Crime News: ಮಹೇಂದ್ರ ಬೊಲೆರೋ ಪಿಕಪ್ ವಾಹನದಲ್ಲಿ ಅಕ್ರಮವಾಗಿ ವದೆ ಮಾಡುವ ಉದ್ದೇಶದಿಂದ ಎರಡು ಕೋಣಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ  ಭಟ್ಕಳ ನಗರದ ಗಣೇಶ ನಗರ ಪುರವರ್ಗ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಾಹನ ತಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ. 


COMMERCIAL BREAK
SCROLL TO CONTINUE READING

ಬಂಧಿತ ಆರೋಪಿಗಳನ್ನು ರಾಮ ಭಡ್ಕಾ ನಾಯ್ಕ ಹಡಿಲ್ ಸಬ್ಬತ್ತಿ ಜೋಳದ ಮೂಲೆ ನಿವಾಸಿ ಹಾಗೂ ರಾಮಚಂದ್ರ ಸುಬ್ಬ ನಾಯ್ಕ ಬೆಳೆಕೆ ಕಾನಮದ್ಲು ನಿವಾಸಿ ಎಂದು ತಿಳಿದು ಬಂದಿದೆ. 


ಇದನ್ನೂ ಓದಿ- ಮೊಬೈಲ್ ನೋಡುತ್ತಾ ರೈಲ್ವೆ ಹಳಿ ದಾಟುವ ವೇಳೆ ಅಪಘಾತ: ವಿದ್ಯಾರ್ಥಿನಿ ದಾರುಣ ಸಾವು


ಇವರು ವದೆ ಮಾಡಲು ಬೈಂದೂರಿನಿಂದ ಭಟ್ಕಳ ಕಡೆಗೆ 50,000 ಮೌಲ್ಯದ 02 ಕೋಣಗಳನ್ನು ಕಳುವು ಮಾಡಿಕೊಂಡು ಯಾವುದೇ ಪಾಸ್  ಪರವಾನಿಗೆ ಇಲ್ಲದೇ ಮಹೀಂದ್ರಾ ಬೊಲೆರೋ ಪಿಕಪ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕಾಲುಗಳನ್ನು ಹಗ್ಗದಿಂದ ಕಟ್ಟಿ ವಾಹನದಲ್ಲಿ ಸಾಗಾಟ ಮಾಡಿ ಕೊಂಡು ಹೋಗುತ್ತಿರುವಾಗ ಭಟ್ಕಳ ಶಹರದ ರಾಷ್ಟ್ರೀಯ ಹೆದ್ದಾರಿ-66 ರಸ್ತೆ ಗಣೇಶ ನಗರ ಪುರವರ್ಗ ಚೆಕ್ ಪೊಸ್ಟ್ ನಲ್ಲಿ ನಗರ ಠಾಣೆಯ ಪೋಲೀಸರು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ. 


ಇದನ್ನೂ ಓದಿ- ನಟ ದರ್ಶನ್ ವಿರುದ್ಧ ಸಾಗರದಲ್ಲಿ ಪ್ರತಿಭಟನೆ: ಕಠಿಣ ಶಿಕ್ಷೆಗೆ ಆಗ್ರಹ


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.