ಬೆಂಗಳೂರು: ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಮಾದೇಶ ಸಿನಿಮಾ ನಿರ್ಮಾಪಕ ಗೋವರ್ಧನ್‌ ಮೂರ್ತಿಗೆ ಸುಪ್ರೀಂ‌ಕೋರ್ಟ್ ಜಾಮೀನು  ಮಂಜೂರು ಮಾಡಿದೆ.


COMMERCIAL BREAK
SCROLL TO CONTINUE READING

2008 ಅಕ್ಟೋಬರ್‌ 7ರಂದು ಮಧ್ಯರಾತ್ರಿ ಕುಡಿದ ಮತ್ತಿನಲ್ಲಿ  ಬಾಗಲೂರಿನ ಫಾರ್ಮ್‌ಹೌಸ್‌ನಲ್ಲಿ ನಟ ವಿನೋದ್‌ ಎಂಬಾತನ ಮೇಲೆ ಶೂಟ್ ಮಾಡಿ ಕೊಂದಿದ್ದ ಗೋವರ್ಧನ್ ಮೂರ್ತಿಗೆ 2012ರಲ್ಲಿ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿತ್ತು.


ಇದನ್ನೂ ಓದಿ- ADGP Alok Kumar : ಬೆಳ್ಳಾರೆ ಪ್ರವೀಣ್ ಕೊಲೆ ಕೇಸ್ : ಆರೋಪಿಗಳ ಆಸ್ತಿ ಮುಟ್ಟುಗೋಲು


2008ರಲ್ಲಿ ಇಡೀ ಬೆಂಗಳೂರನ್ನೇ ನಡುಗಿಸಿದ್ದ ವಿನೋದ್‌ ಕೊಲೆ ಪ್ರಕರಣದಲ್ಲಿ ಶೂಟ್ ಮಾಡಿ ಗೋವರ್ಧನ್ ಕೇರಳದಲ್ಲಿ ತಲೆ ಮರೆಸಿಕೊಂಡಿದ್ದ.  ಬಳಿಕ ಅವನನ್ನು ಬಂಧಿಸಲಾಗಿತ್ತು. 6 ವರ್ಷ 2 ತಿಂಗಳು ಜೈಲು ಶಿಕ್ಷೆ ಅನುಭವಿಸಿರುವ ಗೋವರ್ಧನ್ ಮೂರ್ತಿಗೆ ಸದ್ಯ ಬಿಡುಗಡೆ ಭಾಗ್ಯ ಸಿಕ್ಕಿದೆ. 


ಇದನ್ನೂ ಓದಿ- Bangalore Crime : ಕೊಟ್ಟಿದ್ದು ಕೋಟಿ ಕೋಟಿ ವರದಕ್ಷಿಣೆ : ಅನುಭವಿಸಿದ್ದು ನರಕಯಾತನೆ!


ಇದೀಗ  ಗೋವರ್ಧನ್ ಮೂರ್ತಿಗೆ ಜಾಮೀನು ಮಂಜೂರಾಗಿದ್ದು ಇನ್ನು ಮೂರು ನಾಲ್ಕು ದಿನದಲ್ಲಿ ಜೈಲಿಂದ ಗೋವರ್ದನ್‌ ಮೂರ್ತಿ ಬಿಡುಗಡೆಯಾಗಲಿದ್ದಾನೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.