ಬೆಂಗಳೂರು : ಟೀ, ಸಿಗರೇಟ್ ಗೆ ಸಾಲ ಮಾಡಿದ್ದ ಆಸಾಮಿಯೊಬ್ಬ ಸಾಲ ವಾಪಾಸ್ ಕೇಳಿದ್ದಕ್ಕೆ ಕಾಂಡಿಮೆಂಟ್ಸ್ ಮಾಲೀಕ ಮತ್ತು ಆತನ ಫ್ಯಾಮಿಲಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ. ಸದ್ಯ  ಆರೋಪಿಯನ್ನ ಕೆಂಗೇರಿ ಠಾಣಾ ಪೊಲೀಸರು ಬಂಧಿಸಿದ್ದಾರೆ‌. 


COMMERCIAL BREAK
SCROLL TO CONTINUE READING

ಕೆಂಗೇರಿ ಉಪನಗರದ ಚೌಡೇಶ್ವರಿ ಕಾಂಡಿಮೆಂಟ್ಸ್ ಮಾಲೀಕ ಶಿವಕುಮಾರ್, ಆತನ ಪತ್ನಿ, ಮಗುವಿನ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿ ಟಿಪ್ಪು ಎಂಬಾತನನ್ನು ಕೆಂಗೇರಿ ಠಾಣಾ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.


ಇದನ್ನೂ ಓದಿ- 30 ಮಂದಿ ಚರಂಡಿಯಲ್ಲಿದ್ದೇವೆ ಕಾಪಾಡಿ!: ಗಾಂಜಾ ಮತ್ತಿನಲ್ಲಿದ್ದವನ ಮಾತಿಗೆ ಹೈರಾಣದ ಅಗ್ನಿಶಾಮಕ ಸಿಬ್ಬಂದಿ


ಶಿವಕುಮಾರ್ ಅಂಗಡಿಗೆ ಬರುತ್ತಿದ್ದ ಆರೋಪಿ ಆಗಾಗ ಟೀ, ಸಿಗರೇಟ್ ಪಡೆದು ಸಾಲ ಹೇಳಿ ಹೋಗುತ್ತಿದ್ದ‌. ಅದೇ ರೀತಿ ಜನವರಿ 10ರಂದು ಮಧ್ಯಾಹ್ನ ಅಂಗಡಿಗೆ ಬಂದಿದ್ದ ಆರೋಪಿಯ ಬಳಿ ಶಿವಕುಮಾರ್, ಹಳೆಯ ಸಾಲ 950/- ಬಾಕಿ ಇದೆ ಕೊಡು ಎಂದು ಕೇಳಿದ್ದಾರೆ.  ಇದರಿಂದ ರೊಚ್ಚಿಗೆದ್ದ ಟಿಪ್ಪು  'ನನಗೆ ಹಣ ಕೇಳುತ್ತೀಯಾ? ನಾನ್ಯಾರು ಅಂತಾ ಸಾಯಂಕಾಲ ತೋರಿಸುತ್ತೇನೆ' ಎಂದು ಅಲ್ಲಿಂದ ವಾಪಾಸಾಗಿದ್ದ. ಅದೇ ದಿನ ಸಂಜೆ ಇನ್ನೂ ಮೂವರೊಂದಿಗೆ ಕಾರಿನಲ್ಲಿ‌ ಬಂದಿದ್ದ ಆರೋಪಿ ಟೀ ಕೇಳಿದಾಗ, ಸಾಲ ಪಾವತಿಸುವಂತೆ ಶಿವಕುಮಾರ್ ಮತ್ತೆ ಕೇಳಿದ್ದರು. ಈ ವೇಳೆ ಸಿಟ್ಟಿಗೆದ್ದ ಆರೋಪಿ ಅಂಗಡಿಯೊಳಗೆ ನುಗ್ಗಿ ಶಿವಕುಮಾರ್ ಮುಖಕ್ಕೆ ಪಂಚ್ ಮಾಡಿದ್ದಾನೆ. ಶಿವಕುಮಾರ್ ರಕ್ಷಣೆಗೆ ಬಂದ ಆತನ ಪತ್ನಿ ಹಾಗೂ‌ ಮಗನನ್ನೂ ತಳ್ಳಿ ಇಟ್ಟಿಗೆಯಿಂದ ಹೊಡೆದು ಆರೋಪಿ ಸ್ಥಳದಿಂದ ಪರಾರಿಯಾಗಿದ್ದ.


ಇದನ್ನೂ ಓದಿ- WATCH : ನಡುರಸ್ತೆಯಲ್ಲಿ ಯುವತಿಗೆ ಹೆಲ್ಮೆಟ್‌ನಿಂದ ಹಿಗ್ಗಾಮುಗ್ಗ ಹೊಡೆದ ಯುವಕ, ವಿಡಿಯೋ ವೈರಲ್‌


ಈ ಬಗ್ಗೆ ಕಾಂಡಿಮೆಂಟ್ಸ್ ಮಾಲೀಕ ಶಿವಕುಮಾರ್ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಕೆಂಗೇರಿ ಠಾಣಾ ಪೊಲೀಸರು ಆರೋಪಿ ಟಿಪ್ಪುನನ್ನು ಬಂಧಿಸಿದ್ದು, ಉಳಿದ  ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ‌.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.