50 ವರ್ಷದ ವಿವಾಹಿತನ ಮೇಲೆ ಕಾಲೇಜು ವಿದ್ಯಾರ್ಥಿನಿಗೆ ಲವ್! ಕೆರೆಗೆ ಹಾರಿ ಆತ್ಮಹತ್ಯೆ?
ಇಬ್ಬರು ನಾಪತ್ತೆಯಾಗಿರುವ ವಿಷಯ ತಿಳಿದು ಕುಟುಂಬಸ್ಥರು ತೀವ್ರ ಶೋಧ ನಡೆಸಿದ್ದಾರೆ. ಆದರೆ ಮಾವತ್ತೂರು ಕೆರೆಯ ದಡದಲ್ಲಿ ಕಾರು, ಇಬ್ಬರ ಚಪ್ಪಲಿ, ಮೊಬೈಲ್ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
19 Loves 50 in Tumakuru: 50 ವರ್ಷದ ವಿವಾಹಿತ ಪುರುಷನೊಂದಿಗೆ 19 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆಯ ಬಳಿ ಅವರ ಚಪ್ಪಲಿಗಳು ಶನಿವಾರ ಪತ್ತೆಯಾಗಿದ್ದು, ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಕೋಳಾಲ ಹೋಬಳಿ ಲಕ್ಕಯ್ಯನಪಾಳ್ಯದ ಅನನ್ಯ (19) ಎಂಬ ವಿಧ್ಯಾರ್ಥಿನಿ ರಂಗಶಾಮಣ್ಣ (50) ಎಂಬುವರನ್ನು ಪ್ರೀತಿಸುತ್ತಿದ್ದಳು. ಆದರೆ ಇದಕ್ಕೆ ಕುಟುಂಬದವರು ವಿರೋಧಿಸಿದ ಕಾರಣ ಪ್ರಿಯಕರನ ಜೊತೆಗೆ ಯುವತಿ ಕಳೆದ ೩ ದಿನಗಳ ಹಿಂದೆ ಕಾರಿನಲ್ಲಿ ಓಡಿಹೋಗಿದ್ದಳು.
ಇದನ್ನೂ ಓದಿ: ವ್ಯಕ್ತಿಯ ಖಾಸಗಿ ಭಾಗಕ್ಕೆ ಕಚ್ಚಿದ ಹಾವು..! ಮುಂದೇನಾಯ್ತು.. ವಿಡಿಯೋ ನೋಡಿ..
ಇಬ್ಬರು ನಾಪತ್ತೆಯಾಗಿರುವ ವಿಷಯ ತಿಳಿದು ಕುಟುಂಬಸ್ಥರು ತೀವ್ರ ಶೋಧ ನಡೆಸಿದ್ದಾರೆ. ಆದರೆ ಮಾವತ್ತೂರು ಕೆರೆಯ ದಡದಲ್ಲಿ ಕಾರು, ಇಬ್ಬರ ಚಪ್ಪಲಿ, ಮೊಬೈಲ್ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಕೋಳಾಲ ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಬೋಟ್ ಸಹಾಯದಿಂದ ಹುಡುಕಾಟ ನಡೆಸಿದ್ದಾರೆ. ಜೊತೆಗೆ ಈಜು ಪಟುಗಳನ್ನು ಕರೆಯಿಸಿ ಕೆರೆಯಲ್ಲಿ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಕೊರಟಗೆರೆ ಪೊಲೀಸ್ ಠಾಣೆಯ ಸಿಪಿಐ ಅನಿಲ್, ಕೋಳಾಲ ಪಿಎಸ್‌ಐ ರೇಣುಕಾ ಯಾದವ್ ಹಾಗೂ ಯೋಗೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ: ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ 56ರ ವ್ಯಕ್ತಿಯ ಮೂಗು ಮುರಿಯವಂತೆ ಹೊಡೆದ ತಾಯಿ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.