ತಿರುವನಂತಪುರ: ಕೇರಳದ ತಿರುವನಂತಪುರಂ ಜಿಲ್ಲೆಯಲ್ಲಿ ಭಯಾನಕ ಕೌಟುಂಬಿಕ ದೌರ್ಜನ್ಯದ ಘಟನೆ ನಡೆದಿದೆ. ಸಾಲ ತೀರಿಸಲು ಕೆಲಸಕ್ಕೆ ಸೇರಿದ ಪತ್ನಿಯನ್ನು ಅಮಾನುಷವಾಗಿ ಥಳಿಸಿ ವಿಡಿಯೋ ಮಾಡಿದ 27 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.  


COMMERCIAL BREAK
SCROLL TO CONTINUE READING

27 ವರ್ಷದ ದಿಲೀಪ್​ ಎಂಬಾತನೇ ಈ ಹೀನ ಕೃತ್ಯ ಎಸಗಿದ್ದಾನೆ. ತನ್ನ ಪತ್ನಿಗೆ ಮನಬಂದಂತೆ ಥಳಿಸಿ ದೌರ್ಜನ್ಯ ನಡೆಸಿದ್ದೂ ಅಲ್ಲದೇ ವಿಡಿಯೋ ಮಾಡಿ ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ. ಪತ್ನಿಗೆ ದಿಲೀಪ್‌ ಥಳಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಮಲಯಿಂಕೀಝು ಪೊಲೀಸರು ಬುಧವಾರ ಆತನನ್ನು ಬಂಧಿಸಿದ್ದಾರೆ.


ಇದನ್ನೂ ಓದಿ: Diwali 2022: ದೀಪಾವಳಿಗೆ ದೇಶದ ಯುವಜನರಿಗೆ ಭಾರಿ ಉಡುಗೊರೆ ನೀಡಲು ಮುಂದಾದ ಪ್ರಧಾನಿ ಮೋದಿ


ತನ್ನಇಚ್ಛೆಗೆ ವಿರುದ್ಧವಾಗಿ ಪತ್ನಿ ಸೂಪರ್ ಮಾರ್ಕೆಟ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದಳೆಂಬ ಕಾರಣಕ್ಕೆ ತಿರುವನಂತಪುರಂ ಮೂಲದ ದಿಲೀಪ್‍ ದೌರ್ಜನ್ಯ ನಡೆಸಿದ್ದಾನೆ. ಸಾಲ ತೀರಿಸಲೆಂದು ಆತನ ಪತ್ನಿ ಕೆಲಸಕ್ಕೆ ಹೋಗುತ್ತಿದ್ದಳಂತೆ. ಇದನ್ನು ಸಹಿಸದ ಆತ ಹೆಂಡತಿಗೆ ಮನಬಂದಂತೆ ಥಳಿಸಿದ್ದಾನೆ.  


ವೈರಲ್ ಆಗಿರುವ ವಿಡಿಯೋದಲ್ಲಿ ದಿಲೀಪ್ ತನ್ನ ಪತ್ನಿಯನ್ನು ಥಳಿಸುತ್ತಿರುವುದನ್ನು ಕಾಣಬಹುದು. ‘ಸಾಲ ತೀರಿಸಲು ನಾನು ಕೆಲಸಕ್ಕೆ ಹೋಗುತ್ತಿದ್ದೇನ’ ಅಂತಾ ಆತನ ಪತ್ನಿ ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.


ಇದನ್ನೂ ಓದಿ: ಗೂಗಲ್ ಗೆ 1,338 ಕೋಟಿ ರೂ.ದಂಡ ವಿಧಿಸಿದ ಭಾರತದ ಸ್ಪರ್ಧಾತ್ಮಕ ಆಯೋಗ


ಮಹಿಳೆಯ ಮೂಗಿಗೆ ತೀವ್ರ ಏಟು ಆಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಎಷ್ಟೇ ಪರಿಪರಿಯಾಗಿ ಬೇಡಿಕೊಂಡರೂ ಆಕೆಗೆ ಥಳಿಸಿ ಬಾಯಿಯನ್ನು ಜಜ್ಜಿದ್ದಾನೆ, ಇದಲ್ಲದೆ ಆಕೆಯ ಮುಖದ ಮೇಲೆ ರಕ್ತ ಬರಲು ನಾನೇ ಕಾರಣ ಅಂತಾ ವಿಡಿಯೋದಲ್ಲಿ ದಿಲೀಪ್ ಹೇಳಿದ್ದಾನೆ. ದಿಲೀಪನ ಪತ್ನಿ ನೀಡಿದ ದೂರಿನ ಮೇರೆಗೆ ಮಲಯಂಕಿಝು ಪೊಲೀಸರು ಆರೋಪಿಯನ್ನು ಬಂಧಿಸಿದ್ದು,  ಕೊಲೆ ಯತ್ನ ಮತ್ತು ಇತರ ಹಲವು ಆರೋಪಗಳಡಿ ಪ್ರಕರಣ ದಾಖಲಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ