ಬೆಂಗಳೂರು: ನಿನ್ನೆ ಪಾಂಡಿಚೇರಿಯಿಂದ ಬೆಂಗಳೂರಿಗೆ ಕೆಎಸ್ಆರ್ಟಿಸಿ ಬಸ್ ಬರುತ್ತಿತ್ತು. ಪಾಂಡಿಚೇರಿಯಿಂದ ಬಸ್ ಏರಿದ್ದ ಇಬ್ಬರು ಆಸಾಮಿಗಳು ಮೊದಲಿಗೆ ನಾವು ಮೆಜೆಸ್ಟಿಕ್ ನಲ್ಲಿ ಇಳಿಯೋದಾಗಿ ಟಿಕೆಟ್ ತೆಗೆದುಕೊಂಡಿದ್ದರು. ಆದರೆ ಇಲೆಕ್ಟ್ರಾನಿಕ್ ಸಿಟಿ ಹತ್ತಿರ ಬರುತ್ತಿದ್ದಂತೆ ನಾವು ಇಲ್ಲಿಯೇ ಇಳಿಯುತ್ತೇವೆ. ಬಸ್ ನಿಲ್ಲಿಸಿ ಎಂದು ನಿರ್ವಾಹಕನಿಗೆ ಒತ್ತಾಯಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನು ಓದಿ-ಹಿಂದಿನ ಸರ್ಕಾರದ ಪ್ರಮುಖ ಹಗರಣಗಳ ತನಿಖೆ : ಮುಖ್ಯಮಂತ್ರಿ ಸಿದ್ದರಾಮಯ್ಯ


ಇದರಿಂದ ಅನುಮಾನಗೊಂಡ ನಿರ್ವಾಹಕ ಆರೋಪಿಗಳ ಬಳಿ ಇದ್ದ ಬ್ಯಾಗ್ ಪರಿಶೀಲಿಸಿದಾಗ ಸಹ ಪ್ರಯಾಣಿಕರ 5 ಲಕ್ಷ ಹಣವನ್ನು ದೋಚಿರುವುದು ಪತ್ತೆಯಾಗಿದೆ. ನಿರ್ವಾಹಕ ಮಂಜುನಾಥ್ ಈ ಹಣ ಯಾರದು ಎಂದು ಪ್ರಶ್ನಿಸಿದಾಗ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.‌ ಆಗಾ ನಿರ್ವಾಹಕ ಮಂಜುನಾಥ್ ಅರ್ಧ ಕಿಲೋಮೀಟರ್ ಚೇಸ್ ಮಾಡಿ ಶಾಹಾ ಅಲಾಂ ಎಂಬಾತನನ್ನು ಹಿಡಿದಿದ್ದಾರೆ.


ಮತ್ತೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಬಗ್ಗೆ ಚಾಲಕ ಹಾಗೂ ನಿರ್ವಾಹಕ ಕೆಎಸ್ಆರ್ಟಿಸಿ ಮೇಲ್ವಿಚಾರಕರಿಗೆ ತಿಳಿಸಿದಾಗ ಪೊಲೀಸರ ಗಮನಕ್ಕೆ ತಂದು ಐದು ಲಕ್ಷ ನಗದು ಆರೋಪಿಯನ್ನು ಖಾಕಿ ವಶಕ್ಕೆ ಒಪ್ಪಿಸಿದ್ದಾರೆ. ಸದ್ಯ ಸಮಯಪ್ರಜ್ಞೆ, ಚಾಣಾಕ್ಷತನದಿಂದ ಕಳ್ಳನನ್ನು ಹಿಡಿದ ಚಾಲಕ ಸೋಮಣ್ಣ ನಿರ್ವಾಹಕ ಮಂಜುನಾಥ್ ಕುರಿತು ನಗರ ಪೊಲೀಸ್ ಆಯುಕ್ತ ದಯಾನಂದ್ ಮೆಚ್ಚುಗೆ ವ್ಯಕ್ತಪಡಿಸಿ ನಗದು  ಪುರಸ್ಕಾರ ನೀಡಿ ಗೌರವಿಸಿದ್ದಾರೆ.


ಇದನ್ನು ಓದಿ-ವಿವಾಹಿತೆ ಜೊತೆ ಪೊಲೀಸಪ್ಪನ ವಿವಾಹೇತರ ಸಂಬಂಧ-ಮದುವೆಗೆ ಪಟ್ಟು ಹಿಡಿದಿದ್ದಕ್ಕೆ ನಾಪತ್ತೆ!!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l