ಪಿಜಿಗಳಲ್ಲಿ ಲ್ಯಾಪ್ಟಾಪ್ ಕಳ್ಳತನ: ಮೂವರನ್ನು ಬಂಧಿಸಿದ ಖಾಕಿ
ಆಂಧ್ರದ ಚಿತ್ತೂರಿನ ವಿ.ಕೋಟಾದ ಯುವರಾಜ್, ಪ್ರಭು ಹಾಗೂ ತಮಿಳುನಾಡಿನ ಸೆಲ್ವರಾಜ್ ಬಂಧಿತ ಆರೋಪಿಗಳಾಗಿದ್ದು, ಇನ್ನುಳಿದ ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬೆಂಗಳೂರು: ಹಾಡುಹಗಲೇ ಪಿ.ಜಿ.ಗಳಿಗೆ ನುಗ್ಗಿ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಕದಿಯುತ್ತಿದ್ದ ಮೂವರು ಖತರ್ನಾಕ್ ಖದೀಮರನ್ನ ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 16 ಲಕ್ಷ ಬೆಳೆಬಾಳುವ 50ಕ್ಕೂ ಹೆಚ್ಚು ಲ್ಯಾಪ್ ಟಾಪ್ ಹಾಗೂ 7 ಮೊಬೈಲ್ ಪೋನ್ ಗಳನ್ನ ಸೀಜ್ ಮಾಡಲಾಗಿದೆ.
ಆಂಧ್ರದ ಚಿತ್ತೂರಿನ ವಿ.ಕೋಟಾದ ಯುವರಾಜ್, ಪ್ರಭು ಹಾಗೂ ತಮಿಳುನಾಡಿನ ಸೆಲ್ವರಾಜ್ ಬಂಧಿತ ಆರೋಪಿಗಳಾಗಿದ್ದು, ಇನ್ನುಳಿದ ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ- ಮದುವೆ ಹಿಂದಿನ ದಿನ ಕೈ ಕೊಟ್ಟ ವರ: ಹುಡುಗನ ಮನೆ ಮುಂದೆ ಯುವತಿ ಧರಣಿ
ಏನಿದು ಪ್ರಕರಣ?
ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಪಿ.ಜಿ.ಗಳಲ್ಲಿ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಕಳ್ಳತನ ದೂರುಗಳು ಹೆಚ್ಚು ದಾಖಲಾಗಿದ್ದವು. ಹೀಗಾಗಿ ಖದೀಮರ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು.
ಕಳೆದ ತಿಂಗಳು 29 ರಂದು ಮತ್ತಿಕೆರೆ ಬಳಿ ಅನುಮಾನಸ್ಪಾದವಾಗಿ ಓಡಾಡುತ್ತಿದ್ದ ಆಂಧ್ರದ ಚಿತ್ತೂರಿನ ವಿ.ಕೋಟಾದ ಯುವರಾಜ್, ಪ್ರಭು ಎಂಬುವರನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಕದ್ದ ಏಳು ಮೊಬೈಲ್ ಗಳು ಪತ್ತೆಯಾಗಿದ್ದವು. ಹೆಚ್ಚಿನ ವಿಚಾರಣೆ ನಡೆಸಿದಾಗ ಆಂಧ್ರದಿಂದ ಬೆಂಗಳೂರಿಗೆ ಬಂದು ಲ್ಯಾಪ್ ಟಾಪ್ ಕದಿಯುತ್ತಿದ್ದರು ಎಂಬುದು ಗೊತ್ತಾಗಿದೆ. ಇಬ್ಬರು ನೀಡಿದ ಮಾಹಿತಿ ಮೇರೆಗೆ ಚಿತ್ತೂರಿನಲ್ಲಿ ಆರೋಪಿಗಳಿಂದ ಕದ್ದ ಲ್ಯಾಪ್ ಟಾಪ್ ಸ್ವೀಕರಿಸುತ್ತಿದ್ದ ಸೆಲ್ವರಾಜ್ ನನ್ನ ಬಂಧಿಸಲಾಗಿದೆ.
ಇದನ್ನೂ ಓದಿ- ಚಿಕ್ಕಬಳ್ಳಾಪುರ ಬಳಿ ಭೀಕರ ಅಪಘಾತ: ನಾಲ್ವರು ಯುವಕರು ಸ್ಥಳದಲ್ಲೇ ದುರ್ಮರಣ..!
ಕಳೆದ ಎರಡು ವರ್ಷಗಳಿಂದ ಆರೋಪಿಗಳು ಕಳ್ಳತನ ಮಾಡುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು ಹೆಚ್ಚು ವಾಸವಾಗಿರುವ ಪಿ.ಜಿ ಹಾಗೂ ಹಾಸ್ಟೆಲ್ ಗಳನ್ನ ಗುರಿಯಾಗಿರಿಸಿಕೊಂಡಿದ್ದರು. ಒಂದು ಲ್ಯಾಪ್ ಟಾಪ್ ಅನ್ನು ಸುಮಾರು 15-ರಿಂದ 20 ಸಾವಿರ ರೂ.ಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಆರೋಪಿಗಳ ಬಂಧನದಿಂದ ಯಶವಂತಪುರ, ಸೋಲದೇವನಹಳ್ಳಿ ಹಾಗೂ ಗಂಗಮಮ್ಮನಗುಡಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 20 ಹೆಚ್ಚು ಲ್ಯಾಪ್ ಟಾಪ್ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.