂಗಳೂರು : ಆನ್​ಲೈನ್​ ಪರಿಚಯವಾಗುವವರನ್ನು ನಂಬಿಕೊಂಡು ಪ್ರೀತಿ, ಮದುವೆ ಅಂತಾ ಹೋದ್ರೆ ಏನಾಗುತ್ತೆ ಎಂಬುದಕ್ಕೆ ಈ ಸ್ಟೋರಿ ತಾಜಾ ಉದಾಹರಣೆಯಾಗಿದೆ. ಸುಂದರ ಯುವತಿಯನ್ನು ಶಾದಿ ಡಾಟ್​ ಕಾಮ್​​ನಲ್ಲಿ​ ಮಾಡಿಕೊಂಡ ಯುವಕನೊಬ್ಬ ಆಕೆಯನ್ನು ಹುರಿದುಮುಕ್ಕಿ ಈಗ ಕೈ ಕೊಟ್ಟು ಬೇರೆ ನಿಖಾ ಆಗಿದ್ದಾನೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Pavitra Lokesh: ನರೇಶ್ ನನ್ನ ಸಂಗಾತಿ ಮಾತ್ರವಲ್ಲ.. ಪವಿತ್ರಾ ಲೋಕೇಶ್ ಕುತೂಹಲಕಾರಿ ಪ್ರತಿಕ್ರಿಯೆ!


ತಂದೆ- ತಾಯಿ ಕಳೆದುಕೊಂಡಿದ್ದ ಯುವತಿಯಬ್ಬಳು ಬದುಕಿನ ಆಸರೆಗಾಗಿ ಶಾದಿ ಡಾಟ್​ ಕಾಮ್​​ನಲ್ಲಿ ಪ್ರೊಫೈಲ್​​​ ಹಾಕಿದ್ದರು. ಯುವತಿಯ ಪ್ರೊಫೈಲ್​ ನೋಡಿದ ನೋಮನ್​​​​ ಷರೀಫ್​​ ಎಂಬಾತ ಫ್ರೆಂಡ್​ ಮಾಡಿಕೊಂಡಿದ್ದ. ಇದು ಪ್ರೇಮಕ್ಕೆ ತಿರುಗಿ ಮದುವೆಯಾಗುವುದಾಗಿ ನಂಬಿಸಿದ್ದ.


ಇನ್ನೂ ಮುಂದುವರೆದು, ನಮ್ಮ ತಂದೆ ತಾಯಿ ನಿನ್ನನ್ನು ನೋಡಬೇಕು ಎಂದು ಯುವತಿಯನ್ನು ಓಯೋ ರೂಂ ಬುಕ್ ಮಾಡಿ ಹೊಟೇಲ್​ಗೆ ಕರೆಸಿದ್ದ. ನಂತರ ವರಸೆ ಬದಲಾಯಿಸಿದ ನಯ ವಂಚಕ, ಹೇಗೋ ರೂಮ್ ಗೆ ಬಂದಿದ್ದೇವೆ.. ಮುಂದೆ ಮದುವೆಯಾಗೋಣ ಎಂದು‌ ಯುವತಿಯನ್ನ ನಂಬಿಸಿ ದೈಹಿಕವಾಗಿಯೂ ಬಳಸಿಕೊಂಡಿದ್ದ.  


ಇದನ್ನೂ ಓದಿ: ಬಾತ್‌ ರೂಂನಲ್ಲಿ ಖ್ಯಾತ ನಟನ ಮೃತದೇಹ ಪತ್ತೆ..! ಡ್ರಗ್ಸ್‌ ಓವರ್‌ಡೋಸ್‌ ಕಾರಣವೇ..?


ಯುವತಿಯನ್ನು ಮದುವೆ ಆಗ್ತೀನಿ ಅಂತಾ ಹಲವು ಬಾರಿ ದುರ್ಬಳಕೆ ಮಾಡಿಕೊಂಡಿದ್ದ.  ಯುವತಿ ಹೇಗಾದ್ರೂ ಮದುವೆ ಆಗ್ತಾನೆ ಅಂತಾ ನಂಬಿದ್ದಳು. ಆದರೆ ಈ ಐನಾತಿ ನೋಮನ್​ ಕೊನೆಗೆ ಬೇರೊಬ್ಬರ ಜತೆ ನಿಖಾ ಮಾಡಿಕೊಂಡಿದ್ದಾನೆ. ಸದ್ಯ ವಂಚನೆಗೊಳಗಾದ ಯುವತಿ ನ್ಯಾಯಕ್ಕಾಗಿ ಡಿಜೆ ಹಳ್ಳಿ ಠಾಣೆಗೆ ದೂರು ನೀಡಿದ್ದಾಳೆ. ಯುವತಿಯ ದೂರಿನ ಮೇಲೆ  FIR ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.