ಹಾಸನ: ಜಿಲ್ಲಾ ಪೊಲೀಸರ ಮಿಂಚಿನ ಕಾರ್ಯಚರಣೆಯಲ್ಲಿ ಸುಮಾರು 60 ಲಕ್ಷ ಮೌಲ್ಯದ 148 ಮೊಬೈಲ್ ಗಳನ್ನು ಪತ್ತೆ ಮಾಡಿ ವಶಪಡಿಸಿಕೊಂಡು ವಾರಸ್ತುದಾರರಿಗೆ ವಾಪಸ್ ಕೊಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.


COMMERCIAL BREAK
SCROLL TO CONTINUE READING

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್,  ವಿವಿಧ ರೀತಿಯಲ್ಲಿ ಸಾರ್ವಜನಿಕರು ಕಳೆದುಕೊಂಡ ಇಲ್ಲವೇ ಕಳ್ಳತನವಾಗಿದ್ದ ಸುಮಾರು 60 ಲಕ್ಷ ಮೌಲ್ಯದ 148 ಮೊಬೈಲ್ ಗಳನ್ನು ಪತ್ತೆ ಮಾಡಿ ಅದರ ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದು ಮಾಹಿತಿ ನೀಡಿದರು. 


ಹಾಸನ ಜಿಲ್ಲಾ ಎಸ್‌ಪಿ ಹರಿರಾಂ ಶಂಕರ್ ನೇತೃದಲ್ಲಿತ್ವದಲ್ಲಿ ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ಬರೊಬ್ಬರಿ 148 ಮೊಬೈಲ್ ಫೋನ್ ದಸ್ತಗಿರಿ ಮಾಡಲಾಗಿದೆ. ಕಳೆದ ಒಂದು ತಿಂಗಳಲ್ಲಿ ದಾಖಲಾದ ದೂರುಗಳ ಬೆನ್ನತ್ತಿದ ಸಿಬ್ಬಂದಿ ಆನ್‌ಲೈನ್ ಪೋರ್ಟಲ್ ಮೂಲಕ ನೋಂದಣಿಯಾಗಿದ್ದ ದೂರುಗಳ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಿದ್ದಾರೆ. ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿಯೂ ಕಾರ್ಯಾಚರಣೆ ನಡೆಸಿ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಮೊಬೈಲ್ ಕಳೆದುಕೊಂಡಿದ್ದ ಮಾಲೀಕರು ಮೊಬೈಲ್ ವಾಪಾಸ್ ಪಡೆದು ಸಂತಸ ವ್ಯಕ್ತಪಡಿಸಿದ್ದಾರೆ. 


ಇದನ್ನೂ ಓದಿ- ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ತಪ್ಪದೇ ಈ 5 ವಿಷಯಗಳ ಬಗ್ಗೆ ಗಮನಹರಿಸಿ


ಮೊಬೈಲ್ ಕಳೆದುಹೋದರೆ ತಕ್ಷಣ ಈ ಕೆಲಸ ಮಾಡಿ: 
ಇನ್ನೂ ಯಾರೇ ಆದರೂ ತಮ್ಮ ಸ್ಮಾರ್ಟ್ ಫೋನ್ ಕಳೆದುಕೊಂಡಲ್ಲಿ ಇಂತಹ ಮೊಬೈಲ್ ಗಳನ್ನು ಪತ್ತೆ ಹಚ್ಚಲು ಮೊಬೈಲ್ 8277959500  ಸಂಖ್ಯೆಗೆ ವಾಟ್ಸಾಪ್ ನಲ್ಲಿ ಹಾಯ್ ಎಂದು ಮೆಸೆಜು ಕಳುಹಿಸಿದರೇ ಸಾಕು ಒಂದು ಲಿಂಕ್ ವಾಪಸ್ ಬರುತ್ತದೆ. ಅದನ್ನು ಭರ್ತಿ ಮಾಡಿ ಸಬ್ಮಿಟ್ ಮಾಡುವ ಅಪ್ಲಿಕೇಶನ್ ಸೌಲಭ್ಯ ಸಿಗುತ್ತದೆ. ಮೊಬೈಲ್ ಕಳೆದುಕೊಂಡವರು 2023 
ಏಪ್ರಿಲ್ 25ರಿಂದ ಇಲ್ಲಿವರೆಗೂ ಈ ಅಪ್ಲಿಕೇಶನ್ ಉಪಯೋಗಿಸಿದ ಹಾಸನ ಜಿಲ್ಲೆಯ ವಿವಿಧ ಭಾಗಗಳಿಂದ ಒಟ್ಟು 365 ರಿಕ್ವೆಸ್ಟ್ ಗಳು ಬಂದಿದ್ದು, ಸಂಬಂಧಪಟ್ಟ ಪೊಲೀಸ್ ಠಾಣೆಯವರು ಗಮನಹರಿಸಿದ್ದಾರೆ ಎಂದರು. 


ಇಂತಹ ಲಿಂಕ್ ಮೂಲಕ ಇಲ್ಲಿಯವರೆಗೂ ವಿವಿಧ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರು 1418 ಮೊಬೈಲ್ಗಳ ಮಾಹಿತಿಯನ್ನು ಭರ್ತಿ ಮಾಡಿದ್ದಾರೆ. ಅವುಗಳಲ್ಲಿ ಇದುವರೆಗೂ 148 ಮೊಬೈಲ್ ಗಳನ್ನು ಪತ್ತೆ ಮಾಡಲಾಗಿದೆ. ಈಗಾಗಲೆ 22 ಮೊಬೈಲ್ ಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ನೀಡಲಾಗಿದೆ. ಎಲ್ಲಾ ಮೊಬೈಲ್ ಗಳನ್ನು ದೇಶದ ವಿವಿಧ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಕರ್ನಾಟಕದಾದ್ಯಂತ ನಾನಾ ಜಿಲ್ಲೆಗಳಿಂದ ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.


ಒಟ್ಟು 148 ಮೊಬೈಲ್ ಗಳ ಪೈಕಿ ವಿವೋ ಕಂಪನಿಯ 74 ಮೊಬೈಲ್, ಸಾಮ್ ಸಾಂಗ್ ಕಂಪನಿಯ 25, ರೆಡ್ಮಿಕಂಪನಿಯ 33, ಒನ್ ಪ್ಲಸ್ ಕಂಪನಿಯ 11, ಹಾನರ್ ಕಂಪನಿಯ 2, ನೋಕಿಯಾ ಕಂಪನಿಯ 3 ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಸಿಯರ್ ಪೋರ್ಟಲ್ ಟ್ರ್ಯಾಕ್ ಆಗಿರುವ 123 ಮೊಬೈಲ್ ಗಳ ಬಗ್ಗೆ ಮಾಹಿತಿ ಇದ್ದು, ಪತ್ತೆಗಾಗಿ ಪ್ರಯತ್ನ ಮುಂದುವರೆಸಲಾಗಿದೆ ಎಂದರು. 


ಇದನ್ನೂ ಓದಿ- ನಿಮ್ಮ ಮೊಬೈಲ್ ಕಳೆದು ಹೋದ್ರೆ ಹೆದರಬೇಡಿ, ಜಸ್ಟ್ ಈ ಕೆಲಸ ಮಾಡಿದ್ರೆ ಅಷ್ಟೇ ಸಾಕು!​


ಇದೇ ವೇಳೆ ssಸಿಯರ್ ಪೋರ್ಟಲ್ ಮೂಲಕ ಮೊಬೈಲ್‌ಗಳ ಪತ್ತೆಗಾಗಿ ಶ್ರಮಿಸಿದ ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಜಗದೀಶ್ ಹಾಗೂ ಸಿಬ್ಬಂದಿಗಳು ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ಪೀರ್ ಖಾನ್ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಅವರು ಶ್ಲಾಘಿಸಿದರು.  ಇದೆ ವೇಳೆ ಡಿವೈಎಸ್ಪಿ ಮಂಜುನಾಥ್, ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಜಗದೀಶ್ ಇತರರು ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.