Karnataka : ಜೈಲಲ್ಲಿದ್ದ ಮಗನಿಗೆ ಮಾದಕವಸ್ತು ನೀಡಲು ಯತ್ನಿಸಿದ ಪೊಲೀಸರ ಅತಿಥಿಯಾದ ತಾಯಿ!
ಪರ್ವೀನ್ ತಾಜ್ ಬಂಧಿತ ಮಹಿಳೆ. ಈಕೆಯ ಮಗ ಮಹಮ್ಮದ್ ಬಿಲಾಲ್ ಎಂಬಾತ ರಾಬರಿ ಸೇರಿದಂತೆ 11 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಹೀಗಾಗಿ ಕೋಣನಕುಂಟೆ ಪೊಲೀಸರು ಬಿಲಾನ್ ನನ್ನ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ರು.
ಬೆಂಗಳೂರು : ಜೈಲು ಹಕ್ಕಿಯಾಗಿರುವ ಮಗನಿಗೆ ಬಿರಿಯಾನಿ ಕೊಡುವ ನೆಪದಲ್ಲಿ ಮಾದಕ ವಸ್ತು ಹ್ಯಾಶಿಷ್ ಆಯಿಲ್ ನೀಡಲು ಯತ್ನಿಸಿದ್ದ ತಾಯಿಯನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಪರ್ವೀನ್ ತಾಜ್ ಬಂಧಿತ ಮಹಿಳೆ. ಈಕೆಯ ಮಗ ಮಹಮ್ಮದ್ ಬಿಲಾಲ್ ಎಂಬಾತ ರಾಬರಿ ಸೇರಿದಂತೆ 11 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಹೀಗಾಗಿ ಕೋಣನಕುಂಟೆ ಪೊಲೀಸರು ಬಿಲಾನ್ ನನ್ನ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ರು.
ಇದನ್ನೂ ಓದಿ : ಪೊಲೀಸರ ಭರ್ಜರಿ ಕಾರ್ಯಾಚರಣೆ: 650 ಕೆಜಿ ರಕ್ತಚಂದನ ವಶಕ್ಕೆ
ತಾಯಿ-ಮಗ ಶಿಕಾರಿಪಾಳ್ಯದಲ್ಲಿ ವಾಸವಾಗಿದ್ರು. ಮಗನನ್ನ ನೋಡಲು ಆಗಾಗ ಪರ್ವೀನ್ ಜೈಲಿಗೆ ಬರುತ್ತಿದ್ದಳು. ಆದರೆ ಕಳೆದ 14ರಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದ ಈಕೆ ಮಗನಿಗೆ ಊಟ ಕೊಡುವ ನೆಪದಲ್ಲಿ ಊಟದ ಬಾಕ್ಸ್ ನಲ್ಲಿ 5 ಲಕ್ಷ ಮೌಲ್ಯದ ಹ್ಯಾಶಿಷ್ ಆಯಿಲ್ ತಂದಿದ್ದಳು. ಜೈಲು ಸಿಬ್ಬಂದಿ ಈಕೆಯನ್ನು ಪರಿಶೀಲಿಸಿದ ವೇಳೆ ಮಾದಕ ವಸ್ತು ಪತ್ತೆಯಾಗಿತ್ತು. ತಕ್ಷಣ ಜೈಲು ಸಿಬ್ಬಂದಿ ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿ ಪರ್ವೀನ್ ತಾಜ್ ಹಾಗೂ ಮಗ ಬಿಲಾಲ್ ಮೇಲೆ ಕೇಸ್ ದಾಖಲಿಸರುವ ಪರಪ್ಪನ ಅಗ್ರಹಾರ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.