ಕ್ರೈಂ ಸ್ಟೋರಿಯಾದ ಪ್ರೇಮ ಪುರಾಣ: ಗೆಳತಿಯೊಂದಿಗೆ ಆಕೆಯ ತಂದೆಯನ್ನೂ ಕೊಂದ ಪಾಪಿ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ?
Crime : ಪ್ರೀತಿ ಸಂಬಂಧದಿಂದ ಪೋಲಿಸ್ ಕಾನ್ಸ್‌ಟೇಬಲ್ ಒಬ್ಬ ತನ್ನ ಗೆಳತಿಗೆ ಗುಂಡು ಹಾರಿಸಿ ನಂತರ ಆಕೆಯ ತಂದೆಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ನಡೆದಿದೆ.
Shajapur : ಆರೋಪಿಯಾದ ಕಾನ್ಸ್‌ಟೇಬಲ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇವನು ಮೊದಲು ತನ್ನ ಪ್ರೇಯಸಿಗೆ ಗುಂಡುಹಾರಿಸಿ ನಂತರ ಆಕೆಯ ತಂದೆಯನ್ನು ಕೊಲೆಮಾಡಿ ರೈಲಿಗೆ ಸಿಲುಕಿ ತಾನು ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆರೋಪಿ ಸ್ಥಾನದಲ್ಲಿರುವ ಪೋಲಿಸ್ ಪೇದೆಯು 26 ವರ್ಷದ ಸುಭಾಷ್ ಖರಾಡಿ, ಬರ್ಚಾ ಪೋಲಿಸ್ ಠಾಣೆ ವ್ಯಾಪ್ತಿಯ ಮಲಖೇಡಿಯಲ್ಲಿ 55 ವರ್ಷ ವಯಸ್ಸಿನ ಜೈಕರ್‌ಶೇಖ್ ಅವರ ನಿವಾಸಕ್ಕೆ ದೇಶೀ ನಿರ್ಮಿತ ಬಂದೂಕಿನೊಂದಿಗೆ ಸೋಮವಾರ ಮಧ್ಯರಾತ್ರಿ 1 ಗಂಟೆಗೆ ಹೋಗಿ, ಜೈಕರ್ ಹಾಗೂ ಅವರ 25 ವರ್ಷದ ಮಗಳ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ. ದುರದೃಷ್ಟವಶಾತ್ ಜೈಕರ್ ಘಟನಾ ಸ್ಥಳದಲ್ಲಿಯೇ ಸಾವನ್ನಪ್ಪಿದರು. ಅವರ ಮಗಳನ್ನು ಚಿಕಿತ್ಸೆಗಾಗಿ ಇಂದೋರ್‌ನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಇದರ ಬಳಿಕ ರೈಲ್ವೆ ಹಳಿ ಮೇಲೆ ಸುಭಾಷ್ ಖರಾಡಿ ಮೃತದೇಹ ಪತ್ತೆಯಾಗಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ-Loksabha Election: 2024ರ ಲೋಕಸಭೆ ಚುನಾವಣೆಗೆ ಮಾಜಿ ಪಿಎಂ ದೇವೇಗೌಡರ ಕ್ಷೇತ್ರ ಇದೇನಾ?
ಪ್ರೇಮ ಸಂಬಂಧದಿಂದಾಗಿ ಈ ರೀತಿಯ ದುರಂತ ಸಾವು ನೋವುಗಳು ಸಂಭವಿಸಿವೆ ಎಂದು ತನಿಖಾ ಮೂಲಗಳು ತಿಳಿಸಿದ್ದು, ಆದಾಗ್ಯೂ ಪೋಲಿಸರು ಈ ವಿಚಾರವಾಗಿ ಇನ್ನು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ-ಬೆಂಗಳೂರಿನಲ್ಲಿ BPL ಕಾರ್ಡ್ ಗೆ ಫುಲ್ ಡಿಮ್ಯಾಂಡ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.